ಮರ ಬಿದ್ದು ಸಂಚಾರಕ್ಕೆ ಅಡ್ಡಿ : ಬಂಟ್ವಾಳ-ಮೂಡುಬಿದಿರೆ ಸಂಚಾರಕ್ಕೆ ತೊಡಕು

ಮೂಡುಬಿದಿರೆ: ಇಲ್ಲಿನ ಪುರಸಭೆ ವ್ಯಾಪ್ತಿಯ ಬಿರಾವು ಎಂಬಲ್ಲಿ ಭಾನುವಾರ ಸುರಿದ ಗಾಳಿ ಮಳೆಗೆ ಬೃಹತ್ ಆಲದ ಮರ ಬಿದ್ದು, ಕೆಲ ಸಮಯ ಬಂಟ್ವಾಳ-ಮೂಡುಬಿದಿರೆ ಸಂಚಾರಕ್ಕೆ ತೊಂದರೆಯಾಯಿತು.ಮರ ಬಿದ್ದ ರಭಸಕ್ಕೆ ವಿದ್ಯುತ್ ತಂತಿಗಳು, ಇಂಟರ್ನೆಟ್ ಸಂಪರ್ಕ ತಂತಿಗಳು ಕಡಿದು ಬಿದ್ದಿದ್ದು, ಭಾನುವಾರ ಮಧ್ಯಾಹ್ನದಿಂದ ಬಿರಾವು, ತಾಕೋಡೆ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಯಿತು. ಪುರಸಭಾ ಅಧ್ಯಕ್ಷ ಪ್ರಸಾದ್ ಕುಮಾರ್ ಅವರ ಮುತುವರ್ಜಿಯಲ್ಲಿ ಮರವನ್ನು ಒಂದು ಗಂಟೆಯಲ್ಲಿ ತೆರವುಗೊಳಿಸಲಾಗಿದೆ. ತೆರವು ಕಾರ್ಯಾಚರಣೆಯ ಸಂದರ್ಭ ಮೂಡುಬಿದಿರೆ ಪೆÇಲೀಸರು ಪೇಪರ್ಮಿಲ್ಲ್ ಬಳಿ ಬ್ಯಾರಿಕೇಡ್ ಹಾಕಿ, ಕೀತಿನಗರ, ಗಂಟಾಲ್ಕಟ್ಟೆ ತಾಕೋಡೆ ಮಾರ್ಗವಾಗಿ ಸಿದ್ಧಕಟ್ಟೆ, ಬಂಟ್ವಾಳ ಕಡೆಗೆ ವಾಹನಗಳು ಸಂಚರಿಸುವ ಪರ್ಯಾಯ ವ್ಯವಸ್ಥೆ ಕಲ್ಪಿಸಿದರು.