ಮುಂಬೈಯಲ್ಲಿ ಮೂರು ದಿನದಿಂದ ಮಳೆ : ಪೆಟ್ರೋಲ್ ಬಂಕ್ ಮೇಲೆ ಬಿದ್ದ ಕಬ್ಬಿಣದ ಹೋರ್ಡಿಂಗ್

ಮುಂಬಯಿ ನಗರದಲ್ಲಿ ಮೂರು ದಿನದಿಂದ ಮಳೆ ಸುರಿಯುತ್ತಿದ್ದು, ಈ ಮಳೆಗಾಲದ ಮೊದಲ ನರಬಲಿಯನ್ನು ಮಳೆ ಪಡೆದಾಯಿತು.
ಘಾಟ್ಕೋಪರ್‍ನ ವೆಸ್ಟರ್ನ್ ಎಕ್ಸ್ಪ್ರೆಸ್ ಹೈವೆಯ ಪೊಲೀಸ್ ಗ್ರೌಂಡ್ ಪೆಟ್ರೋಲ್ ಬಂಕ್ ಮೇಲೆ ಭಾರೀ ಕಬ್ಬಿಣದ ಹೋರ್ಡಿಂಗ್ ಉರುಳಿ ಬಿದ್ದು ಮೂವರು ಸಾವಿಗೀಡಾದರು. ಅಲ್ಲದೆ 54 ಮಂದಿ ಗಾಯಗೊಂಡರು. ಇನ್ನೂ ಕೆಲವರು ಭಾರೀ ಹೋರ್ಡಿಂಗ್‍ನಡಿ ಸಿಲುಕಿದ್ದಾಗಿ ಹೇಳಲಾಗಿದೆ. ಮುಂಬಯಿಯ ವಡಾಲದಲ್ಲಿ ಕಟ್ಟುಗೆಯ ಉದ್ಯಾನ ಗೋಪುರ ಬಿದ್ದು ಮೂವರು ತೀವ್ರ ಗಾಯಗೊಂಡರು.
ಹಲವು ವಿಮಾನಗಳು ಮಳೆ ಮೋಡದ ಕಾರಣಕ್ಕೆ ರದ್ದಾದವು. ಕೆಲವು ವಿಮಾನಗಳನ್ನು ಮಾತ್ರ ಮಾರ್ಗ ಬದಲಿಸಿ ಬಿಡಲಾಯಿತು. ಮೊದಲ ಮಳೆಗೆ ಮುಂಬಯಿಯಲ್ಲಿ ಸತ್ತವರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.
