ಮಂಗಳೂರು : ಹೀರೋ ಮೋಟೋಕಾರ್ಪ್ನ ಎಕ್ಸ್ಕ್ಲೂಸಿವ್ ಎಲೆಕ್ಟ್ರಿಕ್ ಹೀರೋ ವಿಡಾ ಹಬ್ ಶೋರೂಂ ಮಂಗಳೂರಿನಲ್ಲಿ ಲೋಕಾರ್ಪಣೆ…
ಭಾರತೀಯ ಗ್ರಾಹಕರ ವಿವಿಧ ಬೇಡಿಕೆಗಳಿಗೆ ಅನುಗುಣವಾಗಿ ದ್ವಿಚಕ್ರವಾಹನಗಳ ಮಾರಾಟ ಮತ್ತು ಸೇವೆಯಲ್ಲಿ ಮುಂಚೂಣಿಯಲ್ಲಿರುವ ಹೀರೋ ಮೋಟೋಕಾರ್ಪ್ನ ವಿಡಾ ಹಬ್ ಎಕ್ಸ್ಕ್ಲೂಸಿವ್ ನೂತನ ಎಲೆಕ್ಟ್ರಿಕ್ ಶೋರೂಂ ಮಂಗಳೂರಿನ ವೆಲೆನ್ಸಿಯಾದಲ್ಲಿ ಲೋಕಾರ್ಪಣೆಗೊಂಡಿತು.
ದೇಶದ ಅತ್ಯುನ್ನತ ದ್ವಿಚಕ್ರವಾಹನಗಳ ಉತ್ಪಾದನಾ ಕ್ಷೇತ್ರದಲ್ಲಿ ಮೈಲಿಗಲ್ಲು ಸಾಧಿಸಿರುವ ಹೀರೋ ಮೋಟೋಕಾರ್ಪ್ ಗ್ರಾಹಕರ ಮನೆಮಾತಾಗಿದೆ. ಪರಿಸರ ಸ್ನೇಹಿ ಹಾಗೂ ಇಂದಿನ ಗ್ರಾಹಕರಿಗೆ ಅಗತ್ಯವಾಗಿರುವ ತಂತ್ರಜ್ಞಾನಗಳನ್ನೊಳಗೊಂಡ ಎಲೆಕ್ಟ್ರಿಕ್ ಹೀರೋ ವಿಡಾ ಈಗಾಗಲೇ ಗ್ರಾಹಕರ ಮನೆ ಮನ ಗೆದ್ದಿದೆ. ಕರ್ನಾಟಕದ 5ನೇ ಹೀರೋ ವಿಡಾ ಹಬ್ ಎಲೆಕ್ಟ್ರಿಕ್ ಶೋರೂಂಗೆ ಮಂಗಳೂರಿನ ವೆಲೆನ್ಸಿಯಾದಲ್ಲಿ ಹೀರೋ ಅಂಆ ಮುಖ್ಯಸ್ಥ ಶೈಲೇಶ್ ಭಟ್ ರಿಬ್ಬನ್ ಕತ್ತರಿಸಿ ಚಾಲನೆ ನೀಡಿದರು.ಈ ಸಂದರ್ಭ ಹೀರೋ ಮಾರಾಟ ವಿಭಾಗದ ASM ಚಂದ್ರಶೇಖರ್ ತ್ರಿಪಾಠಿ , ದಕ್ಷಿಣ ವಿಭಾಗದ CAD ಮುಖ್ಯಸ್ಥ ಪ್ರೀತಂ ಕುಮಾರ್ ಜೊತೆಗೆ ವಿಶೇಷ ಅತಿಥಿಯಾಗಿ ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್ , ಡ್ಯಾನ್ಸರ್ ಅದ್ವಿಕಾ ಶೆಟ್ಟಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.
ವೆಸ್ಟ್ ಕೋಸ್ಟ್ ಸಮೂಹ ಸಂಸ್ಥೆಗಳ ಎಂ.ಡಿಗಳಾದ ಮಹಮ್ಮದ್ ರಫೀಕ್, ಮಹಮ್ಮದ್ ಇಸ್ಮಾಯಿಲ್ , ಮಹಮ್ಮದ್ ಖಾದರ್ ಸೇರಿದಂತೆ ಜನರಲ್ ಮ್ಯಾನೇಜರ್ ಸಂದೀಪ್ ಕುಮಾರ್ ಜೊತೆಗಿದ್ದರು. ಕಾರ್ಯಕ್ರಮದಲ್ಲಿ ಪರಿಸರ ಪ್ರೇಮಿ ಸಾವಿರಾರು ಗಿಡಗಳನ್ನು ನೆಟ್ಟು ಪೋಷಿಸುತ್ತಿರುವ ಜೀತ್ ಮಿಲನ್ ರೋಚ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವಿಡಾ ಎಲೆಕ್ಟ್ರಿಕ್ ವಾಹನಗಳ ಗ್ರಾಹಕರಿಗೆ ನೂತನ ಎಲೆಕ್ಟ್ರಿಕ್ ವಾಹನಗಳ ಕೀಲಿ ಕೈ ಯನ್ನು ಅರವಿಂದ ಬೋಳಾರ್ ಹಸ್ತಾಂತರಿಸಿದರು.
ಇದೇ ವೇಳೆ ಅತಿಥಿಗಳು 30ಕ್ಕೂ ಹೆಚ್ಚು ಮಂದಿಗೆ ವಿವಿಧ ಬಗೆಯ ಹಣ್ಣುಗಳ ಉಚಿತ ಸಸಿ ವಿತರಣೆ ಮಾಡುವ ಮೂಲಕ ಮಾದರಿಯಾಗಿ ಪರಿಸರಯುಕ್ತ ಕಾರ್ಯಕ್ರಮ ನಡೆಸಲಾಯಿತು. ನಿರೂಪಕ ನಿಖಿಲ್ ಶೆಟ್ಟಿ ಕಾರ್ಯಕ್ರಮ ನಿರೂಪಣೆ ಮಾಡಿದರು. ವೆಸ್ಟ್ ಕೋಸ್ಟ್ ಮೋಟಾರ್ಸ್ ಸಿಬ್ಬಂದಿಗಳು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ,ಗ್ರಾಹಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.