ಸೆ.11 : ಉಚಿತ ಆರೋಗ್ಯ ಶಿಬಿರ

ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ(ರಿ.) ಉರ್ವಸ್ಟೋರ್, ಮಂಗಳೂರು ಮತ್ತು ಯೆನೆಪೋಯ ವಿಶ್ವವಿದ್ಯಾನಿಲಯ ಮೆಡಿಕಲ್ ಕಾಲೇಜು, ದೇರಳಕಟ್ಟೆ ಇವರ ಸಂಯುಕ್ತ ಸಹಯೋಗದಲ್ಲಿ ಮಂಗಳೂರಿನ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ವನಿತಾಂಗಂಣದಲ್ಲಿ ಸೆ.11ರಂದು ಪೂರ್ವಾಹ್ನ 9ರಿಂದ ಅಪರಾಹ್ನ 3ರ ರವೆರೆಗೆ ಉಚಿತಾ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ.
ಶಿಬಿರದಲ್ಲಿ ರಕ್ತದೊತ್ತಡ ಪರೀಕ್ಷೆ ಹಾಗೂ ರಕ್ತದ ವಿಂಗಡನೆ, ಮಧುಮೇಹ, ಹಿಮೋಗ್ಲೋಬಿನ್ ಪರೀಕ್ಷೆ, ಸ್ತ್ರೀಯರ ಮಾಮೊಗ್ರಾಫಿ, ಪಾಪ್ ಪರೀಕ್ಷೆ ನಡೆಯಲಿದ್ದು, ಸ್ತ್ರೀ ರೋಗ ತಜ್ಞರು, ಮೆಡಿಸಿನ್ ವಿಭಾಗ ತಜ್ಞರು, ದಂತ ವೈದ್ಯಕೀಯ ವಿಭಾಗ ತಜ್ಞರು, ಹೃದಯ ರೋಗ ತಜ್ಞರು ಭಾಗವಹಿಸಲಿರುವರು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9448953404, 9480532330