ಕಾಪು : ಮಣಿಪಾಲ್ ಟೆಕ್ನಾಲಜೀಸ್  ಲಿಮಿಟೆಡ್ ಯೂನಿಟ್  ನಲ್ಲಿ ಗುರ್ಮೆ ಸುರೇಶ್ ಶೆಟ್ಟಿ ಮತಯಾಚನೆ

ಕಾಪು ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾಗಿರುವ ಗುರ್ಮೆ ಸುರೇಶ್ ಶೆಟ್ಟಿಯವರು ಇಂದು ಮಣಿಪಾಲ್ ನಗರ ವ್ಯಾಪ್ತಿಯ  ಮಣಿಪಾಲ್ ಟೆಕ್ನಾಲಜೀಸ್ ಲಿಮಿಟೆಡ್ ಯೂನಿಟ್ lV ಗೆ ಭೇಟಿ ನೀಡಿ ಮಾತಾಯಾಚನೆ ಮಾಡಿದರು.

ಸಂಧರ್ಭದಲ್ಲಿ ಮಾತನಾಡಿದ ಶ್ರೀ ಲಾಲಾಜಿ ಮೆಂಡನ್ ರವರು ನನ್ನ ಅಧಿಕಾರದ ಅವಧಿಯಲ್ಲಿ ಕಾಪು ಕ್ಷೇತ್ರಕ್ಕಾಗಿ ಹಗಲಿರುಳು ದುಡಿದಿದ್ದೇನೆ ಇನ್ನು ಜವಾಬ್ದಾರಿಯನ್ನು ಗುರ್ಮೆ ಸುರೇಶ್ ಶೆಟ್ಟಿಯವರು ಚೆನ್ನಾಗಿ ನಿಭಾಯಿಸಲಿದ್ದಾರೆ ಎಂದು ಹೇಳಿದರು.ಅದಕ್ಕಾಗಿ ನಿಮ್ಮ ಬೆಂಬಲ ಅವರಿಗೆ ಸಂಪೂರ್ಣವಾಗಿ ನೀಡಬೇಕು ಎಂದು ಕೇಳಿಕೊಂಡರು.

ಸಂಧರ್ಭದಲ್ಲಿ ಮಾತನಾಡಿದ ಗುರ್ಮೆ ಸುರೇಶ್ ಶೆಟ್ಟಿಯವರು ನನ್ನ ಸಾಮಾಜಿಕ ಶೈಕ್ಷಣಿಕ ಸೇವಾ ಕಾರ್ಯಗಳನ್ನು ನೋಡಿ ಹಾಗೂ ನಾನು ಮಾಡಿದ ಕೆಲಸವನ್ನು ನೋಡಿ ನನಗೆ ಜವಾಬ್ದಾರಿಯನ್ನು ಕೊಟ್ಟಿದೆ. ಹಾಗಾಗಿ ಕಾಪು ಕ್ಷೇತ್ರ ವನ್ನು ಒಂದು ಮಾದರಿ ಕ್ಷೇತ್ರವನ್ನಾಗಿ ಅಭಿವೃದ್ಧಿಗೊಳಿಸುವ ಕನಸು ಇದೆ ಎಂದು ಹೇಳಿದರು ಇದಕ್ಕೆ ನಿಮ್ಮ ಬೆಂಬಲ ಅಗತ್ಯ ಮೇ 10 ರಂದು ತಪ್ಪದೆ ಮತದಾನ ಮಾಡಿ ಕಾಪು ಕ್ಷೇತ್ರದ ಅಭಿವೃದ್ಧಿಗೆ ಕಾರಣವಾಗಬೇಕು ಎಂದು ಹೇಳಿದರು.

ಸಂದರ್ಭದಲ್ಲಿ,ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಉಪೇಂದ್ರ ನಾಯಕ್, ಉದ್ಯಮಿಯಾದ ದಿನೇಶ್, ಮಾನವ ಸಂಪನ್ಮೂಲದ  ಮುಖ್ಯಸ್ಥರು ಶ್ರೀನಿವಾಸ್ ರಾವ್, ಹಾಗೂ ಯುನಿಟ್ ಹೆಡ್ ಸತೀಶ್ ಪ್ರಭು, ಮಣಿಪಾಲ್ ಟೆಕ್ನಾಲಜೀಸ್ ನ AVP  ಪ್ರಸಾದ್,ಹಾಗೂ ಪಕ್ಷದ ಕಾರ್ಯಕರ್ತರು ಹಾಗೂ ಕಾರ್ಮಿಕರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.