HomeFresh Newsಮಗಳ ವಿವಾಹ ದಿನದಂದೇ ತಂದೆ ಹೃದಯಾಘಾತದಿಂದ ಮೃತ್ಯು

ಮಗಳ ವಿವಾಹ ದಿನದಂದೇ ತಂದೆ ಹೃದಯಾಘಾತದಿಂದ ಮೃತ್ಯು

ಕೊಣಾಜೆ: ಬೋಳಿಯಾರ್ ನ ಕುಚುಗುಡ್ಡೆಯಲ್ಲಿ ಮಗಳ ಮದುವೆಯ ದಿನದಂದೇ ತಂದೆ ಹೃದಯಘಾತಗೊಂಡು ಮೃತಪಟ್ಟ ಘಟನೆ ಸೋಮವಾರ ಮುಂಜಾವು ಸಂಭವಿಸಿದೆ.
ಮೃತಪಟ್ಟ‌ ವ್ಯಕ್ತಿಯನ್ನು ಬೋಳಿಯಾರ್ ನ ಕುಕ್ಕೋಟ್ಟು ಕುಚುಗುಡ್ಡೆಯ ಹಸನಬ್ಬ (60) ಎಂದು ಗುರುತಿಸಲಾಗಿದೆ. ಹಸನಬ್ಬ ಅವರ ಮಗಳಿಗೆ ಕಾಸರಗೋಡುವಿನ ಯುವಕನೊಂದಿಗೆ ಸೋಮವಾರದಂದು ಹೊಸಂಗಡಿಯ ಸಭಾಂಗಣವೊಂದರಲ್ಲಿ ಮದುವೆ ನಿಗಧಿಯಾಗಿತ್ತು.‌

ದುರದೃಷ್ಟವಶಾತ್ ಭಾನುವಾರಂದು ಹಸನಬ್ಬರಿಗೆ ಸೋಮವಾರ ಮುಂಜಾವಿನ 4 ಗಂಟೆಯ ವೇಳೆಗೆ ತೀವ್ರ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯುವ ಪಯತ್ನ ಮಾಡಿದರೂ ಯಾವುದೇ ಪ್ರಯೋಜನವಾಗದೆ ಹೃದಯಾಘಾತದಿಂದ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇವರು ಕುಕ್ಕೋಟ್ಟು ಜುಮಾ ಮಸೀದಿಯ ಕೋಶಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಇವರಿಗೆ ಎರಡು ಗಂಡು ಹಾಗೂ ನಾಲ್ಕು ಪುತ್ರಿಯರಿದ್ದಾರೆ. ಸಭಾಂಗಣದಲ್ಲಿ ಮದುವೆ ಕಾರ್ಯಕ್ರಮ ರದ್ದುಗೊಳಿಸಸಲಾಗಿತ್ತು ಹಾಗೂ ಎರಡು ಕುಟುಂಬದ ಹಿರಿಯರೊಂದಿಗೆ ಚರ್ಚಿಸಿ ಸಂಜೆಯ ವೇಳೆಗೆ ವರನ ಮನೆಯಲ್ಲಿ ಸರಳವಾಗಿ ನಿಖಾ‌ ನೆರವೇರಿದೆ ಎಂದು ತಿಳಿದು ಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments