ಕಡಬ: ಕಡಬ ತಾಲೂಕು ಕೊಣಾಜೆಯ ತಮಿಳು ಸಿ.ಆರ್. ಸಿ ಕಾಲೋನಿ ಬಳಿ ದನವೊಂದು ರಾತ್ರಿ ವೇಳೆ ತೋಟದಲ್ಲಿ ಗಾಯಗೊಂಡು ಮೃತಪಟ್ಟಿದ್ದು, ಆನೆ ದಾಳಿ ನಡೆಸಿದ ಬಗ್ಗೆ ಸಂಶಯ ವ್ಯಕ್ತವಾಗಿದೆ. ಕೊಣಾಜೆ ದೊಡ್ಡಮನೆಯ ಅಶೋಕ ಎಂಬವರಿಗೆ ಸೇರಿದ ದನವನ್ನು ಮಂಗಳವಾರ ಮೇಯಲು ಬಿಟ್ಟಿದ್ದು, ಸಂಜೆ ಮನೆಯವರು ಹುಡುಕಾಡಿದಾಗ ದನ ಸಿಕ್ಕಿರಲಿಲ್ಲ. ಬುಧವಾರ ಬೆಳಿಗ್ಗೆ ಮತ್ತೆ ಹುಡುಕಾಟ
ಕೊಣಾಜೆ: ಬೋಳಿಯಾರ್ ನ ಕುಚುಗುಡ್ಡೆಯಲ್ಲಿ ಮಗಳ ಮದುವೆಯ ದಿನದಂದೇ ತಂದೆ ಹೃದಯಘಾತಗೊಂಡು ಮೃತಪಟ್ಟ ಘಟನೆ ಸೋಮವಾರ ಮುಂಜಾವು ಸಂಭವಿಸಿದೆ.ಮೃತಪಟ್ಟ ವ್ಯಕ್ತಿಯನ್ನು ಬೋಳಿಯಾರ್ ನ ಕುಕ್ಕೋಟ್ಟು ಕುಚುಗುಡ್ಡೆಯ ಹಸನಬ್ಬ (60) ಎಂದು ಗುರುತಿಸಲಾಗಿದೆ. ಹಸನಬ್ಬ ಅವರ ಮಗಳಿಗೆ ಕಾಸರಗೋಡುವಿನ ಯುವಕನೊಂದಿಗೆ ಸೋಮವಾರದಂದು ಹೊಸಂಗಡಿಯ ಸಭಾಂಗಣವೊಂದರಲ್ಲಿ ಮದುವೆ ನಿಗಧಿಯಾಗಿತ್ತು. ದುರದೃಷ್ಟವಶಾತ್ ಭಾನುವಾರಂದು ಹಸನಬ್ಬರಿಗೆ ಸೋಮವಾರ ಮುಂಜಾವಿನ 4 ಗಂಟೆಯ ವೇಳೆಗೆ ತೀವ್ರ
ಕೊಣಾಜೆ: ಕಾಂಗ್ರೆಸ್ ನ ಹಿರಿಯ ಮುಖಂಡ, ಪಿಡಬ್ಲ್ಯುಡಿ ಕಂಟ್ರಾಕ್ಟರ್ ಕೈರಂಗಳ ಗ್ರಾಮದ ಧರ್ಮಕ್ಕಿ ನಿವಾಸಿ ಸಂಜೀವ ಗಟ್ಟಿ (82)ಅಲ್ಪಕಾಲದ ಅಸೌಖ್ಯದಿಂದಮಂಗಳವಾರ ಮಧ್ಯಾಹ್ನ ಕೈರಂಗಳ ಧರ್ಮಕ್ಕಿಯ ಸ್ವಗೃಹದಲ್ಲಿ ನಿಧನರಾದರು.ಕೈರಂಗಳ ಹಾಗೂ ನರಿಂಗಾನ ಗ್ರಾಮದಲ್ಲಿ ಶಾಲೆಗಳ ಮಂಜೂರಾತಿ ಹಾಗೂ ಅಭಿವೃದ್ಧಿಗೆ ಶ್ರಮಿಸಿದ್ದ ಮೃತರುಪಕ್ಷದಲ್ಲಿ ಸುಮಾರು ಐದು ದಶಕಗಳ ಕಾಲ ಸಕ್ರಿಯವಾಗಿ ಕಾರ್ಯನಿರ್ವಹಿಸಿದ ಅನುಭವಿಯಾಗಿದ್ದುಐದು ಬಾರಿ ಬಾಳೆಪುಣಿ ಗ್ರಾಮ ಪಂಚಾಯಿತಿ ಸದಸ್ಯರಾಗಿಯೂ
ಕೊಣಾಜೆ: ಕೊಣಾಜೆ ಅಡ್ಕರೆ ಪಡ್ಪು ವಿನ ಜಮಿಯ್ಯುತುಲ್ ಫಲಾಹ್ ಸಂಸ್ಥೆಯಗ್ರೀನ್ ವೀವ್ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜಿನಲ್ಲಿ ಕೇಂದ್ರ ಸರ್ಕಾರದ ಯೋಜನೆಯಾದ ‘ಅಟಲ್ ಟಿಂಕೆರಿಂಗ್ ಲ್ಯಾಬ್’ ನ್ನು ಉದ್ಘಾಟನೆ ಕಾರ್ಯಕ್ರಮ ನಡೆಯಿತು. ದ.ಕ.ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ‘ಅಟಲ್ ಟಿಂಕೆರಿಂಗ್ ಲ್ಯಾಬ್ ನ್ನು ಉದ್ಘಾಟಿಸಿದರು.ನಂತರ ಮಾತನಾಡಿದ ಅವರು ಶೈಕ್ಷಣಿಕವಾದ ಓದಿನೊಂದಿಗೆ ನಮ್ಮ ಸಾಮಾನ್ಯ ಜ್ಞಾನವನ್ನು ವಿಸ್ತರಿಸುವ ಹಾಗೂ ಪ್ರಾಯೋಗಿಕ
ಕೊಣಾಜೆ : ಸಿಡಿಲು ಬಡಿದು ಯುವಕನೋರ್ವ ದಾರುಣವಾಗಿ ಮೃತಪಟ್ಟ ಘಟನೆ ಹರೇಕಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಗಾನದಬೆಟ್ಟು ಎಂಬಲ್ಲಿ ರವಿವಾರ ಸಂಜೆ ಸಂಭವಿಸಿದೆ.ಮೃತ ಯುವಕನನ್ನು ಹರೇಕಳ ಗಾನದಬೆಟ್ಟು ಎಂಬಲ್ಲಿಯ ಹಸನಬ್ಬ ಎಂಬವರ ಪುತ್ರ ಅಬ್ದುಲ್ ರಹ್ಮಾನ್ (33) ಎಂದು ಗುರುತಿಸಲಾಗಿದೆ.ರಹ್ಮಾನ್ ಅವರು ಗದ್ದೆಯಲ್ಲಿ ಕಟ್ಡಿದ್ದ ದನವನ್ನು ಬಿಡಿಸಿಕೊಂಡು ಮನೆಯತ್ತ ಬರುವ ವೇಳೆ ಸಿಡಿಲು ಬಡಿದಿದ್ದು, ಪರಿಣಾಮ ಸ್ಥಳದಲ್ಲೇ ಕುಸಿದು ಬಿದ್ದ ಅವರನ್ನು ಆಸ್ಪತ್ರೆಗೆ
ಉಳ್ಳಾಲ: ಬಿಜೆಪಿ ಕಾರ್ಯಕರ್ತನ ಕೊಲೆಗೆ ಯತ್ನಿಸಿರುವ ಘಟನೆ ಕೊಣಾಜೆ ಸಮೀಪ ನಿನ್ನೆ ತಡರಾತ್ರಿ ನಡೆದಿದೆ. ಬಿಜೆಪಿ ಕಾರ್ಯಕರ್ತ, ಕೊಣಾಜೆ ಗ್ರಾ.ಪಂ ಮಾಜಿ ಸದಸ್ಯ ಪ್ರಕಾಶ್ ಶೆಟ್ಟಿ (38) ಎಂಬವರ ಕೊಲೆಗೆ ಯತ್ನಿಸಲಾಗಿದೆ. ಬೈಕಲ್ಲಿ ಬಂದ ಮೂವರು ಕೃತ್ಯ ಎಸಗಿರುವುದಾಗಿ ತಿಳಿದುಬಂದಿದೆ. ಸ್ನೇಹಿತ ಮಂಜುನಾಥ್ ಜೊತಗೆ ಬೈಕಿನಲ್ಲಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ಹಿಂಬದಿಯಿಂದ ಬಂದ ದುಷ್ಕರ್ಮಿಗಳು ತಲವಾರು ಬೀಸಿದ್ದಾರೆ. ಪವಾಡಸದೃಶವಾಗಿ ತಲವಾರು ದಾಳಿ ಕೈಗೆ ಮಾತ್ರ
ಮಂಗಳೂರು ವಿಧಾನಸಭಾ ಕ್ಷೇತ್ರದ ತೊಕ್ಕೊಟ್ಟಿನಿಂದ ಕೋಣಾಜೆ ಗೆ ಸಂಪರ್ಕಿಸುವ ಮುಖ್ಯ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು ಇದನ್ನು ಖಂಡಿಸಿ DYFI ಉಳ್ಳಾಲ ವಲಯ ನೇತ್ರತ್ವದಲ್ಲಿ ಚೆಂಬುಗುಡ್ಡೆಯಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಯಿತು ಪ್ರತಿಭಟನೆ ಯನ್ನು ಉದ್ದೇಶಿಸಿ ಮಾತನಾಡಿದ ಡಿ ವೈ ಎಫ್ಐ ಜಿಲ್ಲಾ ಅಧ್ಯಕ್ಷರು B K ಇಮ್ತಿಯಾಜ್ ತೊಕ್ಕೋಟ್ಟಿನಿಂದ ಹಿಡಿದು ಚೆಂಬುಗುಡ್ಡೆ, ಬಬ್ಬುಕಟ್ಟೆ , ಕುತ್ತಾರ್ ಮತ್ತಿತ್ತರ ಪ್ರದೇಶದಲ್ಲಿ ಬಹು ದೊಡ್ಡ ಗುಂಡಿಗಳಿಂದ
ಕೊಣಾಜೆ: ಬ್ಯಾರೀಸ್ ಗ್ರೂಪ್ ಆಯೋಜಿಸಿರುವ ‘ಗ್ರೀನ್ ವಾಕಥಾನ್ 2021’ಕ್ಕೆ ಕೊಣಾಜೆ ಮಂಗಳಗಂಗೋತ್ರಿಯ ವಿಶ್ವವಿದ್ಯಾನಿಲಯ ಮಂಗಳಾ ಸಭಾಂಗಣದ ಮುಂದೆ ಮುಂಜಾನೆ ಚಾಲನೆ ನೀಡಲಾಯಿತು.ಬಿಐಟಿ ಮತ್ತು ಬೀಡ್ಸ್ ಹಮ್ಮಿಕೊಂಡ ‘ವಿಶ್ವ ಹಸಿರು ಸಪ್ತಾಹ’- ‘ಗ್ರೀನ್ ವಾಕಥಾನ್’ಗೆ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ಚಾಲನೆ ನೀಡಿದರು.ಬಿಐಟಿ ಮತ್ತು ಬೀಡ್ಸ್ ಹಮ್ಮಿಕೊಂಡ ‘ವಿಶ್ವ ಹಸಿರು
ಪಿಜಿ ಮತ್ತು ಯುಜಿ ಸೆಮಿಸ್ಟರ್ ಪರೀಕ್ಷೆಯ ಫಲಿತಾಂಶ ವಿಳಂಬ ವಿರೋಧಿಸಿ ಎಬಿವಿಪಿ ಕಾರ್ಯಕರ್ತರು ಕೊಣಾಜೆಯಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯದ ಎದುರು ಪ್ರತಿಭಟನೆ ನಡೆಸಿದರು. ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸಭೆ ಆರಂಭವಾಗುವ ವೇಳೆ ಮುತ್ತಿಗೆ ಹಾಕಲು ಯತ್ನಿಸಿದ ಎಬಿವಿಪಿ ಕಾರ್ಯಕರ್ತರನ್ನು ಪೊಲೀಸರು ತಡೆದರು. ಈ ವೇಳೆ ಪೊಲೀಸರ ಹಾಗೂ ಪ್ರತಿಭಟನಾನಿರತರ ನಡುವೆ ತಳ್ಳಾಟ, ನೂಕಾಟ ನಡೆಯಿತು.ಪ್ರತಿಭಟನೆ ನಿರತ ಕಾರ್ಯಕರ್ತರು ತಮ್ಮ ಬೇಡಿಕೆ ಈಡೇರಿಸಬೇಕೆಂದು
ಕೊಣಾಜೆ ವಿವಿಯಲ್ಲಿ ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ ರಾಷ್ಟ್ರೀಯ ಶಿಕ್ಷಣ ನೀತಿಗೆ ಚಾಲನೆ ನೀಡುತ್ತಿದ್ದಂತೆಯೇ ಕ್ಯಾಂಪಸ್ ಆಫ್ ಇಂಡಿಯಾ ವಿದ್ಯಾರ್ಥಿ ಸಂಘಟನೆಯ ಕಾರ್ಯಕರ್ತರು ವಿವಿಯ ಆವರಣದಲ್ಲಿ ಪ್ರತಿಭಟನೆ ನಡೆಸಿ, ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಮಂಗಳಾ ಸಭಾಂಗಣದ ಹೊರಾಂಗಣದಲ್ಲಿ ಕಾರ್ಯಕರ್ತರು ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದ್ದು ಧಿಕ್ಕಾರ ಘೋಷಣೆ ಕೂಗಿದ್ದಾರೆ. ತಕ್ಷಣ ಪೊಲೀಸರು ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ. ಸಿಎಫ್‌ಐ