ಮುಂಬಯಿ : ಜಾರ್ಜ್ ಫೆರ್ನಾಂಡಿಸ್ ರವರ 94ನೇ ಜನ್ಮದಿನಾಚರಣೆ ರಾಷ್ಟ್ರೀಯ ಪ್ರಶಸ್ತಿ ಪ್ರಧಾನ

ಮುಂಬಯಿ : ಜಾರ್ಜ್ ಫೆರ್ನಾಂಡಿಸ್ ರವರ 94ನೇ ಜನ್ಮದಿನಾಚರಣೆ ಯಂದು ರಾಷ್ಟ್ರೀಯ ಪ್ರಶಸ್ತಿ ಪ್ರದಾನಿಸುವ ಮೂಲಕ ಮುಂದಿನ ದಿನಗಳಲ್ಲಿ ಅರಣ್ಯ ರಕ್ಷಣೆ ಮಾಡುದರೊಂದಿಗೆ “ಜಾರ್ಜ್ ವನ” ದ ಮೂಲಕ ಅರಣ್ಯ ಸಂರಕ್ಷಣಾ ಪ್ರಶಸ್ತ್ಯ ನೀಡಲು ಪ್ರಯತ್ನಿಸುತ್ತೇವೆ. ರಾಜ್ಯದ ಎಲ್ಲ ಜನನಾಯಕರು ಪಕ್ಷ ಬೇದವಿಲ್ಲದೆ ಮಂಗಳೂರು ವಿಮಾನ ನಿಲ್ಧಾಣಕ್ಕೆ ಜಾರ್ಜ್ ಫೆರ್ನಾಂಡಿಸ್ ಅವರ ಹೆಸರು ನೀಡಲಿ ಜಯಶ್ರಿಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕ ರಾದ ತೋನ್ಸೆ ಜಯಕೃಷ್ಣ ಶೆಟ್ಟಿಯವರು ನುಡಿದರು.

ರಂಜನಿ ಸುಧಾಕರ ಹೆಗ್ಡೆ ಸಭಾಗೃಹ, ಬಂಟರ ಭವನ ಅನೆಕ್ಸ್ ಹಾಲ್, ಕುರ್ಲಾ ಪೂರ್ವ ಮುಂಬಯಿ ಇಲ್ಲಿ ಜಯಶ್ರಿಕೃಷ್ಣ ಪರಿಸರ ಪ್ರೇಮಿ ಸಮಿತಿಯಿಂದ ನಡೆದ ಜಾರ್ಜ್ ಫೆರ್ನಾಂಡಿಸ್ ರವರ 94ನೇ ಜನ್ಮದಿನಾಚರಣೆ ಮತ್ತು ಮತ್ತವರ ನೆನಪಿನಲ್ಲಿ ರಾಷ್ಟ್ರಮಟ್ಟದ ಪ್ರಶಸ್ತಿ ಪ್ರಧಾನ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ಕರಾವಳಿ ಜಿಲ್ಲೆಗಳಲ್ಲಿ ಪರಸರ ರಕ್ಷಣೆಯೊಂದಿಗೆ ಕೈಗಾರಿಕೋದ್ಯಮಕ್ಕೆ ಅವಕಾಶ ನೀಡಲು ಕೇಂದ್ರ ಹಾಗೂ ರಾಜ್ಯ ಸರಕಾರ ಇನ್ನೂ ಹೆಚ್ಚು ಪ್ರಾಧಾನ್ಯತೆ ನೀಡಬೇಕು ಎಂದರು.

ಪ್ರಶಸ್ತಿ ಪ್ರಧಾನ ಸಮಾರಂಭದ ಕಾರ್ಯಕ್ರಮವನ್ನು ಉತ್ತರ ಮುಂಬಯಿ ಸಂಸದರಾದ ಗೋಪಾಲ ಶೆಟ್ಟಿಯವರು ದೀಪ ಬೆಳಗಿಸಿ ಉದ್ಘಾಟಿಸಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ತುಂಗಾ ಗ್ರೂಫ್ ಆಫ್ ಹೋಟೇಲ್ಸನ ಸಿಎಂಡಿ ಸುಧಾಕರ ಹೆಗ್ದೆ ಯವರು ಮಾತನಾಡುತ್ತಾ, ಜಯಶ್ರಿಕೃಷ್ಣ ಪರಿಸರ ಪ್ರೇಮಿ ಸಮಿತಿಯ 22 ವರ್ಷಗಳ ಸಾಧನೆ ಸಾಮಾನ್ಯ ಜನರೂ ಕೂಡ ನೆನಪಿಸುವಂತಾಗಲಿ, ಮುಂದಿನ ದಿನಗಳಲ್ಲಿ ಜಿಲ್ಲೆಗಳ ಅಭಿವೃದ್ದಿಗೆ ಬೇಕಾಗುವ ಕಾರ್ಯಗಳು ಸಮಿತಿಯ ಮೂಲಕ ನಡೆಯಲಿ ಎಂದು ನುಡಿದರು.

ವಿಶೇಷ ಅತಿಥಿಯಾಗಿ ಪಾಲ್ಗೊಂಡಿದ್ದ ಸಮಿತಿಯ ಜಿಲ್ಲೆಯ ಉಪಾಧ್ಯಕ್ಷ ಹಿರಿಯ ರಾಜಕಾರಿಣಿ ಜಗದೀಶ್ ಅಧಿಕಾರಿ, ಕಾಪು ಕ್ಷೇತ್ರದ ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಮಾಜಿ ಒಐಅ, ಕರ್ನಾಟಕ ಸರ್ಕಾರ,ಎಐಸಿಸಿ ಕಾರ್ಯದರ್ಶಿ ಐವನ್ ಡಿಸಜಾ, ಮಾಜಿ ಎಂಎಲ್‍ಸಿ,, ಕರ್ನಾಟಕ ಬಿಜೆಪಿ ಯ ವಕ್ತಾರರು ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ತುಂಗಾ ಗ್ರೂಪ್ ಆಫ್ ಹೋಟೆಲ್, ಸಿಎಂ ಡಿ ಸುಧಾಕರ ಎಸ್ ಹೆಗ್ಡೆ, ಪ್ರಶಸ್ತಿ ಸಮಿತಿಯ ಸಂಚಾಲಕ ಡಾ. ಆರ್, ಕೆ, ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಮುಂಡ್ಕೂರು ಸುರೇಂದ್ರ ಸಾಲ್ಯಾನ್,ಕೋಶಾಧಿಕಾರಿ ತುಳಸಿದಾಸ್ ಅಮೀನ್ ಉಪಸ್ಥಿತರಿದ್ದರು.

Related Posts

Leave a Reply

Your email address will not be published.