ಮೂಡುಬಿದರೆ : ಭಯೋತ್ಪಾದನೆ, ಲವ್ ಜಿಹಾದ್ ವಿರೋಧಿಸಿ ಪ್ರತಿಭಟನೆ
ಮೂಡುಬಿದಿರೆ: ಭಯೋತ್ಪಾದನೆ ಹಾಗೂ ಲವ್ ಜಿಹಾದನ್ನು ವಿರೋಧಿಸಿ ವಿಶ್ವ ಹಿಂದು ಪರಿಷತ್ – ಬಜರಂಗದಳ ಮೂಡುಬಿದಿರೆ ಘಟಕದ ವತಿಯಿಂದ ಮೂಡುಬಿದಿರೆ ಬಸ್ಸು ನಿಲ್ದಾಣದ ಬಳಿ ಪ್ರತಿಭಟನೆ ನಡೆಯಿತು.ವಿಶ್ವ ಹಿಂದು ಪರಿಷತ್ ನ ಪ್ರಧಾನ ಕಾರ್ಯದರ್ಶಿ ದೇವಿ ಪ್ರಸಾದ್ ಶೆಟ್ಟಿ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ ದೇಶಾದ್ಯಂತ ಬಾಂಬನ್ನು ಸ್ಫೋಟಿಸಿ ಸಮಾಜದಲ್ಲಿ ಭಯವನ್ನು ನಿರ್ಮಿಸುವ ಕೆಲಸವನ್ನು ಉಗ್ರಗಾಮಿಗಳು ಮಾಡುತ್ತಿದ್ದಾರೆ. ಇಂದು ಭಯೋತ್ಪಾದನೆ ಎಂಬುದು ಕರಾವಳಿಗೆ ಕಾಲಿಟ್ಟಿದೆ. ಕರಾವಳಿಯಲ್ಲಿ ಬಾಂಬ್ ನ್ನು ಸ್ಪೋಟಿಸುವುದರ ಮೂಲಕ ಕರಾವಳಿಯ ಜನರಲ್ಲಿ ಭಯವನ್ನು ಹುಟ್ಟಿಸುವಂತಹ ಪ್ರಯತ್ನವನ್ನು ಉಗ್ರಗಾಮಿಗಳು ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.