ತೆಲುಗು ನಟ ಮಹೇಶ್ ಬಾಬು ತಂದೆ ನಿಧನ
ಅನಾರೋಗ್ಯದ ಹಿನ್ನೆಲೆಯಲ್ಲಿ ಕೃಷ್ಣ ಅವರನ್ನು ಭಾನುವಾರ ಹೈದರಾಬಾದ್ ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ 4 ಗಂಟೆ ಸುಮಾರಿಗೆ ನಿಧನರಾಗಿದ್ದಾರೆ.ಅವರಿಗೆ 79 ವರ್ಷ ವಯಸ್ಸಾಗಿತ್ತು.ತೆಲುಗು ಚಿತ್ರರಂಗದ ಮೊದಲ ಸೂಪರ್ ಸ್ಟಾರ್ ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿರುವ ಕೃಷ್ಣ 350 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಕೊನೆಯ ಬಾರಿಗೆ 2016 ರಲ್ಲಿ ದೊಡ್ಡ ಪರದೆಯಲ್ಲಿ ಕಾಣಿಸಿಕೊಂಡರು. ಕೃಷ್ಣ ಅವರ ಮೊದಲ ಪತ್ನಿ ಮತ್ತು ಮಹೇಶ್ ಬಾಬು ಅವರ ತಾಯಿ ಇಂದಿರಾ ದೇವಿ ಸೆಪ್ಟೆಂಬರ್ ನಲ್ಲಿ ನಿಧನರಾಗಿದ್ದರು. ಮಹೇಶ್ ಬಾಬು ಅವರ ಸಹೋದರ ರಮೇಶ್ ಬಾಬು ಕೂಡ ಈ ವರ್ಷದ ಆರಂಭದಲ್ಲಿ ನಿಧನರಾಗಿದ್ದಾರೆ.ಒಂದೇ ವರ್ಷದಲ್ಲಿ ಮಹೇಶ್ ಬಾಬು ಅವರ ಕುಟುಂಬಕ್ಕೆ ಎದುರಾದ ಅಘಾತದ ಬಗ್ಗೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.