ಮುಂಬಯಿ ಟ್ರಾಫಿಕ್, ದಿಲ್ಲಿ ಮಾಲಿನ್ಯ ಕಷ್ಟ ಕಷ್ಟ:ಉಸಿರಾಡಲಾಗದೆ ರಸ್ತೆಯಲ್ಲಿ ಸಿಕ್ಕು ಒದ್ದಾಡುವ ಸ್ಥಿತಿ

ಭಾರತದ ಆರ್ಥಿಕ ರಾಜಧಾನಿ ಎನ್ನಲಾದ ಮುಂಬಯಿ ಜಗತ್ತಿನ ಅತಿ ಟ್ರಾಫಿಕ್ ಒತ್ತಡದ ನಗರವಾಗಿ ಮೊದಲ ಸ್ಥಾನದಲ್ಲಿದೆ.

ಆ ಕಾರಣಕ್ಕೆ ಜನರು, ಕೆಲಸದ ಮಾನಸಿಕ ಒತ್ತಡಕ್ಕೆ ಒಳಗಾಗುವುದಾಗಿಯೂ ಹೇಳಲಾಗಿದೆ. ಅತಿ ಟ್ರಾಫಿಕ್‌ನ ಎಲ್ಲ ನಗರಗಳವರು ಹೆಚ್ಚು ಕಲುಷಿತ ಗಾಳಿ ಸೇವಿಸಬೇಕಾದ ಸ್ಥಿತಿ ಎದುರಿಸುತ್ತಿರುವುದಾಗಿ ಹೇಳಲಾಗಿದೆ.ಈ ನಿಟ್ಟಿನಲ್ಲಿ ನೈಜೀರಿಯಾದ ಲಾಗೋಸ್, ಪಿಲಿಪ್ಪೀನ್ಸ್ ರಾಜಧಾನಿ ಮನಿಲಾ, ಭಾರತದ ರಾಜಧಾನಿ ದಿಲ್ಲಿ, ಇರಾಕ್ ರಾಜಧಾನಿ ಬಾಗ್ದಾದ್, ಅಫಘಾನಿಸ್ತಾನದ ಕಾಬೂಲ್ ಕ್ರಮವಾಗಿ 2, 3, 4, 5 ಮತ್ತು 6ನೇ ಸ್ಥಾನಗಳಲ್ಲಿ ಇವೆ.

mumbai traffic

ಈ ಎಲ್ಲ ನಗರಗಳವರು ಆರೋಗ್ಯದಲ್ಲಿ ಏರುಪೇರು ಮತ್ತು ಮಾನಸಿಕ ಉದ್ವೇಗ, ಒತ್ತಡ ಮತ್ತು ಕೆಲಸ ನಷ್ಟಕ್ಕೆ ಒಳಗಾಗುವುದಾಗಿ ಹೇಳಲಾಗಿದೆ. ಲಾಗೋಸ್ ಆಫ್ರಿಕಾದ ಎರಡನೆಯ ಅತಿ ದೊಡ್ಡ ನಗರವಾಗಿದ್ದು, ಇಲ್ಲಿ ನೀರು ಮತ್ತು ಮನೆ ಸಿಗದಿರುವುದು ಕೂಡ ದೊಡ್ಡ ಸಮಸ್ಯೆಯೆನಿಸಿದೆ. ಈ ಎಲ್ಲ ನಗರಗಳವರು ಟ್ರಾಫಿಕಿನಲ್ಲಿ ಸಿಕ್ಕು ಪರಿತಪಿಸುವುದರಲ್ಲಿ ಮೊದಲ ಸ್ಥಾನದಲ್ಲಿ ಇದ್ದಾರೆ. ದಿಲ್ಲಿಯು ಅತಿ ಮಾಲಿನ್ಯದ ನಗರವಾಗಿದ್ದು, ಇಲ್ಲಿ ಉಸಿರಾಟದ ಸಮಸ್ಯೆ ಹೆಚ್ಚಾಗುತ್ತಲೇ ಇದೆ.

govt women polytechnic

Related Posts

Leave a Reply

Your email address will not be published.