ಕಸ್ತೂರ್ಬಾ ಆಸ್ಪತ್ರೆಯ ಕಾರ್ಪೊರೇಟ್ ಕ್ರಿಕೆಟ್ ಲೀಗ್ (ಕೆ ಎಚ್ -ಸಿ ಸಿ ಎಲ್) 2022 ಉದ್ಘಾಟನೆ

ಮಣಿಪಾಲ 16ನೇ ಡಿಸೆಂಬರ್ 2022:ಕಸ್ತೂರ್ಬಾ ಆಸ್ಪತ್ರೆ ಮಣಿಪಾಲವು ಕಾರ್ಪೊರೇಟ್ ಕಂಪನಿ , ಬ್ಯಾಂಕ್ ಗಳು , ವೈದ್ಯಕೀಯ ಸಂಘ, ಆಸ್ಪತ್ರೆಗಳು ಮತ್ತು ಮಾಧ್ಯಮ ಮಿತ್ರರಿಗಾಗಿ 3 ದಿನಗಳ ಕಾಲ ಸೌಹಾರ್ದಯುತವಾಗಿ ಕಸ್ತೂರ್ಬಾ ಆಸ್ಪತ್ರೆ ಕಾರ್ಪೊರೇಟ್ ಕ್ರಿಕೆಟ್ ಲೀಗ್ (ಕೆ ಎಚ್ -ಸಿ ಸಿ ಎಲ್)2022 ಆಯೋಜಿಸಿದೆ. ಇಂದು ನಡೆದ ಸರಳ ಕಾರ್ಯಕ್ರಮದಲ್ಲಿ ಮಾಹೆ ಮಣಿಪಾಲದ ಸಹ ಕುಲಾಧಿಪತಿಗಳಾದ ಡಾ. ಎಚ್ ಎಸ್ ಬಲ್ಲಾಳ್ ಅವರು ಟ್ರೋಪಿ ಅನಾವರಣ ಮಾಡಿ ಮೊದಲ ಪಂದ್ಯಕ್ಕೆ ಟಾಸ್ ಮಾಡುವುದರ ಮೂಲಕ ಕಸ್ತೂರ್ಬಾ ಆಸ್ಪತ್ರೆ ಸಿ ಸಿ ಎಲ್ 2022 ಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಅವರು ಮಾತನಾಡುತ್ತಾ “ಮಾಹೆ ಮಣಿಪಾಲವು ಯಾವಾಗಲೂ ಕ್ರೀಡೆ ಮತ್ತು ಇತರ ಪಠ್ಯೇತರ ಚಟುವಟಿಕೆಗಳಿಗೆ ತುಂಬಾ ಬೆಂಬಲ ನೀಡುತ್ತದೆ. ಇದರ ಅಂಗವಾಗಿ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲವು ಕಾರ್ಪೊರೇಟ್ ಕ್ರಿಕೆಟ್ ಲೀಗ್ (ಕೆ ಎಚ್ -ಸಿ ಸಿ ಎಲ್)2022 ಆಯೋಜಿಸಿದೆ” ಎಂದರು.

ಈ ಸಂದರ್ಭದಲ್ಲಿ ಮಾಹೆ ಮಣಿಪಾಲದ ಉಪ ಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ) ಎಂ ಡಿ ವೆಂಕಟೇಶ್ ಅವರು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ 2023ರ ಕ್ಯಾಲೆಂಡರ್ ಬಿಡುಗಡೆ ಮಾಡಿದರು. ಮಣಿಪಾಲ್ ಕಾಲೇ ಜ್ ಆಫ್ ಹೆಲ್ತ್ ಪ್ರೊಫೆಷನ್ಸ್ ಇದರ ಡೀನ್ ಡಾ ಜಿ ಅರುಣ್ ಮಯ್ಯ , ಮಾಹೆ ಮಣಿಪಾಲದ ಸಿ ಒ ಒ ಶ್ರೀ ಸಿ ಜಿ ಮುತ್ತಣ್ಣ , ಮಣಿಪಾಲದ ಬೋಧನಾ ಆಸ್ಪತ್ರೆಗಳ ಸಿ ಒ ಒ ಡಾ. ಆನಂದ್ ವೇಣುಗೋಪಾಲ್ , ವೈದ್ಯಕೀಯ ಅಧೀಕ್ಷಕರಾದ ಡಾ. ಅವಿನಾಶ ಶೆಟ್ಟಿ ಮತ್ತು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಕ್ರಿಕೆಟ್ ಟೂರ್ನಮೆಂಟ್ 16ನೇ ಡಿಸೆಂಬರ್ 2022ರಿಂದ 18ನೇ ಡಿಸೆಂಬರ್ 2022ರ ವರೆಗೆ ಮಣಿಪಾಲದ ಎಂಡ್ ಪಾಯಿಂಟ್ ಮೈದಾನದಲ್ಲಿ ನಡೆಯಲಿದೆ, ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳ ಸುಮಾರು 24 ತಂಡಗಳು ಈ ವರ್ಷ ಭಾಗವಹಿಸುತ್ತಿವೆ.

Related Posts

Leave a Reply

Your email address will not be published.