ಮಹಿಳೆಯರೇ ಸವ್ಯಸಾಚಿಗಳು : ಡಾ|| ಚೂಂತಾರು

ದಕ್ಷಿಣಕನ್ನಡ ಜಿಲ್ಲಾ ಗೃಹರಕ್ಷಕದಳ ಮತ್ತು ಪೌರರಕ್ಷಣಾ ಪಡೆಯ ವತಿಯಿಂದ ಹಾಗೂ ಮಾಂಡೊವಿ ಮೋಟರ್ಸ್ ಹಂಪನಕಟ್ಟೆ ಇವರ ಸಹಯೋಗದೊಂದಿಗೆ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಮೂರು ಮಂದಿ ಮಹಿಳಾ ಗೃಹರಕ್ಷಕಿಯರಿಗೆ ಹಾಗೂ ಇಬ್ಬರು ಪೌರಕಾರ್ಮಿಕರಿಗೆ ದಿನಾಂಕ : 08-03-2023ನೇ ಬುಧವಾರದಂದು ಮಾಂಡೊವಿ ಮೋಟರ್ಸ್ ಹಂಪನಕಟ್ಟೆಯಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ದ.ಕಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಅವರು ಮಾತನಾಡಿ, ಮಹಿಳೆಯು ಒಬ್ಬ ತಾಯಿಯಾಗಿ, ಹೆಂಡತಿಯಾಗಿ, ತಂಗಿಯಾಗಿ, ಮಗಳಾಗಿ, ಸೊಸೆಯಾಗಿ ಪುರುಷರಜೀವನದಲ್ಲಿ ಬಹು ಮುಖ್ಯ ಭೂಮಿಕೆ ವಹಿಸುತ್ತಾರೆ. ಈ ಸಮಾಜದಲ್ಲಿ ಪುರುಷರು ಮಹಿಳೆಯರು ಸಮಾನರು. ಮಹಿಳೆಯರು ಮನೆಯಲ್ಲೂ ಕೆಲಸ ಮಾಡಿ ಹೊರಗಡೆಯೂ ಕೆಲಸಗಳನ್ನು ಮಾಡುತ್ತಾರೆ. ಮಾನಸಿಕವಾಗಿ ಮಹಿಳೆ ಪುರುಷರಿಗಿಂತಲೂ ಬಲಶಾಲಿ, ಒತ್ತಡದ ಸನ್ನಿವೇಶವನ್ನು ನಿಭಾಯಿಸುವಲ್ಲಿ ಮಹಿಳೆ ಹೆಚ್ಚು ಯಶಸ್ವಿಯಾಗುತ್ತಾಳೆ ಎಂದು ನುಡಿದರು.

ಇನ್ನೋರ್ವ ಮುಖ್ಯಅತಿಥಿಯಾಗಿ ಆಗಮಿಸಿದ ಮಂಗಳೂರು ನಗರದ ಚೀಫ್‍ಟ್ರಾಫಿಕ್ ವಾರ್ಡನ್ ಶ್ರೀ ಸುರೇಶ್‍ನಾಥ್ ಅವರು ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳೆಯರುಗೆ ಶುಭಾಶಯ ತಿಳಿಸಿದರು, ಮಹಿಳೆಯರಿಗೆ ಸಮಾಜದಲ್ಲಿ ಸಮಾನತೆ, ಸ್ವಾಸ್ಥ್ಯ, ಶಿಕ್ಷಣ, ಸ್ವಾವಲಂಬನೆ, ಸಮಾಜಿಕ ನ್ಯಾಯ, ಸಂವೇದನಾ ಶೀಲತೆ ಎಂಬ ಆರು ‘S’ ಸೂತ್ರಗಳ ಮಹತ್ವವನ್ನು ತಿಳಿಸಿ ಅದನ್ನು ಸಿಗುವಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎಂದು ನುಡಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮಾಂಡೊವಿ ಮೋಟರ್ಸ್‍ನ ಡೆಪ್ಯೂಟಿ ಜನರಲ್ ಮ್ಯಾನೇಜರ್ ಶ್ರೀ ಶಶಿಧರ ಟಿ. ಕಾರಂತ ಅವರು ಮಾತನಾಡಿ, ಮಹಿಳಾ ದಿನವನ್ನು ಯಾಕಾಗಿ ಆಚರಿಸುತ್ತಾರೆ ಹಾಗೂ ಆಚರಿಸುವ ಉದ್ದೇಶವನ್ನು ಎಲ್ಲಾ ಮಹಿಳೆಯರಿಗೂ ತಿಳಿಸಿದರು. ಇನ್ನೋರ್ವ ಅಧ್ಯಕ್ಷತೆಯನ್ನು ವಹಿಸಿದ ಮಾಂಡೊವಿ ಮೋಟರ್ಸ್‍ನ ಅಸೋಸಿಯೇಟ್ ವೈಸ್ ಪ್ರೆಸಿಡೆಂಟ್ ಶ್ರೀ ನೆರೆಂಕಿ ಪಾಶ್ರ್ವನಾಥ್ ಅವರು ಮಹಿಳೆಯರಿಗೆ ಶುಭಾಶಯ ತಿಳಿಸಿ ಮಾತನಾಡಿ, ಎಲ್ಲಿ ಹೆಣ್ಣು ಪೂಜಿಸಲ್ಪಡುತ್ತಳೋ, ಗೌರವಿಸಲ್ಪಡುತ್ತಾಳೋ ಅಲ್ಲಿ ದೇವತೆಗಳು ವಾಸಿಸುತ್ತಾರೆ, ಎಲ್ಲಾ ಕ್ಷೇತ್ರಗಳಲ್ಲಿಯೂ ಮಹಿಳೆಯರೇ ಹೆಚ್ಚಿನ ಕೆಲಸಗಳನ್ನು ಮಾಡುತ್ತಾರೆ ಎಂದು ನುಡಿದರು.

ಈ ಸಂದರ್ಭದಲ್ಲಿ ದಕ್ಷಿಣಕನ್ನಡ ಜಿಲ್ಲಾ ಗೃಹರಕ್ಷಕದಳದ ಮಂಗಳೂರು ಘಟಕದ ಗೃಹರಕ್ಷಕಿಯರಾದ ಶುಭ ಮೆ.ನಂ 86, ಜಯಲಕ್ಷ್ಮಿ ಮೆ.ನಂ 95, ನತಾಲಿಯ ಮೆ.ನಂ 170 ಹಾಗೂ ಪೌರಕಾರ್ಮಿಕರಾದ ಸುಮಾ, ರತ್ನಾ ಇವರುಗಳಿಗೆ ಶಾಲು ಹೊದಿಸಿ, ಹಾರ ಹಾಕಿ ಫಲಪುಷ್ಪ ನೀಡಿ ಸನ್ಮಾನಿಸಲಾಯಿತು. ಈ ಕಾರ್ಯಕ್ರಮದ ನಿರೂಪಣೆಯನ್ನು ಮಾಂಡೊವಿ ಮೋಟರ್ಸ್‍ನ ಸೇಲ್ಸ್‍ಎಕ್ಸಿಕ್ಯೂಟಿವ್ ಶ್ರೀ ಮುರಳೀಧರ್ ಅವರು ನಿರ್ವಹಿಸಿದರು. ಶ್ರೀ ಮಾಧವ್ ಉಳ್ಳಾಲ್ ಮತ್ತು ಶ್ರೀಮತಿ ಅನುಪಮಾ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳ ಕಛೇರಿಯ ಅಧೀಕ್ಷಕಿಯಾದ ಶ್ರೀಮತಿ ಕವಿತಾ ಕೆ.ಸಿ., ಪ್ರಥಮ ದರ್ಜೆ ಸಹಾಯಕಿಯಾದ ಶ್ರೀಮತಿ ಅನಿತಾ ಟಿ.ಎಸ್., ಗೃಹರಕ್ಷಕಿಯರಾದ ಮರಿಯಾ ಮೋಲಿ, ಚಂಪಾ, ಸೆಲೆಸ್ಟಿನ್ ಹಾಗೂ ಮಾಂಡೊವಿ ಮೋಟರ್ಸ್‍ನ ಸುಮಾರು 100 ಮಂದಿ ಸಿಬ್ಬಂದಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು

Related Posts

Leave a Reply

Your email address will not be published.