HomeFresh Newsಮಂಗಳೂರು : ಮಹಿಳೆಯರಿಗೆ ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಅರಿವು ಕಾರ್ಯಕ್ರಮ

ಮಂಗಳೂರು : ಮಹಿಳೆಯರಿಗೆ ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಅರಿವು ಕಾರ್ಯಕ್ರಮ

ರೋಟರಿ ಕ್ಲಬ್ ಬೈಕಂಪಾಡಿ ಮತ್ತು ಮಹಿಳಾ ವೇದಿಕೆ ಬಂಟರ ಸಂಘ ಸುರತ್ಕಲ್, ಇವರ ವತಿಯಿಂದ ಇಂದು ವಿಶೇಷವಾಗಿ ಮಹಿಳೆಯರಿಗೆ ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಅರಿವು ಕಾರ್ಯಕ್ರಮ ಬಂಟರ ಭವನ ಸುರತ್ಕಲ್ ನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಕೆಎಂಸಿ ಹಾಸ್ಪಿಟಲ್ ಮಂಗಳೂರು ಇದರ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಮುಖ್ಯಸ್ಥರಾದ ಡಾ. ಎಸ್. ಆರ್. ನಾಯಕ್ ರವರು ಗರ್ಭಕಂಠದ ಕ್ಯಾನ್ಸರ್ ನ ಮುನ್ನೆಚ್ಚರಿಕೆಗಳು ಹಾಗೂ ತಡೆಗಟ್ಟುವಿಕೆಯ ಬಗ್ಗೆ ಉಪಯುಕ್ತವಾದ ಮಾಹಿತಿಯನ್ನು ನೀಡಿದರು. ಅವರೊಂದಿಗೆ ಲೇಡಿ ಗೋಶನ್ ಆಸ್ಪತ್ರೆಯ ಅನಸ್ತೇಶಿಯ ವಿಭಾಗದ ರೋ lಡಾl ರಂಜನ್(ಸಹಾಯಕ ಗವರ್ನರ್ ರೋಟರಿ ವಲಯ 3) ಹಾಗೂ ವಲಯ 2 ಇದರ ಸಹಾಯಕ ಗವರ್ನರ್ ರೋl ವಿಶ್ವನಾಥ್ ಶೆಟ್ಟಿ ಎಂ , ವಲಯ ಸೇನಾನಿ ರೋl ಗಣೇಶ ಎಂ, ಉಪಸ್ಥಿತರಿದ್ದರು.


ರೋಟರಿ ಕ್ಲಬ್ ಅಧ್ಯಕ್ಷರಾದ ಹರೀಶ್ ಬಿ ಶೆಟ್ಟಿ ಪ್ರಸ್ತಾವನೆಗೈದು ಅತಿಥಿಗಳನ್ನು ಸ್ವಾಗತಿಸಿದರು. ಮಹಿಳಾ ವೇದಿಕೆ ಅಧ್ಯಕ್ಷೆ ಭವ್ಯ ಎ ಶೆಟ್ಟಿ ಧನ್ಯವಾದಗೈದರು . ಮಹಿಳಾ ವೇದಿಕೆ ಕಾರ್ಯದರ್ಶಿ ಸುಜಾತ ರವರು ಕಾರ್ಯಕ್ರಮವನ್ನು ನಿರೂಪಿಸಿದರು. ಆನ್ ಪ್ರಜ್ಞಾ ಪ್ರಭುರವರು ಪ್ರಾರ್ಥನೆಗೈದರು.
ಕಾರ್ಯಕ್ರಮದಲ್ಲಿ ಡಾ. ಎಸ್ ಆರ್ ನಾಯಕ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ರೊಟೇರಿಯನ್ ಗಳಾದ ಶ್ರೀಕಾಂತ್ ಶೆಟ್ಟಿ ಬಾಳ ಮತ್ತು ಪುಷ್ಪರಾಜ್ ಶೆಟ್ಟಿ, ಬಿ.ಬಿ. ರೈ ಉಪಸ್ಥಿತರಿದ್ದರು. ರೋಟರಿ ಆನ್ಸ್ ರವರು ಹಾಗೂ ಮಹಿಳಾ ವೇದಿಕೆ ಸದಸ್ಯರು ಸುಮಾರು 70 ಜನ ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments