ತುಳು ರಂಗ ಭೂಮಿ ಹಾಗೂ ಶಾರದಾ ಆರ್ಟ್ಸ್ ಮಂಜೇಶ್ವರದ ಕಲಾವಿದ ಸುರೇಶ್ ವಿಟ್ಲ ನಿಧನ ಹೊಂದಿದರು. ಮನೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕುಸಿದು ಬಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಬಳಿಕ ಮಂಗಳೂರಿಗೆ ಹೆಚ್ಚಿನ ಚಿಕಿತ್ಸೆಗೆ ರವಾನಿಸಲಾಯಿತಾದರೂ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಪ್ರಸ್ತುತ ಶಾರದ ಆರ್ಟ್ಸ್
ಮಂಜೇಶ್ವರ : ಮಂಜೇಶ್ವರ ರಾಗಂ ಜಂಕ್ಷನ್ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ದಾಟುತ್ತಿದ್ದ ವ್ಯಕ್ತಿಯೊಬ್ಬರಿಗೆ ಕಾರೊಂದು ಡಿಕ್ಕಿ ಹೊಡೆದು ಉಂಟಾದ ಅಪಘಾತದಲ್ಲಿ ಗಂಭೀರಾವಸ್ಥೆಯಲ್ಲಿದ್ದ ಪಾದಾಚಾರಿಯನ್ನು ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಗುರುವಾರ ಸಂಜೆ 4 ಗಂಟೆ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ. ಬಾಯಾರು ಚಿಗುರುಪಾದೆ ಕುಳೂರು ಕುಳ ಬೈಲು ನಿವಾಸಿ ಜಯಂತ (48) ಅಪಘಾತಕ್ಕೀಡಾದ ವ್ಯಕ್ತಿ. ಅನಾರೋಗ್ಯ ಪೀಡಿತರಾದ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಲು
ಮಂಜೇಶ್ವರ ಕುಳೂರು ಸಂತಡ್ಕದ ಶ್ರೀ ಅರಸು ಸಂಕಲ ದೈವ ಕ್ಷೇತ್ರ ಶ್ರೀ ಕ್ಷೇತ್ರ ಸಂತಡ್ಕ ಮಾಡದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ವಾರ್ಷಿಕ ಜಾತ್ರಾ ಮಹೋತ್ಸವವು ಜ.19ರಿಂದ ಜ.24ರವರೆಗೆ ನಡೆಯಲಿದೆ. ಜ.19ರಿಂದ ಜ.22ರವರೆಗೆ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ಜ.23, 24ರಂದುವಾರ್ಷಿಕ ಜಾತ್ರಾ ಮಹೋತ್ಸವವು ನಡೆಯಲಿದೆ. ಜ.16ರಂದು ಗೊನೆಮುಹೂರ್ತ, ಜ.19ರಂದು ಹೊರೆಕಾಣೀಕೆ ಮೆರವಣಿಗೆ, ಧಾರ್ಮಿಕ ಸಭೆ, ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈಭವ
ಮಂಜೇಶ್ವರ: ಪೆರಿಯ ಜೋಡಿ ಕೊಲೆ ಪ್ರಕರಣದಲ್ಲಿ ಸಿಪಿಐಎಂ ಮಾಜಿ ಶಾಸಕ ಕೆವಿ ಕುಂಞಿರಾಮನ್ ಸೇರಿದಂತೆ 14 ಆರೋಪಿಗಳು ತಪ್ಪಿತಸ್ಥರೆಂದು ಸಿಬಿಐ ನ್ಯಾಯಾಲಯ ತೀರ್ಪು ನೀಡಿದೆ. ಮೊದಲನೇ ಆರೋಪಿಯಾಗಿ ಸಿಪಿಎಂ ನೇತಾರರಾದ ಎ. ಪೀತಾಂಬರನ್, ಎರಡನೇ ಆರೋಪಿಯಾಗಿ ಸಜಿ ಸಿ ಜಾರ್ಜ್ ಎಂಬ ಸಜಿ, ಮೂರನೇ ಆರೋಪಿಯಾಗಿ ಕೆ.ಎಂ. ಸುರೆಶ್, ನಾಲ್ಕನೇ ಆರೋಪಿಯಾಗಿ ಕೆ ಅನಿಲ್ ಕುಮಾರ್ ಎಂಬ ಅಬು, ಐದನೇ ಆರೋಪಿಯಾಗಿ ಜಿಜಿನ್, ಆರನೇ ಆರೋಪಿಯಾಗಿ ಶ್ರೀರಾಗ್ ಎಂಬ ಕೂಟು, ಏಳನೇ ಆರೋಪಿಯಾಗಿ
ಮಂಜೇಶ್ವರ : ಗೃಹಿಣಿಯೊಬ್ಬಳು ಮಕ್ಕಳನ್ನು ಶಾಲೆಗೆ ಕಳಿಸಲು ತಿಂಡಿ ತಯಾರಿಸುವ ತರಾತುರಿಯಲ್ಲಿ ಶಾಲ್ ಗ್ರೈಂಡರ್ ಗೆ ಸಿಲುಕಿ ದಾರುಣವಾಗಿ ಸಾವನ್ನಪ್ಪಿದ್ದಾಳೆ. ಬುಧವಾರ ಮುಂಜಾನೆ 7 ಗಂಟೆಯ ಸುಮಾರಿಗೆ ಉಪ್ಪಳ ಗೇಟ್ ಅಪ್ನಾ ಗಲ್ಲಿಯಲ್ಲಿ ಈ ದುರ್ಘಟನೆ ಸಂಭವಿಸಿದೆ.ಉಪ್ಪಳ ಗೇಟ್ ಅಪ್ನಾ ಗಲ್ಲಿ ನಿವಾಸಿ ಮುಂಬೈಯಲ್ಲಿ ಉದ್ಯಮಿಯಾಗಿರುವ ಇಬ್ರಾಹಿಂ ಎಂಬವರ ಪತ್ನಿ ಮೈಮೂನ (40) ಸಾವನ್ನಪ್ಪಿದ ದುರ್ದೈವಿ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಮಂಜೇಶ್ವರ : ಶಾಲಾ ವಿದ್ಯಾರ್ಥಿ ಹಾಗೂ ಅದ್ಯಾಪಿಕೆಯರನ್ನು ಹೇರಿ ಕೊಂಡು ಹೋಗುತ್ತಿದ್ದ ಶಾಲಾ ವಾಹನ ಚಾಲಕನ ನಿಯಂತ್ರಣ ತಪ್ಪಿ ತೋಡಿಗೆ ಮಗುಚಿ ಬಿದ್ದು 6 ವಿದ್ಯಾರ್ಥಿಗಳು ಹಾಗೂ ಒಬ್ಬಳು ಅಧ್ಯಾಪಿಕೆ ಗಾಯಗೊಂಡಿದ್ದಾರೆ. ಮಂಜೇಶ್ವರ ಪಾವೂರಿನಲ್ಲಿ ಕಾರ್ಯಾಚರಿಸುತ್ತಿರುವ ಫಾತಿಮಾ ಆಂಗ್ಲ ಮಾಧ್ಯಮ ಶಾಲೆಯ ವಾಹನ ಶಾಲಾ ವಿದ್ಯಾರ್ಥಿಗಳನ್ನು ಮರಳಿ ಮನೆಗೆ ಕೊಂಡೊಯ್ಯುತ್ತಿರುವ ಮಧ್ಯೆ ಶನಿವಾರ ಸಂಜೆ ಆರ್ವಾರ್ – ಅಂಬುತ್ತಡಿ ರಸ್ತೆಯ ಸೇತುವೆ ಸಮೀಪ ಚಾಲಕನ ನಿಯಂತ್ರಣ
ಮಂಜೇಶ್ವರ ಕಾಲೇಜ್ ಆಫ್ ಅಪ್ಲೈಡ್ ಸೈನ್ಸ್ನಲ್ಲಿ ನೂತನವಾಗಿ ನಿರ್ಮಿಸಲಾದ ’ಯುವೈಕ್ಯ ವೇದಿಕೆಯನ್ನು ಮಂಜೇಶ್ವರ ಬ್ಲಾಕ್ ಪಂಚಾಯತ್ ಸದಸ್ಯ ಶ್ರೀಮತಿ ಅಶ್ವಿನಿ ಎಂ ಎಲ್ ರವರು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಕಾಲೇಜ್ ಮ್ಯಾಗಝೀನ್ ಸ್ನೇಹ ಲತಾ ದಿವಾಕರ್ ರವರು ಬಿಡುಗಡೆ ಮಾಡಿದರು.
ಮಂಜೇಶ್ವರದ ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಗೆ ಅಡ್ಡಲಾಗಿ ಇತ್ತೀಚೆಗೆ ಸ್ಥಾಪಿತವಾಗಿದ್ದ ವಿದ್ಯುತ್ ಕಂಬ ಅಳವಡಿಕೆಯಲ್ಲಿ ಭಾರೀ ಅವ್ಯವಹಾರ ನಡೆದಿರುವ ಬಗ್ಗೆ ಸ್ಥಳೀಯರಿಂದ ವ್ಯಾಪಕ ಆರೋಪಗಳು ಕೇಳಿ ಬರುತ್ತಿದೆ. ಸರ್ವೀಸ್ ರಸ್ತೆ ನಿರ್ಮಾಣ ಪೂರ್ಣಗೊಂಡ ನಂತರ, ಈ ಪೋಸ್ಟ್ಗಳನ್ನು ಕಾಂಕ್ರೀಟೀಕರಣಗೊಳಿಸಿ ಅಳವಡಿಸಲಾಗುವುದಾಗಿ ಸಂಬಂಧಪಟ್ಟ ಅಧಿಕಾರಿಗಳು ಸ್ಥಳೀಯರಿಗೆ ಭರವಸೆ ನೀಡಿದ್ದರು. ಆದರೆ ಸೋಮವಾರ ಸಂಜೆ ಏಳು ಗಂಟೆ ಸುಮಾರಿಗೆ ತಲಪಾಡಿಯಿಂದ ಉದ್ಯಾವರ ತನಕ
ಮಂಜೇಶ್ವರ: ಗಡಿಪ್ರದೇಶವಾದ ತಲಪಾಡಿಯಿಂದ ಮಂಜೇಶ್ವರ ತನಕದ ರಾ. ಹೆದ್ದಾರಿಯ ಇಕ್ಕಡೆಗಳಲ್ಲೂ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದೆ. ಸರ್ವೀಸ್ ರಸ್ತೆಯ ಇಕ್ಕೆಡೆಗಳಲ್ಲೂ ಕಾರ್ಯಾಚರಿಸುತ್ತಿರುವ ವ್ಯಾಪಾರ ಕೇಂದ್ರಗಳಿಗೆ ಮತ್ತು ಮನೆಗಳಿಗೆ ತೊಂದರೆಯಾಗುತ್ತಿದೆ. ಈ ರೀತಿಯಾಗಿ ತೊಂದರೆ ನೀಡುವ ಕಾಮಗಾರಿಯನ್ನು ನಿಲ್ಲಿಸಬೇಕೆಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ರಾ.ಹೆದ್ದಾರಿ ಕ್ರಿಯಾ ಸಮಿತಿ ಮನವಿ ಸಲ್ಲಿಸಿದೆ. ಉದ್ಯಾವರ 10ನೇ ಮೈಲಿನಲ್ಲಿ ವಾಸವಾಗಿರುವ ಮಹಿಳೆಗೆ
ಮಂಜೇಶ್ವರ: ಅಂಡರ್ಪಾಸ್ ನಿರ್ಮಿಸಬೇಕೆಂಬ ಜನರ ಬೇಡಿಕೆ ಈಡೇರದಿರುವುದನ್ನು ವಿರೋಧಿಸಿ ಮಂಜೇಶ್ವರ ರಾಷ್ಟ್ರೀಯ ಹೆದ್ದಾರಿ ಕ್ರಿಯಾ ಸಮಿತಿಯ ನೇತೃತ್ವದಲ್ಲಿ ಮೂರು ತಿಂಗಳಿಗೂ ಹೆಚ್ಚು ಕಾಲದಿಂದ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿಯ 100ನೇ ದಿನಕ್ಕೆ ಕಾಲಿಟ್ಟ ಹಿನ್ನೆಲೆಯಲ್ಲಿ ಹೋರಾಟ ಸಮಿತಿ ಸದಸ್ಯರು ಉರುಳು ಸೇವೆ ಮಾಡಿ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.ನ್ಯಾಯವಾದ ಬೇಡಿಕೆಯನ್ನು ಈಡೇರಿಸಲು ಅಧಿಕಾರಿಗಳು ಹಿಂದೇಟು ಹಾಕುತ್ತಿರುವುದಾಗಿ