ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಅವರಿಂದ ಭಾಶಾ ಮಂಡಳ್ ಭೇಟಿ.

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಮನೋಹರ್ ಕಾಮತ್ ಅವರು ಕೊಂಕಣಿ ಮಾತೃಭಾಷೆ ಹಾಗೂ ಕೊಂಕಣಿ ಸಂಸ್ಕೃತಿಯ ಕಾರಣಕ್ಕಾಗಿ 49ವರುಷಗಳ ಮೊದಲು ಆರಂಭವಾಗಿ ಕೊಂಕಣಿ ಲೋಕ ಮಹಾ ಮೇಳವನ್ನು ಮಂಗಳೂರು ನಗರದಲ್ಲಿ ಸಂಘಟನೆ ಮಾಡಿದ ಕೊಂಕಣಿ ಭಾಶಾ ಮಂಡಳ್ ಕರ್ನಾಟಕ ಇದರ ಬಿಇಎಮ್ ಸ್ಕೂಲ್ ಕಂಪಂವ್ಡ್ ಕಾರ್ ಸ್ಟ್ರೀಟ್ ಇಲ್ಲಿನ ನೂತನ ಕಛೇರಿಯ ಭೆಟಿ ಮಾಡಿ ಸಂವಾದ ನಡೆಸಿದರು.
ಭಾಶಾ ಮಂಡಳ್ ಅಂತಹ ಸಂಸ್ಥೆಯ ಜೊತೆಯಲ್ಲಿ ಕೊಂಕಣಿ ಕಾರ್ಯಕ್ರಮ ಮಾಡುವ ಇಚ್ಚೆ ಇದ್ದು ನೂತನ ಸಮಿತಿಯ ಹಾಗೂ ಸದಸ್ಯರು ಅಕಾಡೆಮಿ ಗೆ ಬಂದಾಗ ಜೊತೆಗೆ ಕೆಲಸ ಮಾಡಲು ಸಹಕಾರ ಕೋರಿದರು.ಭಾಶಾ ಮಂಡಳ್ ಕರ್ನಾಟಕ ಅದ್ಯಕ್ಷ ವಸಂತ ರಾವ್ ರಿಜಿಸ್ಟ್ರಾರ್ ಅವರಿಗೆ ಶಾಲು ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.ಖಜಾಂಚಿ ಸುರೇಶ್ ಶೆಣೈ,ಕಾರ್ಯದರ್ಶಿ ರೇಮಂಡ್ ಡಿಕೂನಾ ತಾಕೊಡೆ ಸಮಾಲೋಚನೆಯಲ್ಲಿ ಭಾಗಿಯಾಗಿದ್ದರು.