ಮಂಜೇಶ್ವರ : ಶಾಲು ಗ್ರೈಂಡರ್ ಗೆ ಸಿಲುಕಿ ಗೃಹಿಣಿಯ ದಾರುಣ ಸಾವು

ಮಂಜೇಶ್ವರ : ಗೃಹಿಣಿಯೊಬ್ಬಳು ಮಕ್ಕಳನ್ನು ಶಾಲೆಗೆ ಕಳಿಸಲು ತಿಂಡಿ ತಯಾರಿಸುವ ತರಾತುರಿಯಲ್ಲಿ ಶಾಲ್ ಗ್ರೈಂಡರ್ ಗೆ ಸಿಲುಕಿ ದಾರುಣವಾಗಿ ಸಾವನ್ನಪ್ಪಿದ್ದಾಳೆ.

ಬುಧವಾರ ಮುಂಜಾನೆ 7 ಗಂಟೆಯ ಸುಮಾರಿಗೆ ಉಪ್ಪಳ ಗೇಟ್ ಅಪ್ನಾ ಗಲ್ಲಿಯಲ್ಲಿ ಈ ದುರ್ಘಟನೆ ಸಂಭವಿಸಿದೆ.
ಉಪ್ಪಳ ಗೇಟ್ ಅಪ್ನಾ ಗಲ್ಲಿ ನಿವಾಸಿ ಮುಂಬೈಯಲ್ಲಿ ಉದ್ಯಮಿಯಾಗಿರುವ ಇಬ್ರಾಹಿಂ ಎಂಬವರ ಪತ್ನಿ ಮೈಮೂನ (40) ಸಾವನ್ನಪ್ಪಿದ ದುರ್ದೈವಿ.

ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.

add - Rai's spices

Related Posts

Leave a Reply

Your email address will not be published.