ಮಂಗಳೂರು : ಐಕ್ಯಮ್ ವಿಶೇಷ ಮಕ್ಕಳ ಶಾಲೆ ಯಲ್ಲಿ ದೀಪಾವಳಿ ಆಚರಣೆ

ಐಕ್ಯಮ್ ವಿಶೇಷ ಮಕ್ಕಳ ಶಾಲೆ ಯಲ್ಲಿ ದೀಪಾವಳಿ ಆಚರಣೆಯು ಅತ್ಯಂತ ವಿಜೃಂಭಣೆಯಿಂದ ಜರಗಿತು. ಈ ಒಂದು ಕಾರ್ಯಕ್ರಮವು ಪೃಥ್ವಿ ಟ್ರಸ್ಟ್ ಸಹಭಾಗಿತ್ವದಲ್ಲಿ ಜರಗಿತ್ತು. ಮುಖ್ಯ ಅತಿಥಿಯಾಗಿ ಮಾಜಿ ಶಾಸಕರು ದಕ್ಷಿಣ ಕ್ಷೇತ್ರ ಮಂಗಳೂರು ಶ್ರೀ ಜೆ ಆರ್ ಲೋಬೊ ಉಪಸ್ಥಿತರಿದ್ದರು.ಇವರು ಐಕ್ಯಮ್ ಶಾಲೆಯ ಮಕ್ಕಳೊಂದಿಗೆ ದೀಪವನ್ನು ಬೆಳಗಿಸಿದರ ಮೂಲಕ ಈ ಕಾರ್ಯಕ್ರಮವನ್ನು ಆರಂಭಿಸಿದರು.ಆ ನಂತರ ಸಭಾ ಕಾರ್ಯಕ್ರಮದಲ್ಲಿ ಮಕ್ಕಳ ಕುರಿತು ಮಾತನಾಡಿದರು.ಇದೇ ವೇಳೆ ಐಕ್ಯಂ ಸಂಸ್ಥೆಯ ವತಿಯಿಂದ ಪರಿಸರವಾದಿ ಪಿ.ಕೃಷ್ಣಪ್ಪ ಅವರನ್ನು ಸನ್ಮಾನಿಸಲಾಯಿತು ಹಾಗೂ ಸ್ವಾಮೀಜಿಗಳಾದ ಶ್ರೀ ದೀಪಾನಂದ ಸ್ವಾಮೀಜಿ ಹಾಗೂ ಗುರೂಜಿಗಳಾದ ಶ್ರೀ ರಘುನಾಥ್ ಗುರೂಜಿ ಈ ಕಾರ್ಯಕ್ರಮಕ್ಕೆ ಹಾಜರಿದ್ದರು.ಅವರನ್ನು ಕೂಡ ಆಯ್ಕೆಯ ಶಾಲೆಯ ಪರವಾಗಿ ಸನ್ಮಾನಿಸಲಾಯಿತು .




.ಈ ಒಂದು ಕಾರ್ಯಕ್ರಮದಲ್ಲಿ ಐಕ್ಯಂ ಶಾಲೆಯಟ್ರಸ್ಟಿಗಳಾದ ಚಂದ್ರಕಲಾ ದೀಪಕ್ ರಾವ್ ಮತ್ತು ರಾಮಚಂದ್ರ ಕುಂದರ್ ಪದ್ಮನಾಭ ಸಾಲಿಯನ್, ಲೋಲಾಕ್ಷಿ ಸಾಲಿಯನ್ ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು, ಚಂದ್ರಕಲಾ ದೀಪಕ್ ರಾವ್ ಅವರು ಶಾಲೆಯ ಕುರಿತು, ಮಕ್ಕಳ ಕಾಳಜಿ ಕುರಿತು ಮಾತನಾಡಿದರು. ಐಕ್ಯಮ್ ಶಾಲೆಯ ತ್ಯರಪಿಸ್ಟ್ ವಿಭಾಗದಿಂದ ಪ್ರಾರ್ಥನೆ ಗೀತೆ ಹಾಗೂ ಗ್ರೂಪ್ ಡ್ಯಾನ್ಸ್, ಹಾಗೂ ವಿದುಷಿ ದೀಕ್ಷಾ ಶೆಟ್ಟಿ ಅವರಿಂದ ಭರತನಾಟ್ಯ ನೃತ್ಯ ನೀಡಿದರು.. ಪೃಥ್ವಿ ಟ್ರಸ್ಟಿನ ಅಧ್ಯಕ್ಷ ಶ್ರೀಮತಿ ಲೊಲಾಕ್ಷಿ ಸಾಲಿಯನ್ ಅವರು ಅವರ ಸಂಘದ ಬಗ್ಗೆ ಒಂದೆರಡು ಮಾತುಗಳನ್ನು ಆಡಿದರು… ಕಾರ್ಯಕ್ರಮದ ಕೊನೆಯ ಘಟ್ಟದಲ್ಲಿ ಆಯ್ಕೆ ಅಧ್ಯಕ್ಷರಾದ ಶ್ರೀಮತಿ ಕಸ್ತೂರಿ ಕುಂದರ್ ಅವರು ಎಲ್ಲರಿಗೂ ವಂದನಾರ್ಪಣೆಯನ್ನು ಮಾಡಿದರು..ಈ ಆಚರಣೆಯು ಪಟಾಕಿಗಳೊಂದಿಗೆ, ಮತ್ತು ರಾತ್ರಿಯ ಭೋಜನದೊಂದಿಗೆ ಕೊನೆ ಗೊಂಡಿತು.
