HomeFresh Newsವಂಜಾರಕಟ್ಟೆ ಆಂಗ್ಲಮಾಧ್ಯಮ ಶಾಲೆಯಲ್ಲಿ VEMS ಐಸಿರ–2026

ವಂಜಾರಕಟ್ಟೆ ಆಂಗ್ಲಮಾಧ್ಯಮ ಶಾಲೆಯಲ್ಲಿ VEMS ಐಸಿರ–2026

ಬೋಳ: ವಂಜಾರಕಟ್ಟೆ ಆಂಗ್ಲಮಾಧ್ಯಮ ಶಾಲೆ ಬೋಳದಲ್ಲಿ VEMS ಐಸಿರ–2026 (ತುಳುನಾಡ್‌ದ ಸಂಸ್ಕೃತಿದ ಸಂಭ್ರಮ) ಕಾರ್ಯಕ್ರಮವು ಭಾನುವಾರ ಸಂಭ್ರಮದಿಂದ ನಡೆಯಿತು.
ತುಳುನಾಡಿನ ಸಂಸ್ಕೃತಿ, ಪರಂಪರೆ ಹಾಗೂ ಆಚಾರ–ವಿಚಾರಗಳನ್ನು ಪರಿಚಯಿಸುವ ಉದ್ದೇಶದಿಂದ ಆಯೋಜಿಸಲಾದ ಕಾರ್ಯಕ್ರಮದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಂಜಾರಕಟ್ಟೆ ಆಂಗ್ಲಮಾಧ್ಯಮ ಶಾಲೆ ಬೋಳದ ಅಧ್ಯಕ್ಷರಾದ ಶ್ರೀ ಅಶೋಕ ಅಡ್ಡ್ಯಂತಾಯ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಹಳೆ ವಿದ್ಯಾರ್ಥಿ ಸಂಘ ವಂಜಾರಕಟ್ಟೆ ಬೋಳದ ಅಧ್ಯಕ್ಷರಾದ ಶ್ರೀ ಉದಯ ಶೆಟ್ಟಿ, ವಂಜಾರಕಟ್ಟೆ ಆಂಗ್ಲಮಾಧ್ಯಮ ಶಾಲೆ ಬೋಳದ ಸಂಚಾಲಕರಾದ ಶ್ರೀ ಅಕ್ಷಯ ಅಡ್ಡ್ಯಂತಾಯ, ಶ್ರೀ ಸ್ವರಾಜ್ ಶೆಟ್ಟಿ ಪರ್ಕಳ, ಶ್ರೀ ಜಗದೀಶ್ ಆಚಾರ್ ಹಾಗೂ ಶ್ರೀ ರಮೇಶ್ ಶೆಟ್ಟಿ ಬಡಕಲಗುತ್ತು ಮತ್ತು ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಶ್ರೀ ಪೂಜಾರಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಹಿರಿಯರಾದ ಶ್ರೀಮತಿ ಸರಸ್ವತಿ ಶೆಟ್ಟಿ ಬಡಕಲಗುತ್ತು ಹಾಗೂ ಶ್ರೀಮತಿ ಜಯಂತಿ ಭಂಡಾರಿ ಅವರನ್ನು ಸನ್ಮಾನಿಸಲಾಯಿತು.
ಶ್ರೀಮತಿ ಆಶಾ ಶೆಟ್ಟಿ ಸ್ವಾಗತಿಸಿದರು. ಶ್ರೀಮತಿ ಪ್ರೀತಿ ಅನಿಲ್ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ನಯನ ಆಚಾರ್ಯ ಧನ್ಯವಾದ ಸಮರ್ಪಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments