Homekundapuraಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ; ಒಂದೇ ತಿಂಗಳಲ್ಲಿ ₹1.90 ಕೋಟಿ ಕಾಣಿಕೆ ಸಂಗ್ರಹ

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ; ಒಂದೇ ತಿಂಗಳಲ್ಲಿ ₹1.90 ಕೋಟಿ ಕಾಣಿಕೆ ಸಂಗ್ರಹ

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಕಾಣಿಕೆಯ ಹುಂಡಿಯಲ್ಲಿ ಕೇವಲ ಒಂದು ತಿಂಗಳಲ್ಲಿ ₹1.90 ಕೋಟಿ ಕಾಣಿಕೆ ಸಂಗ್ರಹವಾಗಿದೆ.


ಇದು, ದೇವಸ್ಥಾನದ ಇತಿಹಾಸದಲ್ಲೇ ಒಂದು ತಿಂಗಳಲ್ಲಿ ಸಂಗ್ರಹವಾದ ಗರಿಷ್ಠ ಮೊತ್ತವಾಗಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಬಾಬು ಶೆಟ್ಟಿ ತಗ್ಗರ್ಸೆ ಹಾಗೂ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಶೆಟ್ಟಿ ತಿಳಿಸಿದ್ದಾರೆ.


ಒಟ್ಟು 41 ಹುಂಡಿಗಳನ್ನು ತೆರೆಯಲಾಗಿದ್ದು ₹1,90,43,819 ಕಾಣಿಕೆ, ₹4,00,354 ಮೌಲ್ಯದ 0.325 ಗ್ರಾಂ ಚಿನ್ನ, 2.370 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ.


ಫೆಬ್ರವರಿ ತಿಂಗಳಲ್ಲಿ ₹1.47 ಕೋಟಿ, ಮಾರ್ಚ್ನಲ್ಲಿ ₹80 ಲಕ್ಷ ಹಾಗೂ ಏಪ್ರಿಲ್‌ನಲ್ಲಿ ₹70 ಲಕ್ಷ ಸಂಗ್ರಹವಾಗಿತ್ತು. ಈ ಬಾರಿ ಬೇಸಿಗೆ ರಜೆಯಲ್ಲಿ ಪ್ರತಿದಿನ ಸರಾಸರಿ 30 ಸಾವಿರ ಭಕ್ತರು ದೇವಳಕ್ಕೆ ಭೇಟಿ ನೀಡಿದ್ದರು ಎಂದೂ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments