ಮಂಗಳೂರು : ರಾಜ್ಯ ಸರ್ಕಾರದ ಜನಸಂಕಲ್ಪ ಯಾತ್ರೆ ಅಲ್ಲ, ಇದು ಜನ ಸಂಕಟ ಯಾತ್ರೆ-ಮಂಗಳೂರಿನಲ್ಲಿ ಶಾಸಕ ಯು.ಟಿ. ಖಾದರ್ ವಾಗ್ದಾಳಿ

ರಾಜ್ಯದ ಬಿಜೆಪಿ ಸರ್ಕಾರ ಜನಸಂಕಲ್ಪ ಯಾತ್ರೆಯನ್ನು ಆರಂಭಿಸಿದ್ದು, ಇದು ಜನ ಸಂಕಲ್ಪ ಯಾತ್ರೆ ಅಲ್ಲ ಇದು ಜನ ಸಂಕಟ ಯಾತ್ರೆ. ಜನ್ರ ಮುಂಗಡ ಪತ್ರದಲ್ಲಾಗಲಿ ಹೇಳಿದ ಯಾವುದೇ ಆಶ್ವಾಸನೆ ಈಡೇರಿಸಿಲ್ಲ. ಸರ್ಕಾರದ ವೈಫಲ್ಯ ಮರೆಮಾಚಲು ಈ ಯಾತ್ರೆ ಹಮ್ಮಿಕೊಂಡಿದ್ದಾರೆ ಎಂದು ಶಾಸಕ ಯು.ಟಿ. ಖಾದರ್ ವಾಗ್ದಾಳಿ ನಡೆಸಿದ್ದಾರೆ.

ಅವರು ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ರಾಜ್ಯದ ಬಿಜೆಪಿ ಸರ್ಕಾರ ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದಿದೆ. ಡಬಲ್ ಇಂಜಿನ್ ಸರ್ಕಾರಕ್ಕೆ ರಸ್ತೆಯ ಒಂದು ಗುಂಡಿ ಮುಚ್ಚಲು ಸಾಧ್ಯವಾಗದ ಪರಿಸ್ಥಿತಿ. ಇದೆ. ನಮ್ಮ ಕ್ಷೇತ್ರಕ್ಕೆ ಈ ಭಾರಿ ಗುಂಡಿ ಮುಚ್ಚಲು 5 ಲಕ್ಷ ಕೊಟ್ಟಿದೆ.
ಡಬಲ್ ಇಂಜಿನ್ ಸರ್ಕಾರದ ಇಂಜಿನ್ ಕೆಟ್ಟು ಹೋಗಿದೆ. ಡಬಲ್ ಇಂಜಿನ್ ಕೇವಲ ಸೈಲೆನ್ಸರ್ ಮಾತ್ರ ವರ್ಕ್ ಆಗ್ತಾ ಇದೆ. ಜನ್ರನ್ನು ಸರ್ಕಸ್ ಮುಂದೆ ಕುಳ್ಳಿರಿಸಿದಂತಾಗಿದೆ. ಜನ್ರಿಗೆ ಡಬಲ್ ಇಂಜಿ ಸರ್ಕಾರ ಏನ್ ಮಾಡ್ತಾ ಇದೆ ಗೊತ್ತಿಲ್ಲ. ಮೀನುಗಾರಿಗೆ ಸಾವಿರ ಮನೆ ನೀಡ್ತೇವೆ ಹೇಳಿದ್ರು.
ಮೀನುಗಾರಿಗೆ ಬಿಜೆಪಿ ಮಾಡಿದಷ್ಟು ಮೋಸ ಯಾರು ಮಾಡಿಲ್ಲ ಎಂದು ಶಾಸಕ ಖಾದರ್ ಕಿಡಿ ಕಾರಿದರು.
