ಮೂಡುಬಿದಿರೆ ಪುರಪ್ರವೇಶಗೈದ ಶ್ರೀರಾಮ ದಿಗ್ವಿಜಯ ರಥಯಾತ್ರೆ

ಮೂಡುಬಿದಿರೆ: ‘ಶ್ರೀ ರಾಮದಾಸ, ಆಶ್ರಮದ ನೇತೃತ್ವದಲ್ಲಿ ವಿಶ್ವಹಿಂದೂ ಪರಿಷತ್ ಹಾಗೂ ಸಾಧು-ಸಂತರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಶ್ರೀರಾಮ ದಿಗ್ವಿಜಯ ರಥಯಾತ್ರೆಯು ಮೂಡುಬಿದಿರೆಗೆ ಆಗಮಿಸಿತು.

moodabidre


ಶ್ರೀ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ, ಸೋಲೂರು ಆರ್ಯ ಈಡಿಗ ಮಹಾಸಂಸ್ಥಾನ ಮಠದ ಶ್ರೀ ವಿದ್ಯಾ ನಂದ ಸ್ವಾಮೀಜಿ, ಮೂಡುಬಿದಿರೆ ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್ , ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ, ವಿಹಿಂಪ ಬಜರಂಗದಳದ ಜಿಲ್ಲಾ ಸಂಚಾಲಕ ಶರಣ್ ಪಂಪುವೆಲ್, 18 ಬಸದಿಗಳ ಮೊಕ್ತೇಸರ ಆನಡ್ಕ ದಿನೇಶ್ ಕುಮಾರ್, ಪಟ್ಣಶೆಟ್ಟಿ ಸುಧೇಶ್ ಕುಮಾರ್, ಉದ್ಯಮಿ ಕೆ.ಶ್ರೀಪತಿ ಭಟ್ , ಶ್ರೀರಾಮ ದಿಗ್ವಿಜಯ ರಥಯಾತ್ರಾ ಮೂಡುಬಿದಿರೆ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಶಾಂತಾರಾಮ ಕುಡ್ವ, ಕೋಶಾಧಿಕಾರಿ ಶ್ಯಾಮ್ ಹೆಗ್ಡೆ, ಸಂಚಾಲಕ ಬಾಹುಬಲಿ ಪ್ರಸಾದ್, ಹಿಂಜಾವೇಯ ಜಿಲ್ಲಾ ಸಹಸಂಯೋಜಕ್ ಸಮಿತ್ ರಾಜ್ ದರೆಗುಡ್ಡೆ, ಅಶ್ವಥ್ ಪಣಪಿಲ ಮತ್ತಿತರ ಗಣ್ಯರು ಜೈನ್ ಪೇಟೆಯಲ್ಲಿ ರಥಯಾತ್ರೆಯನ್ನು ಬರಮಾಡಿಕೊಂಡರು. ಸಾವಿರ ಕಂಬದ ಬಸದಿ ಬಳಿಯಿಂದ ಕನ್ನಡಭವನದವರೆಗೆ ನಡೆದ ಶೋಭಾಯಾತ್ರೆಯಲ್ಲಿ ಚೆಂಡೆ-ತಾಳಗಳು, ಸ್ಯಾಕ್ಸೋಫೆÇೀನ್, ಕುಣಿತ ಭಜನಾ ತಂಡಗಳು, ಕೇಸರಿ ಧ್ವಜವನ್ನು ಹಿಡಿದ ಹಿಂದೂ ಸಂಘಟನೆಯ ಕಾರ್ಯಕರ್ತರು, ಹಾಗೂ ಪೂರ್ಣಕುಂಭವನ್ನು ಹಿಡಿದ ಮಹಿಳೆಯರು ಭಾಗವಹಿಸಿದ್ದರು.

Related Posts

Leave a Reply

Your email address will not be published.