ಮಧ್ಯಪ್ರದೇಶದ ಆಶಾ ಮಾಲ್ವಿಯ ಯುವತಿಯಿಂದ 4000 ಕಿಲೋಮೀಟರ್ ಸೈಕಲ್ ರ್‍ಯಾಲಿ
ಮಧ್ಯಪ್ರದೇಶದ ಆಶಾ ಮಾಲ್ವಿಯ ಎಂಬ ಯುವತಿ ಸೈಕಲ್‍ನಲ್ಲಿ ದೇಶದ 28 ರಾಜ್ಯಗಳನ್ನು 20 ಸಾವಿರ ಪ್ರಯಾಣ ಮಾಡಲು ಉದ್ದೇಶಿಸಿದ್ದು, ಯುವಕ, ಯುವತಿಯರಿಗೆ ಹಾಗೂ ಮಹಿಳೆಯರಿಗೆ ಭಾರತದಲ್ಲಿಯೂ ಹೆಣ್ಣುಮಕ್ಕಳು ಸುರಕ್ಷಿತವಾಗಿದ್ದಾರೆ ಎಂದೂ ಜಗತ್ತಿಗೆ ಸಾರುವ ನಿಟ್ಟಿನಲ್ಲಿ ಸೈಕಲ್ ರ್‍ಯಾಲಿ ಯನ್ನು ಹಮ್ಮಿಕೊಂಡಿದ್ದಾರೆ. ಈಗಾಗಲೇ ಸುಮಾರು 4000 ಕಿಲೋಮೀಟರ್ ಪ್ರಯಾಣ ಮಾಡಿ ಮಂಗಳೂರಿಗೆ ಆಗಮಿಸಿದ್ದು. ಅವರನ್ನು ಮಾಜಿ ಶಾಸಕರು ಹಾಗೂ ಕೆಪಿಸಿಸಿಯ ಉಪಾಧ್ಯಕ್ಷರಾದ ಐವನ್ ಡಿಸೋಜ ಭೇಟಿ ನೀಡಿ ಶುಭ ಹಾರೈಸಿದರು.