ಮುಗಿಯದ ಟ್ರಾಫಿಕ್ ಸಮಸ್ಯೆ, ಕಣ್ಣೀರಿಟ್ಟ ಸದಸ್ಯೆ

ಮೂಡುಬಿದಿರೆ : ಇಲ್ಲಿನ ಪೇಟೆಯಲ್ಲಿ ವಾಹನಗಳ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಏಕಮುಖ ರಸ್ತೆಯಲ್ಲಿ ವಾಹನಗಳು ಸಂಚರಿಸುತ್ತಿವೆ, ಮಸೀದಿ ರಸ್ತೆ, ಇರುವೈಲ್ ರಸ್ತೆ, ನಾಗರಕಟ್ಟೆ ರಸ್ತೆ, ಆಳ್ವಾಸ್ ರಸ್ತೆ ಹಾಗೂ ಖಾಸಗಿ ಬಸ್ ನಿಲ್ದಾಣದಲ್ಲಿ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ಇಟ್ಟು ಹೋಗುವುದರಿಂದ ಇತರ ವಾಹನಗಳ ಸಂಚಾರ ಮತ್ತು ಪಾದಾಚಾರಿಗಳ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ ಪೆÇಲೀಸ್ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲವೇಕೆ ಎಂದು ಪುರಸಭಾ ಸದಸ್ಯರು ಪೆÇಲೀಸ್ ಅಧಿಕಾರಿಗಳನ್ನು ಪ್ರಶ್ನಿಸಿದ ಘಟನೆ ಪುರಸಭಾ ವಿಶೇಷ ಸಭೆಯಲ್ಲಿ ನಡೆದಿದೆ.

ಪುರಸಭಾ ಅಧ್ಯಕ್ಷ ಪ್ರಸಾದ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಟ್ರಾಫಿಕ್ ಹಾಗೂ ಮೆಸ್ಕಾಂ ಸಮಸ್ಯೆಯ ಬಗ್ಗೆ ಚರ್ಚೆ ನಡೆಸಿ ಅಧಿಕಾರಿಗಳ ಗಮನಕ್ಕೆ ತರಲಾಯಿತು. ಪುರಸಭಾ ಸದಸ್ಯೆ ಶಕುಂತಲಾ ದೇವಾಡಿಗ ಅವರು ಮಾತನಾಡಿ ನಾಗರಕಟ್ಟೆ ರಸ್ತೆಯಲ್ಲಿ ವಾಹನ ಚಾಲಕರು ತಮ್ಮ ವಾಹನಗಳನ್ನು ಒಟ್ಟಾರೆಯಾಗಿ ರಸ್ತೆಯಲ್ಲಿ ನಿಲ್ಲಿಸಿ ಹೋಗುತ್ತಿರುವುದರಿಂದ ಇತರ ವಾಹನಗಳ ಓಡಾಟಕ್ಕೆ ತೊಂದರೆಯಾಗುತ್ತಿದೆ. ಅಲ್ಲಿನ ಜನರು ? ವಾರ್ಡ್ ಸದಸ್ಯರಿಗೆ ಕಣ್ಣು ಕಾಣುವುದಿಲ್ಲವೇ ಎಂದು ತನಗೆ ಸಿಕ್ಕಾಪಟ್ಟೆ ಬೈಯ್ಯುತ್ತಿದ್ದಾರೆ ಈ ಬಗ್ಗೆ ತಾನು ಅಧ್ಯಕ್ಷರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ತನಗೆ ಆರೋಗ್ಯವೂ ಸರಿ ಇಲ್ಲ ತಾನು ಊರಿನವರ ಬೈಗುಳ ಕೇಳಲು ಇರುವುದೇ ಎಂದು ಕಣ್ಣೀರಿಟ್ಟರು.

ಕಲ್ಲಬೆಟ್ಟು ಶಾಲಾ ಬಳಿಯಲ್ಲಿ ಕಳೆದ ಮೂರು ತಿಂಗಳ ಹಿಂದೆ ಕೆಲವು ಅಪಘಾತಗಳು ನಡೆದಿರುವುದರಿಂದ ಮುಂಜಾಗೃತ ಕ್ರಮವಾಗಿ ರಸ್ತೆಗೆ ಬ್ಯಾರಿಕೇಡ್‍ಗಳನ್ನು ಹಾಕಲಾಗಿತ್ತು. ಇದರಿಂದಾಗಿ ಅಪಘಾತಗಳು ಕಡಿಮೆಯಾಗಿತ್ತು. ಆದರೆ ಇದೀಗ ಯಾರೋ ಕಿಡಿಕೇಡಿಗಳು ರಾತ್ರಿ ವೇಳೆಗೆ ಬ್ಯಾರಿಕೇಡನ್ನು ತೆಗೆದು ಹಾಕುತ್ತಿದ್ದಾರೆ ಈ ಬಗ್ಗೆ ಗಮನ ಹರಿಸುವಂತೆ ಪೆÇಲೀಸ್ ಅಧಿಕಾರಿಯನ್ನು ಉಪಾಧ್ಯಕ್ಷೆ ಸುಜಾತ ಶಶಿಧರ್ ಆಗ್ರಹಿಸಿದರು.

ಜಿಲ್ಲೆಯ ಬೇರೆ ಬೇರೆ ಕಡೆ ಅಹಿತಕರ ಘಟನೆಗಳು ನಡೆಯುತ್ತಿವೆ. ಮೂಡುಬಿದಿರೆ ಬೆಳೆಯುತ್ತಿರುವ ನಗರವಾಗಿರುವುದರಿಂದ ಇಲ್ಲಿ ಯಾವುದೇ ಅಶಾಂತಿಯ ಕೃತ್ಯಗಳು ನಡೆಯದಂತೆ ಗುಪ್ರಚರ ಇಲಾಖೆಗಳು ನಿಗಾ ವಹಿಸಬೇಕು. ಮೂಡುಬಿದಿರೆ ಕಡಲಕೆರೆ ಪರಿಸರದಲ್ಲಿ ಹಾಗೂ ಸ್ವರಾಜ್ಯ ಮೈದಾನದ ಬಳಿ ಗಾಂಜಾ ವ್ಯಸನಿಗಳು ತಿರುಗಾಡುತ್ತಿದ್ದಾರೆ ಈ ಬಗ್ಗೆಯೂ ಪೆÇಲೀಸ್ ಇಲಾಖೆ ತನಿಖೆ ನಡೆಸಬೇಕೆಂದು ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ ಪೂಜಾರಿ ಆಗ್ರಹಿಸಿದರು.

ಟ್ರಾಫಿಕ್ ಸಮಸ್ಯೆಯನ್ನು ಆಲಿಸಿದ ಪೆÇಲೀಸ್ ಉಪ ನಿರೀಕ್ಷಕ ದಿವಾಕರ ರೈ ಮಾತನಾಡಿ ಮೂಡುಬಿದಿರೆಯಲ್ಲಿ ಸರಿಯಾಗಿ ಪಾರ್ಕಿಂಗ್‍ಗೆ ಬೇಕಾಗಿರುವ ಜಾಗವಿಲ್ಲ. ಇಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ನಮ್ಮಿಂದ ಸಾಧ್ಯವಾದಷ್ಟು ನಾವು ಕ್ರಮಕೈಗೊಳ್ಳುತ್ತಿದ್ದೇವೆ. ಮೂಡುಬಿದಿರೆ ಠಾಣೆಯಲ್ಲಿ ಸಿಬಂದಿಗಳ ಕೊರತೆಯೂ ಇದೆ. ಅಲ್ಲದೆ ಪೊಲೀಸ್ ಅಧಿಕಾರಿಗಳನ್ನು ಜಿಲ್ಲೆಯ ಬೇರೆ ಬೇರೆ ಕಡೆಗೆ ಕರ್ತವ್ಯಕ್ಕೆ ಹಾಕುತ್ತಿರುವುದರಿಂದ ಇಲ್ಲಿ ಸ್ವಲ್ಪ ಏರುಪೇರಾಗುತ್ತಿದೆ. ಇರುವ ಸಿಬಂದಿಗಳನ್ನೇ ಬಳಸಿ ತೊಂದರೆಯಾಗದಂತೆ ಕರ್ತವ್ಯವನ್ನು ಮಾಡಿಸುತ್ತಿದ್ದೇವೆ . ಗಾಂಜಾ ವ್ಯಸನಿಗಳ ಬಗ್ಗೆಯೂ ನಿಗಾ ವಹಿಸುತ್ತಿದ್ದೇವೆ. ಅಲ್ಲದೆ ಗುಪ್ತಚರ ಇಲಾಖೆಯೂ ಗುಪ್ತವಾಗಿ ಕೆಲಸ ಮಾಡುತ್ತಿದೆ ಎಂದ ಅವರು ಪುರಸಭೆಯ ಸದಸ್ಯರು ಹಾಗೂ ಅಧಿಕಾರಿಗಳು ಪೆÇಲೀಸ್ ಇಲಾಖೆ ಮಾಡುವ ಕೆಲಸಗಳಿಗೆ ಸಹಕಾರ ನೀಡುವಂತೆ ವಿನಂತಿಸಿದರು.

ಎಸ್‍ಸಿ, ಎಸ್‍ಟಿಯವರಿಗೆ ಸರಕಾರವು ಯೋಜನೆಯೊಂದರಲ್ಲಿ 70 ಯುನಿಟ್ ವಿದ್ಯುತ್ ಫ್ರೀಯಾಗಿ ನೀಡಲು ಸೂಚಿಸಿದೆ ಇದರ ಪಡೆಯುವ ಫಲಾನುಭವಿಗಳಿಗೆ ಆದರೆ ಮೆಸ್ಕಾಂ ಅಧಿಕಾರಿಗಳು ದಾಖಲೆಗಳನ್ನು ನೀಡುವಂತೆ ಸತ್ತಾಯಿಸುತ್ತಿರುವುದು ತಪ್ಪು ಅವರು ಬಳಿ ಇರುವ ದಾಖಲೆಗಳನ್ನು ಮಾತ್ರ ಪರಿಗಣಿಸಿ ವಿದ್ಯುತ್ ಕನೆಕ್ಷನ್ ನೀಡಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸುವುದಾಗಿ ಸದಸ್ಯ ಸುರೇಶ್ ಪ್ರಭು ಎಚ್ಚರಿಸಿದರು.

ಮೆಸ್ಕಾಂನ ಶಾಖಾಧಿಕಾರಿ ಪ್ರವೀಣ್ ಮಾತನಾಡಿ ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ತಿಳಿಸಿದರು.
ಬಾನ ಸಂಸ್ಥೆಯ ಆಡಳಿತ ನಿರ್ದೇಶಕ ಡಾ.ಬಾಲಾಜಿತ್ ಅವರು ಕೆಮಿಕಲ್ ಹಾಕದೆ ಶೌಚಾ ಗುಂಡಿಯನ್ನು ಶುಚಿಗೊಳಿಸುವ ಬಗ್ಗೆ ಮಾಹಿತಿ ನೀಡಿದರು. ಮೂಡುಬಿದಿರೆ ಪೇಟೆಯಲ್ಲಿ ಸಣ್ಣ ಮಕ್ಕಳು ಮತ್ತು ಮಕ್ಕಳು ಪೆನ್ನು ಮಾರಾಟ ಮಾಡುತ್ತಿದ್ದಾರೆ. ಮಹಿಳೆಯರ ಕಂಕುಳಲ್ಲಿ ಪುಟ್ಟ ಪುಟ್ಟ ಮಕ್ಕಳಿದ್ದು ಅವರು ನಿದ್ರಾ ಸ್ಥಿತಿಯಲ್ಲಿಯೇ ಇರುತ್ತಾರೆ ಈ ಬಗ್ಗೆ ತನಿಖೆ ನಡೆಸುವಂತೆ ಪುರಸಭಾ ಅಧ್ಯಕ್ಷ ಪ್ರಸಾದ್ ಕುಮಾರ್ ಪೆÇಲೀಸ್ ಅಧಿಕಾರಿಗಳ ಗಮನಕ್ಕೆ ತಂದರು. ಮುಖ್ಯಾಧಿಕಾರಿ ಇಂದು ಎಂ. ಪರಿಸರ ಅಭಿಯಂತರೆ ಶಿಲ್ಪಾ, ಎಂಜಿನಿಯರ್ ಪದ್ಮನಾಭ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

Related Posts

Leave a Reply

Your email address will not be published.