ಮಂಜೇಶ್ವರ: ಶಾರದಾ ಆರ್ಟ್ಸ್ ಮಂಜೇಶ್ವರ ಮತ್ತು ಐಸಿರಿ ಕಲಾವಿದರಿಂದ ಹೊಸ ನಾಟಕಕ್ಕೆ ಶುಭ ಮುಹೂರ್ತ

ಶಾರದಾ ಆರ್ಟ್ಸ್ ತಂಡದ ಐಸಿರಿ ಕಲಾವಿದರು ಮಂಜೇಶ್ವರ ಅಭಿನಯಿಸುವ ಜೈ ಭಜರಂಗಬಲಿ ತುಳು ಚಾರಿತ್ರಿಕ ಮತ್ತು ಸಾಮಾಜಿಕ ನೀತಿಭೋದಕ ನಾಟಕ ಮತ್ತು ಶಾರದಾ ಆರ್ಟ್ಸ್ ಕಲಾವಿದೆರೆ ಮಂಜೇಶ್ವರ ಅಭಿನಯಿಸುವ ದಾನೆ ದೇವರೆ ತುಳು ಸಾಮಾಜಿಕ ಹಾಸ್ಯಮಯ ನಾಟಕದ ಶುಭಮುಹೂರ್ತ ಕಾರ್ಯಕ್ರಮವು ಕಡಂಬಾರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆಯಿತು.

ನಾಟಕ, ರಂಗಭೂಮಿ ಕ್ಷೇತ್ರದಲ್ಲಿಯೇ ತನ್ನದೇ ಆದ ಚಾಪನ್ನು ಮೂಡಿಸುತ್ತಿರುವ ಶಾರದಾ ಆರ್ಟ್ಸ್ ತಂಡದ ಐಸಿರಿ ಕಲಾವಿರದು ಮತ್ತು ಶಾರದಾ ಆರ್ಟ್ಸ್ ಕಲಾವಿದರು ಉತ್ತಮ ಸಂದೇಶ ಮತ್ತು ಕಥಾ ಹಂದರವನ್ನು ಹೊಂದಿರುವ ನಾಟಕಗಳನ್ನು ಪ್ರದರ್ಶಿಸುತ್ತಿರುವುದು ಹೆಮ್ಮೆಯ ವಿಚಾರ..


ಎಡ್ಡೆಡುಪ್ಪುಗ, ಸಾದಿ ತಪ್ಪೂಚ್ಚಿ, ಆರ್ ಪನ್ಲೇಕ, ಸುದ್ದಿ ತಿಕ್ಕುಂಡು, ನಿತ್ಯ ಬನ್ನಗ, ಮಲ್ಲ ಸಂಗತಿಯೇ ಅತ್ತ್, ಕಥೆ ಎಡ್ಡೆಂಡು, ಕಲ್ಜಿಗದ ಮಾಯ್ಕಾರೆ ಪಂಜುರ್ಲಿಯಂತಹ ಹಿಟ್ ನಾಟಕವನ್ನು ಪ್ರದರ್ಶಿಸಿದ ಹೆಗ್ಗಳಿಕೆ ಇರುವ ತಂಡದಿಂದ ಇದೀಗ ಹೊಸ ನಾಟಕಕ್ಕೆ ಮುನ್ನುಡಿ ಬರೆದಿದೆ. ಜೈ ಭಜರಂಗಬಲಿ ಮತ್ತು ದಾನೆ ದೇವರೆ ಎಂಬ ಎರಡು ನಾಟಕಗಳ ಮುಹೂರ್ತ ಕಾರ್ಯಕ್ರಮವು ಕಡಂಬಾರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಶಾರದಾ ಆರ್ಟ್ಸ್ ಮಂಜೇಶ್ವರ ರಿಜಿಸ್ಟರ್ ನ ಮಾಲಕರಾದ ಕೃಷ್ಣ ಜಿ ಮಂಜೇಶ್ವರ ಅವರ ಧರ್ಮಪತ್ನಿ ಜಯ ಲಕ್ಷ್ಮಿ , ಜೆಪಿ ತುಮಿನಾಡು, ಪುಷ್ಪರಾಜ್ ಬೊಳ್ಳರ್ ಮತ್ತು ಎರಡು ತಂಡದ ಕಲಾವಿದರುಗಳು ಮತ್ತಿತರರು ಉಪಸ್ಥಿತರಿದ್ದರು.