ಉದ್ಯಮಿ ಸದಾಶಿವ ಕೆ. ಶೆಟ್ಟಿ ಅವರಿಗೆ ಹುಟ್ಟೂರ ಸನ್ಮಾನ
ಎಪ್ರಿಲ್ 20ರಂದು ಶ್ರೀ ವನಶಾಸ್ತಾವೇಶ್ವರ ದೇವಸ್ಥಾನದಲ್ಲಿ ಕಾರ್ಯಕ್ರಮ ಮಂಜೇಶ್ವರ ಕೊಡಿಮಾರು ಕುಳೂರಿನ ಶ್ರೀ ವನಶಾಸ್ತಾವೇಶ್ವರ ದೇವಸ್ಥಾನದ ಪ್ರತಿಷ್ಠಾ ವರ್ಧಂತಿ ಹಾಗೂ ನಾಗದರ್ಶನ ಕಾರ್ಯಕ್ರಮದಲ್ಲಿ ಕೊಡುಗೈ ದಾನಿ ಹಾಗೂ ಹೇರಂಬ ಇಂಡಸ್ಟ್ರೀಸ್ ಲಿಮಿಟೆಡ್ ಕಂಪನಿಯ ಸ್ಥಾಪಕಾಧ್ಯಕ್ಷರಾದ ಉದ್ಯಮಿ ಸದಾಶಿವ ಕೆ ಶೆಟ್ಟಿ ಕುಳೂರು ಕನ್ಯಾನ ಇವರಿಗೆ ಎಪ್ರಿಲ್ 20 ಗುರುವಾರದಂದು ರಾತ್ರಿ 8 ಗಂಟೆಗೆ ಹುಟ್ಟೂರ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ ಎಂದು ಹಿರಿಯ ಕನ್ನಡ ಚಲನಚಿತ್ರ ನಟ ಬ್ಯಾಂಕ್ ಜನಾರ್ಧನ್ ಅವರು ಶುಭಹಾರೈಸಿದ್ದಾರೆ. ಈ ಕಾರ್ಯಕ್ರಮವು ವಿ4 ನ್ಯೂಸ್‍ನ ಯ್ಯೂಟೂಬ್ ಚಾನಲ್‍ನಲ್ಲಿ ನೇರಪ್ರಸಾರಗೊಳ್ಳಲಿದೆ.