ತೋಟ ಬೆಂಗ್ರೆ ಜನರಲ್ ಸ್ಟೋರ್ ಗೆ ಬೆಂಕಿ- ಬೆಂಕಿ ನಂದಿಸಲು ಸ್ಥಳೀಯರ ಹರಸಾಹಸ

ಮಂಗಳೂರಿನ ತೋಟ ಬೆಂಗ್ರೆ ಪರಿಸರದ ಜನರಲ್ ಸ್ಟೋರ್ ಗೆ ಬೆಂಕಿಸರಿಸುಮಾರು 2 ಘಂಟೆ ರಾತ್ರಿ ಜನರಲ್ ಸ್ಟೋರ್‍ಗೆ ಬೆಂಕಿ ಕಾಣಿಸಿದ್ದು ಇದ್ದನ್ನು ಗಮನಿಸಿದ್ದ ಸ್ಥಳೀಯರು ಕದ್ರಿ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ತಮ್ಮಿಂದ ಆಗುವಷ್ಟು ಸ್ಥಳಿಯರೇ ನಂದಿಸುವಲ್ಲಿ ಕಾರ್ಯದಲ್ಲಿ ತೊಡಗಿದ್ದರು. ಬಳಿಕ ಬಂದ ಕದ್ರಿ ಅಗ್ನಿಶಾಮಕ ದಳದ ಅಧಿಕಾರಿಗಳು ಸಿಬ್ಬಂದಿಗಳು ಜೊತೆ ಸೇರಿ ಸಂಪೂರ್ಣ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಷ್ಟರಲ್ಲಿ ಅಂಗಡಿಯ ವಸ್ತುಗಳೆಲ್ಲಾ ಸಂಪೂರ್ಣ ಸುಟ್ಟು ಕರಕಲಾಗಿದೆ.
ಬೆಂಗ್ರೆ ಮಹಾಜನ ಸಭಾದ ಕಟ್ಟಡದಲ್ಲಿ ಇರುವ ಜನರಲ್ ಸ್ಟೋರ್ ಗೀತಾ ಕರ್ಕೇರಾ ರವರಿಗೆ ಸಂಭಂದಿಸಿದ ಅಂಗಡಿಯಾಗಿದ್ದು, ನಿನ್ನೆ ತಾನೆ ಸುಮಾರು ಒಂದುವರೆ ಲಕ್ಷದ ವಸ್ತುಗಳನ್ನು ಖರೀದಿಸಿ ಅಂಗಡಿಗೆ ತಂದಿರುತ್ತಾರೆ, ಒಟ್ಟು ಎಂಟು ಲಕ್ಷ ಮೌಲ್ಯದ ವಸ್ತುಗಳು ಸುಟ್ಟ ಹೋಗಿದೆ ಅಂದಾಜಿಸಲಾಗಿದೆ. ಬೆಂಕಿ ಆಕಸ್ಮಿಕವಾಗಿ ಆದ್ದರಿಂದ ಮೇಲ್ನೋಟಕ್ಕೆ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಆಗಿರಬಹುದು ಶಂಕಿಸಲಾಗಿದೆ
