HomeFresh Newsಕುತ್ತಾರು: 12 ನೇ ಮಹಡಿಯಿಂದ ಬಿದ್ದುಬಾಲಕಿ ಮೃತ್ಯು

ಕುತ್ತಾರು: 12 ನೇ ಮಹಡಿಯಿಂದ ಬಿದ್ದುಬಾಲಕಿ ಮೃತ್ಯು

ಉಳ್ಳಾಲ: 12 ನೇ ಮಹಡಿಯಿಂದ ಬಿದ್ದು ಬಾಲಕಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕುತ್ತಾರು ಸಿಲಿಕೋನಿಯಾ ವಸತಿ ಸಂಕೀರ್ಣದಲ್ಲಿ ತಡರಾತ್ರಿ ವೇಳೆ ಸಂಭವಿಸಿದೆ.
ವೈದ್ಯರಾಗಿರುವ ಡಾ. ಮಮ್ತಾಝ್ ಅಹಮ್ಮದ್ ಎಂಬವರ ಪುತ್ರಿ ಹಿಬಾ(15) ಸಾವನ್ನಪ್ಪಿರುವ ಬಾಲಕಿ. 18ನೇ ಮಹಡಿ ಹೊಂದಿರುವ ಸಿಲಿಕೋನಿಯಾ ವಸತಿ ಸಂಕೀರ್ಣದ 12 ಮಹಡಿಯಲ್ಲಿ ವೈದ್ಯ ದಂಪತಿ ವಾಸವಿದ್ದರು. ತಡರಾತ್ರಿ ಏಕಾಏಕಿ ಬಾಲಕಿ ಹಿಬಾ ಮೇಲಿಂದ ಕೆಳಬಿದ್ದು ಸಾವನ್ನಪ್ಪಿದ್ದಾಳೆ. ಘಟನೆಗೆ ಕಾರಣ ತಿಳಿದುಬಂದಿಲ್ಲ. ಯೆನೆಪೋಯ ಶಾಲೆಯಲ್ಲಿ 10ನೇ ತರಗತಿಯಲ್ಲಿ ಹಿಬಾ ವಿದ್ಯಾರ್ಥಿನಿಯಾಗಿದ್ದಳು. ಉಳ್ಳಾಲ ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments