HomeFresh Newsಉಡುಪಿ ಮಲಬಾರ್ ಗೋಲ್ಡ್‌ ನಲ್ಲಿ ‘ನುವಾ’ ವಜ್ರಾಭರಣ ಅನಾವರಣ

ಉಡುಪಿ ಮಲಬಾರ್ ಗೋಲ್ಡ್‌ ನಲ್ಲಿ ‘ನುವಾ’ ವಜ್ರಾಭರಣ ಅನಾವರಣ

ಉಡುಪಿ: ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಶಾಖೆಯಲ್ಲಿ ಮೈನ್ ಬ್ರಾಂಡಿನ ನೂತನ ವಜ್ರಾಭರಣ ‘ನುವಾ’ವನ್ನು ಶನಿವಾರ ಅನಾವರಣಗೊಳಿಸಲಾಯಿತು.


ರೂಪದರ್ಶಿಗಳಾದ ನಿಧಿ ಸುವರ್ಣ, ಅನುಷಾ ಎಸ್.ಉಲ್ಲಾಳ್, ನಿಹಾರಿಕಾ ಶೆಟ್ಟಿ, ಶ್ರಾವ್ಯ ಪ್ರವೀಣ್ ಈ ವಿನೂತನ ವಜ್ರಾಭರಣ ನುವಾವನ್ನು ಅನಾವರಣಗೊಳಿಸಿದರು. ಬಳಿಕ ಮಾತನಾಡಿದ ಅನುಷಾ ಎಸ್.ಉಲ್ಲಾಳ್, ಮಲಬಾರ್ ಗೋಲ್ಡ್‌ನಲ್ಲಿ ವಜ್ರಾಭರಣಗಳ ಸಂಗ್ರಹ ವೈವಿಧ್ಯಮಯ ಹಾಗೂ ಆಕರ್ಷಣೀಯವಾಗಿದೆ. ಇಲ್ಲಿನ ಸಿಬ್ಬಂದಿಗಳ ಸೇವೆ ಕೂಡ ಅತ್ಯುತ್ತಮವಾಗಿದೆ. ಇಲ್ಲಿನ ಆಭರಣಗಳು ಕಲಾತ್ಮಕವಾಗಿ ಎಲ್ಲರ ಮನ ಮುಟ್ಟುತ್ತದೆ ಎಂದು ಹೇಳಿದರು.


ಸಿಬ್ಬಂದಿ ಹರೀಶ್ ನುವಾ ಬಗ್ಗೆ ಮಾಹಿತಿ ನೀಡಿ, ನುವಾ ನ್ಯಾಚುರಲ್ ಡೈಮಂಡ್ಸ್ ಆಭರಣ ಆಗಿದ್ದು, ಇದರಲ್ಲಿ ವೈವಿಧ್ಯಮಯ ಡಿಸೈನ್‌ಗಳಿವೆ. ಕಳೆದ ಮೂರು ವರ್ಷಗಳಿಂದ ಈ ಬ್ರಾಂಡಿನ ಹೊಸ ಹೊಸ ಡಿಸೈನಿನ ವಜ್ರಾಭರಣಗಳನ್ನು ಅನಾವರಣ ಮಾಡುತ್ತಿದ್ದೇವೆ. ಸಾಕಷ್ಟು ಆಕರ್ಷಕ ರೀತಿಯ ಈ ವಜ್ರಾಭರಣವು 50 ಸಾವಿರ ರೂ.ನಿಂದ ಆರಂಭವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಉಡುಪಿ ಶಾಖಾ ವ್ಯವಸ್ಥಾಪಕರಾದ ಪುರಂದರ ತಿಂಗಳಾಯ,ಸಂದೀಪ್ ಸಫಲ್ಯ, ಮಾರುಕಟ್ಟೆ ವ್ಯವಸ್ಥಾಪಕ ತಂಝೀಮ್ ಶಿರ್ವ ಮೊದಲಾದವರು ಉಪಸ್ಥಿತರಿದ್ದರು. ವಿಘ್ನೇಶ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments