HomeFresh Newsಕರಾವಳಿಯಲ್ಲಿ ಭಾರೀ ಮಳೆ- ಕುಮಾರಧಾರ ಸ್ನಾನಘಟ್ಟ ಮುಳುಗಡೆ

ಕರಾವಳಿಯಲ್ಲಿ ಭಾರೀ ಮಳೆ- ಕುಮಾರಧಾರ ಸ್ನಾನಘಟ್ಟ ಮುಳುಗಡೆ

ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಪರಿಸರದಲ್ಲಿ ಹಾಗೂ ಘಟ್ಟ ಪ್ರದೇಶದಲ್ಲಿ ಬಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯದ ಕುಮಾರಧಾರ ನದಿ ತುಂಬಿ ಹರಿಯುತ್ತಿದ್ದು, ಪ್ರವಾಹದ ನೀರು ಹೆದ್ದಾರಿಗೆ ನುಗ್ಗಿ ಸಂಚಾರಕ್ಕೆ ಅಡಚನೆ ಉಂಟಾಯಿತು.  

   ಕುಮಾರಧಾರ ನದಿಯಲ್ಲಿ ಭಾರೀ ನೀರು ಹೆಚ್ಚಳದಿಂದ ಕುಮಾರಧಾರ ಸ್ನಾನಘಟ್ಟ ಸಂಪೂರ್ಣ ಮುಳುಗಡೆಯಾಗಿದೆ. ಇಲ್ಲಿನ ಲಗೇಜ್ ಕೊಠಡಿ, ಶೌಚಾಲಯ ಎಲ್ಲವೂ ಮುಳುಗಡೆಯಾಗಿದೆ.  ಮಂಜೇಶ್ವರ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಗೆ ನದಿಯ ನೀರು ನುಗ್ಗಿ ವಾಹನ ಸಂಚಾರಕ್ಕೆ ಅಡ್ಡಿಯಾಯಿತು. ಮುಂಜಾಗ್ರತಾ ಹಿನ್ನೆಲೆಯಲ್ಲಿ ಸಂಚಾರ ನಿಷೇಧಿಸಲಾಗಿದೆ. ನದಿ ಸಮೀಪದ ತೋಟಗಳಿಗೂ ನೀರು ನುಗ್ಗಿದೆ. ಸುಬ್ರಹ್ಮಣ್ಯ, ಕೊಲ್ಲಮೊಗ್ರು, ಬಿಸಿಲೆ, ಅಡ್ಡಹೊಳೆ, ಸೋಮವಾರಪೇಟೆ ಮೊದಲಾದ ಕಡೆಗಳಲ್ಲಿ ಬಾರೀ ಮಳೆ ಮುಂದುವರಿದಿದ್ದು, ಕುಮಾರಧಾರ ನದಿಯಲ್ಲಿ ನೀರಿನ ಮಟ್ಟ ಏರಿಕೆ ಆಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments