ಕಾಪು: ಗುರ್ಮೆ ಸುರೇಶ್ ಶೆಟ್ಟಿಯವರು ಮಣಿಪಾಲ್ ಯುಟಿಲಿಟಿ ಟೆಕ್ನಾಲಜಿ ಲಿಮಿಟೆಡ್ ಗೆ ಭೇಟಿ ನೀಡಿ ಮತಯಾಚನೆ
ಕಾಪು ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾಗಿರುವ ಗುರ್ಮೆ ಸುರೇಶ್ ಶೆಟ್ಟಿಯವರು ಇಂದು ಬಡಗಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಶಿವಳ್ಳಿ ಪ್ರದೇಶದ ಮಣಿಪಾಲ್ ಯುಟಿಲಿಟಿ ಟೆಕ್ನಾಲಜಿ ಲಿಮಿಟೆಡ್ ಗೆ ಭೇಟಿ ನೀಡಿ ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ,ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಉಪೇಂದ್ರ ನಾಯಕ್,ಬಡಗಬೆಟ್ಟು ಮಹಾಶಕ್ತಿ ಕೇಂದ್ರ ಅಧ್ಯಕ್ಷರು ಸಂದೀಪ್ ಶೆಟ್ಟಿ, ಬಿಜೆಪಿ ಪ್ರಮುಖರು ಸಂತೋಷ್ ಬೊಲ್ಜೆ, ನಜಿರ್ ಶೇಕ್,ಪ್ರವೀಣ್ ಪೂಜಾರಿ ಹಿರೇಬೆಟ್ಟು,ಹಿರಿಯಡ್ಕ ಪಂಚಾಯತ್ ಸದಸ್ಯರು ಹರೀಶ್ ಸಾಲ್ಯಾನ್ ಹಾಗೂ ಪಕ್ಷದ ಕಾರ್ಯಕರ್ತರು ಬಿಜೆಪಿ ಪ್ರಮುಖರು ಉಪಸ್ಥಿತರಿದ್ದರು.