ನಾಮಪತ್ರ ಸಲ್ಲಿಕೆಗೆ ವಾರಣಾಸಿಯಲ್ಲಿ ಅಡ್ಡಿ : ನೋವು ತೋಡಿಕೊಂಡ ಶ್ಯಾಮ್ ರಂಗೀಲಾ

ವಾರಣಾಸಿಯಲ್ಲಿ ನಾಮಪತ್ರ ಸಲ್ಲಿಸಲು ಹೋಗಿದ್ದೆ. ಕುಳಿತುಕೊಳ್ಳಲು ಹೇಳಿ, ಆಮೇಲೆ ಸಮಯವಾಯಿತು ಹೊರಡಿ ಎಂದು ಅಧಿಕಾರಿಗಳು ಚಮಚಾಗಿರಿ ಮಾಡಿದ್ದಾರೆ ಎಂದು ಕಮೆಡಿಯನ್ ಶ್ಯಾಮ್ ರಂಗೀಲಾ ಹೇಳಿದ್ದಾರೆ.
ಶ್ಯಾಮ್ ರಂಗೀಲಾ ಅವರು ಈ ಬಗೆಗೆ ಜಾಲ ತಾಣಗಳಲ್ಲಿ ತನ್ನ ನೋವು ಹಂಚಿಕೊಂಡಿದ್ದಾರೆ. ನನ್ನ ನಾಮಪತ್ರ ಸಲ್ಲಿಸಲಾಗದ್ದಕ್ಕೆ ನೋವಾಗಿದೆ ಎಂದಿದ್ದಾರೆ. ಪ್ರಧಾನಿ ಮೋದಿಯವರು ಸ್ಪರ್ಧಿಸುವ ವಾರಣಾಸಿಯಲ್ಲಿ ಸಾಕಷ್ಟು ಜನರು ಸ್ಪರ್ಧಿಸದಂತೆ ಮೊದಲೇ ನಿರ್ಣಯಿಸಿದಂತೆ ಕಾಣುತ್ತದೆ. ಕೆಲವರು ಹೊರಗೆ ಕಾಯುತ್ತ ಕಣ್ಣೀರು ಹಾಕಿದ್ದನ್ನು ಕೂಡ ಕಂಡೆ ಎಂದು ಶ್ಯಾಮ್ ರಂಗೀಲಾ ತನ್ನ ಮರಿ ವೀಡಿಯೋದಲ್ಲಿ ವಿಷಯ ಪ್ರಕಟಿಸಿದ್ದಾರೆ.
