HomeFresh Newsಕುಕ್ಕೆ ಸುಬ್ರಹ್ಮಣ್ಯ ಯಶಸ್ವಿನಿ ಆನೆಗೆ ಅರಣ್ಯ ಇಲಾಖೆಯಿಂದ ದೇವಸ್ಥಾನದ ಹೆಸರಿಗೆ ಮಾಲಿಕತ್ವದ ಪ್ರಮಾಣಪತ್ರ

ಕುಕ್ಕೆ ಸುಬ್ರಹ್ಮಣ್ಯ ಯಶಸ್ವಿನಿ ಆನೆಗೆ ಅರಣ್ಯ ಇಲಾಖೆಯಿಂದ ದೇವಸ್ಥಾನದ ಹೆಸರಿಗೆ ಮಾಲಿಕತ್ವದ ಪ್ರಮಾಣಪತ್ರ

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಯಶಸ್ವಿನಿ ಆನೆಗೆ ಅರಣ್ಯ ಇಲಾಖೆಯಿಂದ ಮಾಲಿಕತ್ವ ಪ್ರಮಾಣ ಪತ್ರ ದೊರೆತಿದೆ. ಕಳೆದ 18 ವರ್ಷಗಳಿಂದ ಕುಕ್ಕೆ ಸುಬ್ರಹ್ಮಣ್ಯದ ದೇವಸ್ಥಾನದಲ್ಲಿ ಆನೆಗೆ ಇದ್ದರೂ ಮಾಲಿಕತ್ವ ಪ್ರಮಾಣ ಪತ್ರ ದೊರೆತಿರಲಿಲ್ಲ. ಇದೀಗ ಮುಂದಿನ 5 ವರ್ಷಗಳ ವರೆಗೆ ಮಾಲಿಕತ್ವ ದೊರೆತಿರುವುದಾಗಿ ಅರಣ್ಯ ಇಲಾಖೆಯ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಕೆಲ ವರ್ಷಗಳ ಹಿಂದೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹಾಲಿ ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಸಚಿವರಾಗಿರುವ ಆನಂದ ಸಿಂಗ್ ಆನೆಯನ್ನು ಕೊಡಮಾಡಿದ್ದರು. ಅರಣ್ಯ ಇಲಾಖೆಯ ಈ ಅನುಮತಿ ಪತ್ರಕ್ಕಾಗಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಶ್ರೀವತ್ಸ ಅವರು ಕೆಲಸ ಮಾಡಿರುವುದಾಗಿ ತಿಳಿದು ಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments