ಮಂಗಳೂರು: ಶಾಮ್ ಇನ್ಸ್ಟಿಟ್ಯೂಟ್‌ನ ಫ್ರೆಷರ್‍ಸ್ ಡೇ
ಮಂಗಳೂರಿನ ಕಂಕನಾಡಿಯ ಶಾಮ್ ಇನ್ಸ್ಟಿಟ್ಯೂಟ್‌ನ ಫ್ರೆಷರ್‍ಸ್ ಡೇ ಕಾರ್ಯಕ್ರಮವನ್ನು ನಗರದ ಕೊಡಿಯಾಲ್‌ಬೈಲ್ ನ ದಿ ಓಶಿಯನ್ ಪರ್ಲ್ ಹೋಟೆಲ್ ಸಭಾಂಗಣದಲ್ಲಿ ಸಂಭ್ರಮದಿಂದ ಆಚರಣೆ ಮಾಡಲಾಯಿತು.
ಈಗಾಗಲೇ ಶಿಕ್ಷಣ ಕ್ಷೇತ್ರದಲ್ಲಿ ಕಾಂತ್ರಿ ಮಾಡಿರುವ ಶಾಮಲಾ ಎಜ್ಯುಕೇಷನ್ ಟ್ರಸ್ಟ್‌ನ ಕಂಕನಾಡಿಯ ಶಾಮ್ ಇನ್ಸ್ಟಿಟ್ಯೂಟ್‌ನ ಫ್ರೆಷರ್‍ಸ್ ಡೇ ಕಾರ್ಯಕ್ರಮವನ್ನು ಚಿತ್ರನಟ ಅರವಿಂದ ಬೋಳಾರ್ ಅವರು ಉದ್ಘಾಟಿಸಿದ್ರು. ಈ ವೇಳೆ ಮಾತನಾಡಿದ ಅವರು, ಪ್ರಸ್ತುತ ಕಾಲಘಟದಲ್ಲಿ ಶಾಮ್ ಇನ್ಸ್ಟಿಟ್ಯೂಟ್ ಅತೀ ಅಗತ್ಯವಿದೆ. ವಿದ್ಯಾರ್ಥಿಗಳ ವಿದ್ಯಾರ್ಜನೆ ಇದೊಂದು ಉತ್ತಮ ಶಿಕ್ಷಣ ಸಂಸ್ಥೆಯಾಗಿದೆ. ಆಸ್ಪತ್ರೆಯಲ್ಲಿರುವ ನರ್ಸ್‌ಗಳಿಗೆ ಯಾವ ರೀತಿಯಲ್ಲಿ ಗೌರವ ನೀಡುತ್ತೇವೋ ಅದೇ ರೀತಿಯಲ್ಲಿ ಏರ್ ಶೋನಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೂ ಗೌರವ ನೀಡಬೇಕು. ಶಾಮ್ ಇನ್ಸ್ಟಿಟ್ಯೂಟ್‌ನಲ್ಲೂ ತರಭೇತಿಯನ್ನ ನೀಡಲಾಗುತ್ತಿದೆ. ಇದೇ ವೇಳೆ ಚಲನಚಿತ್ರದ ಡೈಲಾಗ್ ಹೇಳಿ, ವಿದ್ಯಾರ್ಥಿಗಳನ್ನು ಮನರಂಜಿಸಿದರು.
ತದ ಬಳಿಕ ಮಾತನಾಡಿದ ವಿ4ನ್ಯೂಸ್‌ನ ಆಡಳಿತ ನಿರ್ದೇಶಕರ ಲಕ್ಷ್ಮಣ್ ಕುಂದರ್ ಮಾತನಾಡಿ, ಮಾರ್ಕೇಟಿಂಗ್ ಕ್ಷೇತ್ರದ ಬಗೆ ತರಬೇತಿ ನೀಡುವುದಕ್ಕೆ, ನನ್ನಿಂದ ಎಲ್ಲಾ ರೀತಿಯಲ್ಲೂ ಸಹಕಾರ ನೀಡಲಾಗುತ್ತದೆ. ವಿ4ನ್ಯೂಸ್‌ನಲ್ಲಿ ಮಾರ್ಕೇಟಿಂಗ್ ಬಗೆ ಮಾಹಿತಿ ನೀಡಲಾಗುತ್ತದೆ ಎಂದು ಹೇಳಿದರು.
ಶಾಮ್ ಇನ್ಸ್ಟಿಟ್ಯೂಟ್‌ನ ಮುಖ್ಯಸ್ಥರು ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಸಂದೇಶ ಸುವರ್ಣ ಮಾತನಾಡಿ, ಶಾಮ್ ಇನ್ಸ್ಟಿಟ್ಯೂಟ್‌ನಲ್ಲಿ ಎವಿಯೇಷನ್, ಹಾಸ್ಪಿಟ್ಯಾಲಿಟಿ, ರಿಟೇಲ್ ಮತ್ತು ಸೇಲ್ಸ್ ಮತ್ತು ಮಾರ್ಕೇಟಿಂಗ್ ಕ್ಷೇತ್ರದಲ್ಲಿ ವಿಶಿಷ್ಟ ಕೋರ್ಸ್‌ಗಳನ್ನು ನೀಡುತ್ತಿದ್ದು. ವಿದ್ಯಾರ್ಥಿಗಳಿಗೆ ವೃತ್ತಿಜೀವನದ ಹೆಜ್ಜೆ ಇಡುವುದರಲ್ಲಿ ಮಹತ್ತ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಇದೇ ವೇಳೆ ಚಿತ್ರನಟ ಅರವಿಂದ ಬೋಳಾರ್ ಮತ್ತು ವಿ೪ನ್ಯೂಸ್‌ನ ಆಡಳಿತ ನಿರ್ದೇಶಕರ ಲಕ್ಷ್ಮಣ್ ಕುಂದರ್ ಅವರನ್ನು ವೇದಿಕೆಯಲ್ಲಿ ಗೌರವಿಸಲಾಯ್ತು.
ಈ ವೇಳೆ ವೇದಿಕೆಯಲ್ಲಿ ಮ್ಯಾನೇಜರ್ ಮಿಥುನ್ ಬೋಳಾರ್ ಉಪಸ್ಥಿತಿರಿದ್ದರು. ಆರ್‌ಜೆ.ಕೀರ್ತನ್, ಶರಣ್ ಚಿಲಿಂಬಿ, ಹರ್ಪಿತ್, ಡಿಜೆ ಸ್ಯಾಂಡಿ ನೇತೃತ್ವದಲ್ಲಿ ಕಾರ್ಯಕ್ರಮ ಮತ್ತು ನೃತ್ಯ ಕಾರ್ಯಕ್ರಮ ನಡೆಯಿತು.