ಕೂಳೂರು ಸೇತುವೆಯಲ್ಲಿ ಹೊಂಡಗುಂಡಿ : ಸಂಚರಿಸುವುದೇ ವಾಹನ ಸವಾರರಿಗೆ ಸವಾಲು

ಕೂಳೂರು ಸೇತುವೆಯಲ್ಲಿ ಹೊಂಡಗುಂಡಿ
ಸಂಚರಿಸುವುದೇ ವಾಹನ ಸವಾರರಿಗೆ ಸವಾಲು
ರಾಷ್ಟ್ರೀಯ ಹೆದ್ದಾರಿ 66ರ ಕೂಳೂರಿನ ಸೇತುವೆಯಲ್ಲಿ ಬೃಹತ್ ಗಾತ್ರದ ಹೊಂಡಗಳು ಉಂಟಾಗಿದ್ದು, ವಾಹನಗಳು ಸರಾಗವಾಗಿ ಚಲಿಸಲು ಸಾಧ್ಯವಾಗದೆ ಕೆಲವು ದಿನಗಳಿಂದ ವಾಹನ ದಟ್ಟನೆ ಸಾಮಾನ್ಯವಾಗಿಬಿಟ್ಟಿದೆ.
ಸೇತುವೆ ಮೇಲೆ ಹೊಂಡಗಳು ಎದ್ದಿರುವ ಕಾರಣ ವಾಹನಗಳು ನಿಧಾನವಾಗಿ ಚಲಿಸುತ್ತಿದ್ದು, ಬೆಳಗ್ಗೆ ಮತ್ತು ಸಂಜೆ ಕಿಲೋಮೀಟರ್ ಗಟ್ಟಲೆ ವಾಹನಗಳ ಸಾಲು ಕಾಣಲಾರಂಬಿಸಿದೆ. ಮಳೆ ಬರುವಾಗ ಸೇತುವೆಯಲ್ಲಿ ನೀರು ನಿಂತು ಹೊಂಡಗಳು ಕಾಣಿಸದೆ ಅಪಘಾತಗಳಿಗೂ ಕಾರಣವಾಗುತ್ತಿದೆ. ಆಂಬ್ಯುಲೆನ್ಸ್, ಅಗ್ನಿಶಾಮಕದಳ ವಾಹ ಸೇರಿದಂತೆ ತುರ್ತು ವಾಹನಗಳಿಗೆ ದಟ್ಟಣೆ ಸಂದರ್ಭ ಸಮಸ್ಯೆಯಾಗುತ್ತಿದೆ.