ಮೋದಿಯವರ ಧ್ಯಾನ ನಿಶ್ಶಬ್ದ ಕಾಲದ ದುರುಪಯೋಗ:ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ನೇರ ದೂರು

ಪ್ರಚಾರ ನಡೆಸಬಾರದ 48 ಗಂಟೆಗಳ ಕಾಲ ಧ್ಯಾನ ಮಾಡುವ ಮೋದಿಯವರ ಕಾರ್ಯವು ಸ್ಪಷ್ಟವಾಗಿ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ.
ಜೂನ್ 1ರಂದು ಮೋದಿಯವರ ವಾರಣಾಸಿ ಕ್ಷೇತ್ರಕ್ಕೂ ಸೇರಿ ಕೊನೆಯ ಹಂತದ ಲೋಕಸಭಾ ಚುನಾವಣೆಯ ಮತದಾನ ನಡೆಯುತ್ತಿದೆ. ಅದರಲ್ಲಿ ಲಾಭ ಪಡೆಯಲು ಪ್ರಧಾನಿ ಮೋದಿಯವರು ಪ್ರಚಾರ ಮಾಡಬಾರದ 48 ಗಂಟೆಗಳ ಸದ್ದಿಲ್ಲದ ಕಾಲವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಆ ಮೂಲಕ ಮತದಾರರ ಮೇಲೆ ಧಾರ್ಮಿಕ ಪ್ರಭಾವ ಬೀರಲು ನೋಡುತ್ತಿದ್ದಾರೆ. ಇದು ಮತದಾನಕ್ಕೆ ಮೊದಲಿನ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಮೋದಿಯವರ ಧ್ಯಾನದ ಯಾವುದೇ ದೃಶ್ಯ ಟೀವಿಯಲ್ಲಿ ಬಾರದಂತೆ ನಿಷೇಧ ಹೇರಬೇಕು.

ಈ ಬಗೆಗೆ ಕಾಂಗ್ರೆಸ್ಸಿನ ನಾಯಕರಾದ ರಣದೀಪ್‌ಸಿಂಗ್ ಸುರ್ಜೇವಾಲಾ, ಅಭಿಷೇಕ್ ಸಿಂಘ್ವಿ, ಸಯ್ಯದ್ ನಾಸಿರ್ ಹುಸೇನ್ ನೇರವಾಗಿ ಚುನಾವಣಾ ಆಯೋಗಕ್ಕೆ ಹೋಗಿ ದೂರು ನೀಡಿದ್ದಾರೆ. ಮೋದಿಯವರು ಮತದಾನಕ್ಕೆ ಮೊದಲ ಎರಡು ದಿನಗಳ ಸೈಲೆಂಟ್ ಟೈಮ್ಸ್ನಲ್ಲಿ ಕನ್ಯಾಕುಮಾರಿಯಲ್ಲಿ ಧ್ಯಾನ ನಿರತರಾಗುತ್ತಿದ್ದಾರೆ.
