Home Posts tagged ullalla

ಉಳ್ಳಾಲ: ಕೋಟೆಕಾರು ಬೀರಿ ಗೋಡಾನ್‌ನಲ್ಲಿ ಕಾರ್ಮಿಕರ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ: ಗಾಯಗೊಂಡ ಕಾರ್ಮಿಕರು ಖಾಸಗಿ ಆಸ್ಪತ್ರೆಗೆ ದಾಖಲು

ಕೋಟೆಕಾರು ಬೀರಿ ಗೋಡಾನ್‌ನಲ್ಲಿ ಕೆಲಸ ಮಾಡುತ್ತಿದ್ದ ಪ್ಲವರ್ ಡೆಕರೇಷನ್ ಕಾರ್ಮಿಕರ ಮೇಲೆ ಅಪರಿಚಿತ ವ್ಯಕ್ತಿಗಳು ಹಲ್ಲೆ ಮಾಡಿದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಉಳ್ಳಾಲದ ಕೋಟೆಕಾರು ಬೀರಿ ಸಮೀಪದ ಪ್ಲವರ್ ಡೆಕರೇಟರ್ ಗೋಡಾನ್‌ನಲ್ಲಿ ಎರಡು  ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದ ಉತ್ತರ ಭಾರತದ ಕಾರ್ಮಿಕರ ಮೇಲೆ ರಾತ್ರಿ ಸುಮಾರು ೮.೩೦ರ

ಉಳ್ಳಾಲ: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ

ಉಳ್ಳಾಲದ ಸೋಮೇಶ್ವರದ ರುದ್ರಬಂಡೆಯಿಂದ ಹಾರಿದ ಯುವತಿಯನ್ನು ಈಜುಗಾರರು ರಕ್ಷಿಸಿದ ಘಟನೆ ಸಂಭವಿಸಿದೆ. ಮಾಡೂರು ಬಾಡಿಗೆ ಮನೆಯಲ್ಲಿ ವಾಸಿಸುವ ಯುವತಿ ಸಮುದ್ರಕ್ಕೆ ಹಾರಿದ್ದು, ಮಂಗಳೂರಿನ ಕಾಲೇಜೊಂದರ ಪದವಿ ವಿದ್ಯಾರ್ಥಿನಿ ಆಗಿರುವ ಈಕೆಯನ್ನು ಸ್ಥಳದಲ್ಲಿ ಸಿಕ್ಕ ರಕ್ಷಣಾ ಸಾಮಗ್ರಿಗಳನ್ನು ಬಳಸಿ ಯುವತಿಯನ್ನು ರಕ್ಷಿಸಲಾಗಿದೆ. ಯುವತಿ ಸುರಕ್ಷಿತವಾಗಿದ್ದು, ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಉಳ್ಳಾಲ: ಈಜುಕೊಳದಲ್ಲಿ ಮುಳುಗಿ ಮೂವರು ಯುವತಿಯರು ಮೃತ್ಯು

ಉಳ್ಳಾಲ: ರೆಸಾರ್ಟ್‌ವೊಂದರ ಈಜುಕೊಳದಲ್ಲಿ ಮುಳುಗಿ ಮೂವರು ಯುವತಿಯರು ಮೃತಪಟ್ಟ ಘಟನೆ ನಡೆದಿದೆ. ಸೋಮೇಶ್ವರದಲ್ಲಿ ಭಾನುವಾರ ಬೆಳಿಗ್ಗೆ ನಡೆದಿರುವ ಘಟನೆಯಲ್ಲಿ ಮೈಸೂರು ದೇವರಾಜ ಮೊಹಲ್ಲಾದ ನವೀನ್ ಕುಮಾರ್ ಅವರ ಪುತ್ರಿ ಕೀರ್ತನಾ ಎನ್ (21), ಮೈಸೂರು ಕುರುಬರ ಹಳ್ಳಿ 4ನೇ ಕ್ರಾಸ್ ನಿವಾಸಿ ಮಲ್ಲೇಶ್ ಅವರ ಪುತ್ರಿ ನಿಶಿತಾ ಎಂ.ಡಿ (21) ಹಾಗೂ ಮೈಸೂರು ಕೆ.ಆರ್.ಮೊಹಲ್ಲ ರಾಮಾನುಜ ರಸ್ತೆಯ 11ನೇ ಕ್ರಾಸ್ ನಿವಾಸಿ ಎಂ.ಎನ್ ಶ್ರೀನಿವಾಸ್ ಅವರ ಪುತ್ರಿ ಪಾರ್ವತಿ ಎಸ್ (20)

ರೈಲ್ವೇ ಹಳಿಯಲ್ಲಿ ಕಲ್ಲಿಟ್ಟ ಆಗಂತುಕರು:ಸ್ಥಳೀಯ ಮನೆಗಳಲ್ಲಿ ಕಂಪನದ ಅನುಭವ

ತೊಕ್ಕೊಟ್ಟು: ರೈಲ್ವೇ ಹಳಿಯ ಎರಡೂ ಬದಿಗಳಲ್ಲಿ ಆಗಂತುಕರಿಬ್ಬರು ಜಲ್ಲಿಕಲ್ಲುಗಳನ್ನಿಟ್ಟ ಪರಿಣಾಮ ಎರಡು ರೈಲುಗಳು ಚಲಿಸುವ ಸಂದರ್ಭ ದೊಡ್ಡ ಸದ್ದು ಸ್ಥಳೀಯರಿಗೆ ಕೇಳಿಬಂದಿದ್ದು, ಸ್ಥಳೀಯರು ರೈಲ್ವೇ ಹಳಿಯತ್ತ ದೌಡಾಯಿಸಿದ್ದಾರೆ. ತಡರಾತ್ರಿ 8.05 ರ ಸುಮಾರಿಗೆ ಕೊರಗಜ್ಜನ ಅಗೆಲು ಮುಗಿಸಿ ವಾಪಸ್ಸಾಗುತ್ತಿದ್ದ ತೊಕ್ಕೊಟ್ಟು ಓವರ್ ಬ್ರಿಡ್ಜ್ ನಿವಾಸಿ ಮಹಿಳೆಯರು ಹಳಿಯಲ್ಲಿ ಇಬ್ಬರು ಆಗಂತುಕರನ್ನು ಕಂಡಿದ್ದರು. ಅಲ್ಲಿಂದ ಮನೆಗೆ ತಲುಪುವಷ್ಟರಲ್ಲಿ ರೈಲೊಂದು ಕೇರಳ ಕಡೆಗೆ

ಉಳ್ಳಾಲ: ಪೆಟ್ರೋಲ್ ಸ್ಕೂಟರ್ ಬೆಂಕಿಗಾಹುತಿ

ಉಳ್ಳಾಲ: ಮನೆ ಅಂಗಳದಲ್ಲಿ ನಿಲ್ಲಿಸಿಡಲಾಗಿದ್ದ ಪೆಟ್ರೋಲ್ ಸ್ಕೂಟರ್ ಬೆಂಕಿಗೆ ಆಹುತಿಯಾದ ಘಟನೆ ಕುಂಪಲ ಸಮೀಪದ ವಿದ್ಯಾನಗರ ಎಂಬಲ್ಲಿ ತಡರಾತ್ರಿ ಸಂಭವಿಸಿದೆ. ಐಟಿಐ ವಿದ್ಯಾರ್ಥಿ ರಾಕೇಶ್ ಎಂಬವರಿಗೆ ಸೇರಿದ ಸ್ಕೂಟರ್ ಬೆಂಕಿಗೆ ಆಹುತಿಯಾಗಿದೆ. ಎರಡು ತಿಂಗಳ ಹಿಂದಷ್ಟೇ ಟಿವಿಎಸ್ ಎಂಟಾರ್ಕ್ ಸ್ಕೂಟರನ್ನು  ರಾಕೇಶ್ ಖರೀದಿಸಿದ್ದು, ಮೊದಲ ತಿಂಗಳ ಸಾಲದ ಕಂತನ್ನು ಕಟ್ಟಿದ್ದರು. ತಡರಾತ್ರಿ 12.30ರ ಸುಮಾರಿಗೆ ಇದ್ದಕ್ಕಿಂತೆ ಸ್ಕೂಟರ್ ಗೆ ಬೆಂಕಿ ಆವರಿಸಿ, ಬೆಂಕಿಯ

ಕೊಲ್ಯ: ನಾಪತ್ತೆಯಾಗಿದ್ದ ಅವಿವಾಹಿತನ ಮೃತದೇಹ ಬಾವಿಯಲ್ಲಿ ಪತ್ತೆ

ಉಳ್ಳಾಲ: ನಾಪತ್ತೆಯಾಗಿದ್ದ ಅವಿವಾಹಿತನ ಮೃತದೇಹ ಮನೆ ಸಮೀಪದ ಬಾವಿಯಲ್ಲಿ ಪತ್ತೆಯಾಗಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕೊಲ್ಯ ಕುಜುಮಗದ್ದೆ ಎಂಬಲ್ಲಿ ಬೆಳಕಿಗೆ ಬಂದಿದೆ.ಸೋಮೇಶ್ವರ ಪುರಸಭಾ ವ್ಯಾಪ್ತಿಯ ಕೊಲ್ಯ,ಕುಜುಮಗದ್ದೆ ನಿವಾಸಿ ಪ್ರಸಾದ್ (44) ಮೃತಪಟ್ಟವರು. ಅ.4ರಂದು ಮನೆಯಲ್ಲಿ ಮೊಬೈಲ್ ಬಿಟ್ಟು ಹೋದವರು ಬಳಿಕ ನಾಪತ್ತೆಯಾಗಿದ್ದರು. ಈ ಕುರಿತು ಸಹೋದರ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನಂತರ ಮನೆ ಸುತ್ತಮುತ್ತಲೂ , ಸಂಬಂಧಿಕರ

ಉಳ್ಳಾಲ: ಭೂದಾಖಲೆಗಳ ನಿರ್ದೇಶಕರ ಕಚೇರಿ, ಉಳ್ಳಾಲ ತಾಲೂಕು ಸಹಾಯಕ ನಿರ್ದೇಶಕರ ಕಚೇರಿಗಳಿಗೆ ಲೋಕಾಯುಕ್ತ ದಾಳಿ

ಉಳ್ಳಾಲ: ಭ್ರಷ್ಟಾಚಾರ, ಕರ್ತವ್ಯಲೋಪ, ಕಡತ ವಿಲೇವಾರಿಯಲ್ಲಿ ಹಿನ್ನೆಡೆ ದೂರುಗಳಿಗೆ ಸಂಬಂಧಿಸಿದಂತೆ ಲೋಕಾಯುಕ್ತ ಅಧಿಕಾರಿಗಳು ಮಂಗಳೂರು ಭೂದಾಖಲೆಗಳ ಉಪನಿರ್ದೇಶಕರ ಕಚೇರಿ,  ನಾಟೆಕಲ್‌ನಲ್ಲಿರುವ ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ ಹಾಗೂ ಇಬ್ಬರು ಸರ್ವೇಯರ್‌ಗಳ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಕಡತಗಳನ್ನು ತನಿಖೆಗೆ ಪಡೆದುಕೊಂಡಿದ್ದಾರೆ. ಮಂಗಳೂರು ತಾಲೂಕು ಕಚೇರಿಯಲ್ಲಿರುವ ಭೂದಾಖಲೆಗಳ ಉಪನಿರ್ದೇಶಕರ ಕಚೇರಿ ಗೆ ಬೆಳಿಗ್ಗೆ ದಾಳಿ

ಉಳ್ಳಾಲ: ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಉರುಳಿದ ಲಾರಿ

ಉಳ್ಳಾಲ: ಓವರ್ ಲೋಡ್ ಇದ್ದ ಲಾರಿ ತಿರುವೊಂದರಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಉರುಳಿದ ಘಟನೆ ನಾಟೆಕಲ್ – ಮಂಜನಾಡಿ ಮಾರ್ಗ ಮಧ್ಯೆ ಸಂಭವಿಸಿದ್ದು, ಘಟನೆಯಲ್ಲಿ ಚಾಲಕ ಅಲ್ಪಸ್ವಲ್ಪ ಗಾಯದಿಂದ ಪಾರಾಗಿದ್ದು, ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ದೇರಳಕಟ್ಟೆ ಕಡೆಯಿಂದ ತೌಡುಗೋಳಿ ಕಡೆಗೆ ಪ್ಲೈವುಡ್ ಇದ್ದ ಲಾರಿ ತೆರಳುತ್ತಿದ್ದು, ಈ ನಡುವೆ ತಿರುವಿನಲ್ಲಿ  ಸಿಮೆಂಟ್ ಮಿಕ್ಸರ್ ಟ್ಯಾಂಕರ್ ಎದುರಿನಿಂದ ಬಂದಿದೆ. ಲಾರಿಯಲ್ಲಿ ಓವರ್ ಲೋಡ್ ಇದ್ದ