HomeFresh Newsಮಂಗಳೂರು: ವೆನ್‌ ಲಾಕ್, ಪಿಲಿಕುಳ ಅಭಿವೃದ್ಧಿಗೆ ಎಂಆರ್‌ಪಿಎಲ್ ನಿಂದ ನೆರವು

ಮಂಗಳೂರು: ವೆನ್‌ ಲಾಕ್, ಪಿಲಿಕುಳ ಅಭಿವೃದ್ಧಿಗೆ ಎಂಆರ್‌ಪಿಎಲ್ ನಿಂದ ನೆರವು

ಎಂ.ಆರ್.ಪಿ. ಎಲ್. ಸಂಸ್ಥೆ ವತಿಯಿಂದ ಸಿ ಎಸ್ ಆರ್ ನಿಧಿಯಿಂದ ವೆನ್ ಲಾಕ್ ಆಸ್ಪತ್ರೆ ಹಾಗೂ ಪಿಲಿಕುಳ ನಿಸರ್ಗಧಾಮಕ್ಕೆ ಕೊಡುಗೆ ನೀಡಲಾಯಿತು.

 ಲೋಕಸಭಾ ಸದಸ್ಯ ಕ್ಯಾ. ಬ್ರಿಜೇಶ್ ಚೌಟ ಅವರು ಸಿಎಸ್‌ಆರ್ ಪತ್ರವನ್ನು ಅಧಿಕಾರಿಗಳಿಗೆ ವಿತರಿಸಿದರು.

ಈ ನಿಧಿಯಿಂದ ವೆನ್ ಲಾಕ್ ಆಸ್ಪತ್ರೆಯ ಮೆಡಿಸಿನ್ ಬ್ಲಾಕ್ ನಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ನೂತನವಾದ ಸರ್ಜಿಕಲ್ ವಾರ್ಡ್ ನಿರ್ಮಾಣಗೊಳ್ಳಲಿದ್ದು, ಹೊಸದಾಗಿ ೧೩೨ ಹಾಸಿಗೆಗಳು ಸೇರ್ಪಡೆಗೊಳ್ಳಲಿವೆ.

 ಪಿಲಿಕುಳ ವಿಜ್ಞಾನ ಕೇಂದ್ರ ಆವರಣದಲ್ಲಿ  ರೂ. ೫.೪೩ ಕೋಟಿ ವೆಚ್ಚದಲ್ಲಿ ಖಗೋಳ ಶಾಸ್ತ್ರ ಗ್ಯಾಲರಿ ನಿರ್ಮಾಣಗೊಳ್ಳಲಿದೆ.

ಈ ಸಂದರ್ಭದಲ್ಲಿ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್, ಅಪರ ಜಿಲ್ಲಾಧಿಕಾರಿ ಸಂತೋಷ್ ಕುಮಾರ್, ಎಂಆರ್ ಪಿಎಲ್ ಎಂಡಿ ಮುಂಡ್ಕೂರು ಶ್ಯಾಮ್ ಪ್ರಸಾದ್ ಕಾಮತ್,ಜಿ ಜಿ ಎಂ ಕೃಷ್ಣ ಹೆಗ್ಡೆ ಮಿಯಾರ್ , ಸಿ ಜಿ ಎಂ ಮನೋಜ್ ಕುಮಾರ್,  ಮತ್ತು ಜಿ ಎಂ ಪ್ರಶಾಂತ್ ಬಾಳಿಗಾ,ವೆನ್ ಲಾಕ್ ಅಧೀಕ್ಷಕ ಡಾ. ಶಿವಪ್ರಕಾಶ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ, ಪಿಲಿಕುಲ ಆಯುಕ್ತ ಅರುಣ್ ಕುಮಾರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments