HomeFresh Newsಮಂಗಳೂರು: ನಿಪ್ಪಾನ್  ಫೈಂಟರ್ಸ್  ಮೀಟ್ ಕಾರ್ಯಕ್ರಮ

ಮಂಗಳೂರು: ನಿಪ್ಪಾನ್  ಫೈಂಟರ್ಸ್  ಮೀಟ್ ಕಾರ್ಯಕ್ರಮ

ಏಷ್ಯಾದ ನಂಬರ್ ವನ್ ಫೈಂಟ್ ಆಗಿರುವ ನಿಪ್ಪಾನ್ ಫೈಂಟ್ಸ್‌ನ ಫೈಂಟರ್‍ಸ್ ಮೀಟ್ ಮಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ನಡೆಯಿತು.

ನಿಪ್ಪಾನ್ ಪೇಂಟ್.. ಪೇಂಟ್ ಉದ್ಯಮದಲ್ಲಿ143 ವರ್ಷಗಳ ಅನುಭವವನ್ನು ಹೊಂದಿದೆ. ಏಷ್ಯಾದಲ್ಲಿಯೇ ನಂಬರ್ ವನ್ ಪೇಂಟ್ ತಯಾರಕ ಮತ್ತು ವಿಶ್ವದ ಪ್ರಮುಖ ಪೇಂಟ್ ತಯಾರಕರಲ್ಲಿ ಮುಂಚೂಣಿಯಲ್ಲಿದೆ. ಇದೀಗ ಮಂಗಳೂರಿನಲ್ಲಿ ಫೈಂಟರ್‍ಸ್ ಮೀಟ್ ನಡೆಯಿತು.

ಈ ಸಂದರ್ಭದಲ್ಲಿ ನಿಪ್ಪಾನ್ ಪೇಂಟ್‌ನ ಬಿಸ್‌ನೆಸ್ ಡೆವಲಪ್‌ಮೆಂಟ್ ಎಕ್ಸಿಕ್ಯೂಟಿವ್ ಪ್ರಥಮ್ ಶೆಟ್ಟಿ ಅವರು ಮಾತನಾಡಿ, ನಿಪ್ಪಾನ್ ಪೇಂಟ್ ಅತ್ಯುತ್ತಮ ಗುಣಮಟ್ಟವನ್ನು ಹೊಂದಿದ್ದು, ವಿಶ್ವದರ್ಜೆಯ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತದೆ ಎಂದ ಅವರು ನಿಪ್ಪಾನ್ ಫೈಂಟ್‌ಗಳ ನಾವೀನ್ಯತೆಗಳ ಬಗ್ಗೆ ವಿವರಿಸಿದರು.

ನಿಪ್ಪಾನ್ ಫೈಂಟ್‌ನ ಮಂಗಳೂರಿನ ಸೇಲ್ಸ್ ಆಫೀಸರ್ ಅಕ್ಷಯ್ ಕುಮಾರ್ ಅವರು ಮಾತನಾಡಿ, ಭಾರತೀಯ ಮಾರುಕಟ್ಟೆಯಲ್ಲಿ ನಿಪ್ಪಾನ್ ಪೇಂಟ್ ತನ್ನದೆ ಆದ ಚಾಪನ್ನು ಮೂಡಿಸಿದ್ದು, ಗ್ರಾಹಕರ ಅಗತ್ಯತೆಗಳನ್ನು ಪೂರೈಸಲು ನಾವು ಸಿದ್ಧರಿದ್ದೇವೆ ಎಂದರು.

ಮಂಗಳೂರಿನ ವೆಲೆನ್ಸಿಯಾದ ಸೈಂಟ್ ಆಂಥೋನಿಯ ಮಾಲಕರಾದ ಕಾಲಿನ್ ಕಾರ್ಡೊಜಾ ಅವರು ಮಾತನಾಡಿ, ಮಾರುಕಟ್ಟೆಯಲ್ಲಿ ನಿಪ್ಪಾನ್ ಫೈಂಟ್ ಉತ್ಪನ್ನಗಳ ಬಗ್ಗೆ ಬಹಳಷ್ಟು ಬೇಡಿಕೆಗಳಿದ್ದು, ಮಾರುಕಟ್ಟೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡು ಹೋಗಲು ನಿಮ್ಮ ಸಹಕಾರ ಎಂದು ಹೇಳಿದರು.

ಇದೇ ವೇಳೆ ನಿಪ್ಪಾನ್ ಫೈಂಟ್‌ನ ಸೇಲ್ಸ್ ವಿಭಾಗದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದವರಿಗೆ ಬಹುಮಾನ ವಿತರಿಸಲಾಯಿತು.

ಇದೇ ವೇಳೆ ಕೇಕ್ ಕತ್ತರಿಸಿ ಸಂಭ್ರಮಾಚರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಏರಿಯಾ ಸೇಲ್ಸ್ ಮ್ಯಾನೇಜರ್ ಗುಣಪಾಲ್ ಆಳ್ವ, ಬಿಡಿಎಮ್ ಶ್ರೀಕಾಂತ್, ದೇವರಾಜ್, ರಾಕೇಶ್ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments