ಮೂಡುಬಿದಿರೆ: ಕಟ್ಟಡ ಕಾರ್ಮಿಕರ ಸಮಾವೇಶ

ಮೂಡುಬಿದಿರೆ ತಾಲೂಕು ಕಟ್ಟಡ ಕಾರ್ಮಿಕರ ವಾರ್ಷಿಕ ಸಮಾವೇಶವು ಸಮಾಜ ಮಂದಿರದಲ್ಲಿ ನಡೆಯಿತು.

ಸಮಾವೇಶವನ್ನು ಸಿ.ಐ.ಟಿ.ಯು. ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಮಹಾಂತೇಶ್ ಉದ್ಘಾಟಿಸಿ ಮಾತನಾಡಿ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ಸಿಗಬೇಕಾದ ವಿದ್ಯಾರ್ಥಿವೇತನ ನೀಡಬೇಕಾದ ಮಂಡಳಿಯು ಅದರ ಮೊತ್ತವನ್ನು ಕಡಿತ ಮಾಡಿದೆ. ಹೋರಾಟದ ಬಳಿಕ ಈಗ ಮತ್ತೆ ವಿದ್ಯಾರ್ಥಿವೇತನಕ್ಕೆ ಅರ್ಜಿ ಹಾಕುವ ಪ್ರಕ್ರಿಯೆ ಆರಂಭವಾಗಿದೆ. ಈ ಕುರಿತು ನಡೆದಿರುವ ನ್ಯಾಯಾಂಗ ಹೋರಾಟದ ಎಲ್ಲ ಖರ್ಚುವೆಚ್ಚ ಭರಿಸಬೇಕೆಂದು ನ್ಯಾಯಾಲಯವು ಮಂಡಳಿಗೆ ಆದೇಶಿದೆ ಎಂದು ತಿಳಿಸಿದರು.

ಸಮಾವೇಶದಲ್ಲಿ ಜಿಲ್ಲಾ ಅಧ್ಯಕ್ಷ ವಸಂತ ಆಚಾರಿ, ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಯಾದವಶೆಟ್ಟಿ, ಸಿಐಟಿಯು ಮುಖಂಡರಾದ ರಮಣಿ, ರಾಧಾ, ಗಿರಿಜಾ ಮತ್ತಿತರರು ಉಪಸ್ಥಿತರಿದ್ದರು. ಕಟ್ಟಡ ಕಾರ್ಮಿಕರ ಸಂಘದ ತಾಲೂಕು ಅಧ್ಯಕ್ಷ ಕೃಷ್ಣಪ್ಪ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದ ಶ್ರೀಶಂಕರ್ ಸ್ವಾಗತಿಸಿ ವರದಿ ಮಂಡಿಸಿದರು. ರಾಧಾ ಲೆಕ್ಕಪತ್ರ ಮಂಡಿಸಿದರು. ಬಳಿಕ ನೂತನ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿಯನ್ನು ಪುನರಾಯ್ಕೆ ಮಾಡಲಾಯಿತು.


೫ರಂದು ಬೆಂಗಳೂರಿನಲ್ಲಿ ನಡೆಯುವ ’ಮುಖ್ಯಮಂತ್ರಿ ಮನೆ ಚಲೋ’ ಹೋರಾಟದಲ್ಲಿ ಕಟ್ಟಡ ಕಾರ್ಮಿಕರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲು ತೀರ್ಮಾನಿಸಲಾಯಿತು.
