HomeFresh Newsಮೇ 30-31 : ಮಣೆಲ್ ಗ್ರಾಮೊಡೊಂಜಿ ಚಿತ್ರ ಕೂಟೊ(ಕುಂಚದಲ್ಲಿ ಗ್ರಾಮದ ವೈಶಿಷ್ಟ್ಯತೆಯ ದಾಖಲೀಕರಣ)

ಮೇ 30-31 : ಮಣೆಲ್ ಗ್ರಾಮೊಡೊಂಜಿ ಚಿತ್ರ ಕೂಟೊ(ಕುಂಚದಲ್ಲಿ ಗ್ರಾಮದ ವೈಶಿಷ್ಟ್ಯತೆಯ ದಾಖಲೀಕರಣ)

ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಅಬ್ಬಕ್ಕ ರಾಣಿಯ ಅರಮನೆ ಇದ್ದಂತಹ ಮಣೇಲ್ ಗ್ರಾಮದಲ್ಲಿ ‘ಮಣೆಲ್ ಗ್ರಾಮೊಡೊಂಜಿ ಚಿತ್ರ ಕೂಟೊ’ ಕಾರ್ಯಕ್ರಮ ಮೇ 30 ಹಾಗೂ 31 ರಂದು ನಡೆಯಲಿದೆ.
ಮಂಗಳೂರು ತಾಲೂಕಿನ ಗುರುಪುರ ಸಮೀಪದ ಮಣೆಲ್ ಗ್ರಾಮದ ಚಾರಿತ್ರಿಕ ಹಾಗೂ ಮಹತ್ವದ ಸ್ಥಳಗಳನ್ನು ಮತ್ತು ಗ್ರಾಮದ ಕುಲ ಕಸಬುಗಳನ್ನು ಚಿತ್ರಗಳ ಮೂಲಕ ದಾಖಲೀಕರಣ ಮಾಡುವ ಈ ಕಾರ್ಯಕ್ರಮದ ಉದ್ಘಾಟನೆಯು ಮೇ 30ರ ಬೆಳಿಗ್ಗೆ 10.00 ಗಂಟೆಗೆ ಮಣೇಲ್ ಶ್ರೀ ಲಕ್ಮ್ಷಿ ವೆಂಕಟರಮಣ ದೇವಸ್ಥಾನದ ಸಭಾಂಗಣದಲ್ಲಿ ನಡೆಯಲಿದೆ.


ಇಂಟಾಕ್ ಮಂಗಳೂರು ವಿಭಾಗ ಹಾಗೂ ರಾಣಿ ಅಬ್ಬಕ್ಕ ಚಾವಡಿ ಮಣೆಲ್ ಇವರ ಸಹಯೋಗದಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ಹಿರಿಯ ಚಿತ್ರ ಕಲಾವಿದ ಗಣೇಶ್ ಸೋಮಯಾಜಿ ಅವರು ಉದ್ಘಾಟಿಸುವರು. ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಕಟ್ಟೆಮಾರ್ ವಂಶಸ್ಥ ಪ್ರಶಾಂತ್ ಕುಮಾರ್ ಕಟ್ಟೆಮಾರ್ , ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಟ್ರಸ್ಟಿ ವಾಮನ ನಾಯಕ್ , ಮಣೆಲ್ ಜುಮ್ಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ರಜಾಕ್ , ಅಕಾಡೆಮಿ ಸದಸ್ಯ ಬೂಬ ಪೂಜಾರಿ ಮಣೇಲ್ ಉಪಸ್ಥಿತರಿರುವರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಇತಿಹಾಸ ತಜ್ಞ ಡಾ.ಪುಂಡಿಕಾಯ್ ಗಣಪಯ್ಯ ಭಟ್ ಅವರು ‘ಮಣೆಲ್ ಗ್ರಾಮದಲ್ಲಿ ಅಬ್ಬಕ್ಕನ ಚರಿತ್ರೆ’ ಹಾಗೂ ನಿವೃತ್ತ ಉಪನ್ಯಾಸಕ ಪ್ರೊ.ಅಕ್ಷಯ ಕುಮಾರ್ ಅವರು ಮಣೆಲ್ ಗ್ರಾಮದ ಸಾಮಾಜಿಕ ಸಾಂಸ್ಕ್ರತಿಕ ನೆಲೆಯ ಕುರಿತು ಉಪನ್ಯಾಸ ನೀಡಲಿದ್ದಾರೆ.
2 ದಿನಗಳ ಕಾಲ ನಡೆಯುವ ಚಿತ್ರ ಕೂಟದಲ್ಲಿ ಜಿಲ್ಲೆಯ 15 ಮಂದಿ ಚಿತ್ರ ಕಲಾವಿದರು ಭಾಗವಹಿಸಲಿದ್ದಾರೆ ಎಂದು ಅಕಾಡೆಮಿ ಪ್ರಕಟಣೆ ತಿಳಿಸಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments