ದ.ಕ. ಜಿಲ್ಲೆಯಲ್ಲಿ 2023ರ ಕರಡು ಮತದಾರರ ಪಟ್ಟಿ ಪ್ರಕಟ
ದಕ್ಷಿಣ ಕನ್ನಡ ಜಿಲ್ಲೆಯ ಮತದಾರರು ಕರಡ ಪಟ್ಟಿ ಪ್ರಕಟಿಸಲಾಗಿದೆ. ಜಿಲ್ಲೆಯಲ್ಲಿ 17,08, 955 ಮತದಾರರಿದ್ದು, 8, 71,364 ಮಹಿಳಾ ಮತ್ತು 8,37,527 ಪುರುಷ ಮತದಾರರಿದ್ದಾರೆ. ಡಿ.8ರ ವರೆಗೆ ಮತದಾರರ ಪಟ್ಟಿ ಪರಿಷ್ಕರಣೆಯ ಹಿನ್ನೆಲೆಯಲ್ಲಿ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸ್ವೀಕರಿಸಲಾಗುವುದು ಎಂದು ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಹೇಳಿದರು.
ಅವರು ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಯ ಹಿನ್ನಲೆಯಲ್ಲಿ ವಿಶೇಷ ನೋಂದಣಿ ಅಭಿಯಾನ ನವೆಂಬರ್ 12, 20, ಡಿಸೆಂಬರ್ 3 ಮತ್ತು ಡಿಸೆಂಬರ್ 4ರಂದು ನಡೆಯಲಿದೆ ಎಂದರು.
ಇನ್ನು ಮುಕ್ಕ ಟೋಲ್‍ಗೇಟ್ ರದ್ದು ಮಾಡುವ ಕುರಿತು ಈಗಾಗಲೇ ಸಂಸದರು ಕೇಂದ್ರ ಭೂಸಾರಿಗೆ ಸಚಿವರಿಗೆ ಒತ್ತಾಯ ಮಾಡಿದ್ದಾರೆ, ಹಾಗಾಗಿ ಶೀಘ್ರ ಈ ಕುರಿತು ಅಂತಿಮ ಅಧಿಸೂಚನೆ ಬರುವ ನಿರೀಕ್ಷೆ ಇದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
ಮರಳಿನ ಸಮಸ್ಯೆ ಬಗ್ಗೆ ತಿಳಿದುಕೊಳ್ಳುತ್ತಿದ್ದೇನೆ. ಈ ಬಗ್ಗೆ ಒಂದು ಹಂತದಲ್ಲಿ ಬೆಂಗಳೂರಿನಲ್ಲಿ ಸದನ ಸಮಿತಿ ಮಟ್ಟದಲ್ಲಿ ಸಭೆ ಕೂಡಾ ನಡೆಸಲಾಗಿದೆ. ಸಮಸ್ಯೆಗಳ ಬಗ್ಗೆ ಚರ್ಚೆ ನಡೆದಿದೆ. ಇಲ್ಲಿ ನಡೆಯುವ ಕಾನೂನು ಸಮ್ಮತವಾದ ಹಾಗೂ ಕಾನೂನುಬಾಹಿರ ಎರಡೂ ಮರಳುಗಾರಿಕೆ ಬಗ್ಗೆ ಪ್ರಸ್ತಾಪ ಆಗಿದೆ. ಕಾನೂನು ಸಮ್ಮತವಾದ ಮರಳುಗಾರಿಕೆ ಸರಿಯಾಗಿ ನಡೆದರೆ ಕಾನೂನು ಬಾಹಿರ ಮರಳುಗಾರಿಕೆ ಕಡಿಮೆಯಾಗಬಹುದು, ಈ ನಿಟ್ಟಿನಲ್ಲಿ ನ.14ರಂದು ಸಭೆ ನಡೆಸಲಾಗುತ್ತಿದೆ ಎಂದರು.