ಬ್ಯಾಂಕ್‌ನ ಆಡಳಿತ ಮಂಡಳಿಯ 12 ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆ ಎಲ್ಲಾ ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಗಳ ಜಯಭೇರಿ

ಕಡಬ ಸಿ.ಎ.ಕಡಬ, ಜ. 19 ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ಮುಂದಿನ 5 ವರ್ಷಗಳ ಅವಧಿಗೆ 12 ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎಲ್ಲಾ ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ ಅಭ್ಯರ್ಥಿಗಳು ಜಯಭೇರಿ ಬಾರಿಸುವ ಮೂಲಕ ಮತ್ತೆ ಆಡಳಿತದ ಅಧಿಕಾರದ ಉಳಿಸಿಕೊಂಡಿದ್ದಾರೆ. ಸಾಲಗಾರರಲ್ಲದ ಕ್ಷೇತ್ರದಲ್ಲಿ ಸ್ಪರ್ಧಿಸಿದ ಸಂಘದ ನಿಕಟಪೂರ್ವ ಅಧ್ಯಕ್ಷ ರಮೇಶ್ ಕಲ್ಪುರೆ, ಸಾಲಗಾರ ಕ್ಷೇತ್ರದ ಸಾಮಾನ್ಯ ಸ್ಥಾನಕ್ಕೆ ಸ್ಪರ್ಧಿಸಿದ ಗಿರೀಶ್‌ಕುಮಾರ್ ಎ.ಪಿ., ತಮ್ಮಯ್ಯ ಗೌಡ ಸುಳ್ಯ, ಪುರುಷೋತ್ತಮ ಕಲ್ಲಂತಡ್ಕ, ರಘುಚಂದ್ರ ಗೌಡ ಕೊಣಾಜೆ, ರಾಮಚಂದ್ರ ಗೌಡ ಎಲುವಾಳೆ, ಸಾಲಗಾರ ಕ್ಷೇತ್ರದ ಮಹಿಳಾ ಮೀಸಲು ಸ್ಥಾನಕ್ಕೆ ಸ್ಪರ್ಧಿಸಿದ ಲತಾ ರೈ ಎ., ವಸಂತಿ ಗೌಡ ಪುಯಿಲ, ಸಾಲಗಾರ ಕ್ಷೇತ್ರದ ಹಿಂದುಳಿದ ವರ್ಗ ಪ್ರವರ್ಗ ಎ ಮೀಸಲು ಸ್ಥಾನಕ್ಕೆ ಸ್ಪರ್ಧಿಸಿದ ಹರಿಶ್ಚಂದ್ರ ಪಿ., ಸಾಲಗಾರ ಕ್ಷೇತ್ರದ ಹಿಂದುಳಿದ ವರ್ಗ ಪ್ರವರ್ಗ ಬಿ ಮೀಸಲು ಸ್ಥಾನಕ್ಕೆ ಸ್ಪರ್ಧಿಸಿದ ಸತೀಶ್ಚಂದ್ರ ರೈ ಮೈಕಾಜೆ, ಸಾಲಗಾರ ಕ್ಷೇತ್ರದ ಪರಿಶಿಷ್ಟ ಪಂಗಡ ಮೀಸಲು ಸ್ಥಾನಕ್ಕೆ ಸ್ಪರ್ಧಿಸಿದ ಸದಾನಂದ ಪಿ. ಹಾಗೂ ಸಾಲಗಾರ ಕ್ಷೇತ್ರ ದ ಪರಿಶಿಷ್ಟ ಜಾತಿ ಮೀಸಲು ಸ್ಥಾನಕ್ಕೆ ಸ್ಪರ್ಧಿಸಿದ ತನಿಯಪ್ಪ ಅವರು ಜಯಗಳಿಸಿದ ಅಭ್ಯರ್ಥಿಗಳು. ಸ್ಪರ್ಧೆಗೆ ಒಟ್ಟು 31ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, 5ಮಂದಿ ನಾಮಪತ್ರ ಹಿಂದೆಗೆದ ಪರಿಣಾಮಯವಾಗಿ ಒಟ್ಟು 26 ಮಂದಿ ಸ್ಪರ್ಧಾ ಕಣದಲ್ಲಿ ಉಳಿದಿದ್ದರು. ಕಡಬ ಸರಕಾರಿ ಮಾದರಿ ಹಿ.ಪ್ರಾ.ಶಾಲೆಯಲ್ಲಿ ರವಿವಾರ ಚುನಾವಣೆ ನಡೆಯಿತು.

ಕಳೆದ ಅವಽಯಲ್ಲಿ ಸಹಕಾರ ಭಾರತಿ ಮತ್ತು ಕಾಂಗ್ರೆಸ್ ಬೆಂಬಲಿತರ ನಡುವೆ ಒಪ್ಪಂದ ನಡೆದು 9 ಸ್ಥಾನಗಳು ಬಿಜೆಪಿ ಬೆಂಬಲಿತ ಸಹಕಾರ ಭಾರತಿಗೆ ಹಾಗೂ 3 ಸ್ಥಾನಗಳನ್ನು ಕಾಂಗ್ರೆಸ್ ಬೆಂಬಲಿತರಿಗೆ ಹಂಚಿಕೊಂಡ ಕಾರಣದಿಂದಾಗಿ ಚುನಾವಣೆ ನಡೆಯದೆ ಎಲ್ಲಾ ನಿರ್ದೇಶಕರ ಅವಿರೋಧ ಆಯ್ಕೆ ನಡೆದಿತ್ತು. ಸಹಕಾರ ಭಾರತಿಯ ಅಭ್ಯರ್ಥಿಗಳ ಅಭೂತಪೂರ್ವ ಗೆಲುವಿನ ಹಿನ್ನೆಲೆಯಲ್ಲಿ ಕಡಬ ಪೇಟೆಯಲ್ಲಿ ಸಿಹಿ ಹಂಚಿ,ಪಟಾಕಿ ಸಿಡಿಸಿ ಮುಖ್ಯರಸ್ತೆಯಲ್ಲಿ ಮೆರವಣಿಗೆ ಮಾಡುವ ಮೂಲಕ ಹರ್ಷಾಚರಣೆ ನಡೆಸಲಾಯಿತು.

Related Posts

Leave a Reply

Your email address will not be published.