ಮಂಜೇಶ್ವರ ಮತ್ತು ಉಪ್ಪಳ ಪರಿಸರದಲ್ಲಿ ಮಾದಕ ವಸ್ತು ಮಾರಾಟ : ಮೂವರನ್ನು ವಶಕ್ಕೆ ಪಡೆದ ಮಂಜೇಶ್ವರ ಪೊಲೀಸರು

ಉಪ್ಪಳ ಹಾಗೂ ಮಂಜೇಶ್ವರ ಪರಿಸರಗಳಲ್ಲಿ ವ್ಯಾಪಕವಾಗಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಮೂವರನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಮಂಜೇಶ್ವರ ಪೊಲೀಸರು 18.2 ಗ್ರಾಂ ಎಂಡಿಎಂಎ ಆರೋಪಿಗಳಿಂದ ವಶಪಡಿಸಿಕೊಂಡಿದ್ದಾರೆ. ಉಪ್ಪಳ ಕೋಡಿವಯಲ್‍ನ ಮುಹಮ್ಮದ್ ಕಾಸಿಂ, ಮಂಜೇಶ್ವರ ಕುಂಜತ್ತೂರು ಬಾಚಲಿಕದ ಅಬ್ದುಲ್ ಸವಾಸ್ ಮತ್ತು ಉಪ್ಪಳ ಬಪೈತೊಟ್ಟಿಯ ಮುಹಮ್ಮದ್ ನಾಸೀರ್ ಬಂಧಿತ ಆರೋಪಿಗಳು.ಠಾಣಾಧಿಕಾರಿ ಎ.ಸಂತೋಷ್ ಕುಮಾರ್ ಮತ್ತು ಎಸ್‍ಐ ರಜಿತ್ ನೇತೃತ್ವದ ಮಂಜೇಶ್ವರ ಪೆÇಲೀಸ್ ತಂಡವು ಆರೋಪಿಗಳನ್ನು ಉಪ್ಪಳ ಮಣ್ಣಂ ಕುಝಿ ಕ್ರೀಡಾಂಗಣದ ಬಳಿ ಮಾದಕ ದ್ರವ್ಯ ವಿನಿಮಯಕ್ಕಾಗಿ ಕಾಯುತ್ತಿದ್ದಾಗ ಬಂಧಿಸಿದೆ. ಸ್ಕೂಟರ್ ಪರಿಶೀಲಿಸಿದಾಗ ಎಂಡಿಎಂಎ ಮಾದಕ ವಸ್ತು ಪತ್ತೆಯಾಗಿದೆ.

Related Posts

Leave a Reply

Your email address will not be published.