HomeFresh Newsಮಂಜೇಶ್ವರ: ದರೋಡೆಗೆ ಯತ್ನ ಪ್ರಕರಣ: ಪರಾರಿಯಾಗಿದ್ದ ಓರ್ವನ ಸೆರೆ

ಮಂಜೇಶ್ವರ: ದರೋಡೆಗೆ ಯತ್ನ ಪ್ರಕರಣ: ಪರಾರಿಯಾಗಿದ್ದ ಓರ್ವನ ಸೆರೆ

ಮಂಜೇಶ್ವರ: ಬ್ಯಾಂಕ್ ದರೋಡೆಗೈಯಲು ಹೊಂಚು ಹಾಕಿ ಮಾರಕಾಯುಧಗಳ ಸಹಿತ ಕಾರಿನಲ್ಲಿ ಸಂಚರಿಸುತ್ತಿರುವ ಮಧ್ಯೆ ಊರವರು ಬೆನ್ನಟ್ಟಿ ಹಿಡಿಯುವಾಗ ಪರಾರಿಯಾದ ನಾಲ್ಕು ಮಂದಿ ಆರೋಪಿಗಳ ಪೈಕಿ ಒಬ್ಬನನ್ನು ಮಂಜೇಶ್ವರ ಪೊಲೀಸರು ಸೆರೆ ಹಿಡಿದಿದ್ದಾರೆ.

ಕಾಸರಗೋಡು ಪರಿಸರವಾಸಿಯಾದ ಈತ ಹಲವು ಕಳವು ಪ್ರಕರಣಗಳಲ್ಲಿ ಆರೋಪಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
2024 ಫೆಬ್ರವರಿ 8ರಂದು ಅಡ್ಯನಡ್ಕದ ಕರ್ನಾಟಕ ಬ್ಯಾಂಕ್‌ ಶಾಖೆ ಕಳವು ಪ್ರಕರಣದ ಆರೋಪಿಗಳಲ್ಲಿ ಈತನೂ ಒಳಗೊಂಡಿದ್ದಾನೆ. ಈತನ ಸಹಿತ ಕಳವು ತಂಡವನ್ನು ಪೊಲೀಸರು ಬಂಧಿಸಿದ್ದರೂ ಕಳವಿಗೀಡಾದ ಸೊತ್ತುಗಳನ್ನು ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ.

ಕಾಸರಗೋಡಿನ ಕಲಂದರ್, ಸುಳ್ಯ ಕೊಯ್ದದ ರಫೀಕ್ ಯಾನೆ ಗೂಡಿನ ಬಳಿ ರಫೀಕ್, ಪೈವಳಿಕೆ ಬಾಯಾರಿನ ದಯಾನಂದ ಎಂಬಿವರನ್ನು ಅಡ್ಯನಡ್ಕ ಬ್ಯಾಂಕ್ ಕಳವು ಪ್ರಕರಣದಲ್ಲಿ ವಿಟ್ಲ ಪೊಲೀಸರು ಅಂದು ಸೆರೆಹಿಡಿದಿದ್ದರು. ಈ ಪೈಕಿ ಕಲಂದರ್ ವಿರುದ್ಧ ಕೇರಳ ಹಾಗೂ ಕರ್ನಾಟಕದಲ್ಲಿ ನಡೆದ ಹಲವು ಕಳವು ಪ್ರಕರಣ ಸಂಬಂಧ ಕೇಸುಗಳಿವೆಯೆಂದು ಪೊಲೀಸರು ತಿಳಿಸಿದ್ದಾರೆ.
ಬಾನುವಾರ ಮುಂಜಾನೆ ದೈಗೋಳಿಯಲ್ಲಿ ಅಪರಿಚಿತ ತಂಡ ಅನುಮಾನಾಸ್ಪದ ರೀತಿಯಲ್ಲಿ ಕಾರಿನಲ್ಲಿ ತಿರುಗಾಡುವುದನ್ನು ಗಮನಿಸಿದ ಸ್ಥಳೀಯರು ಕಾರನ್ನು ಬೆನ್ನಟ್ಟಿದಾಗ ನಾಲ್ಕು ಮಂದಿ ಪರಾರಿಯಾಗಿ ಇಬ್ಬರು ಕೈಗೆ ಸಿಕ್ಕಿದ್ದರು. ಬಳಿಕ ಪೊಲೀಸರಿಗೆ ಹಸ್ತಾಂತರಿಸಲಾಗಿತ್ತು

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments