HomeFresh Newsಜೈಲು ಬಂಧಿತರಿಗೆ ಮೊಬಾಯಿಲ್ ಮತ್ತು ಮಾದಕ ವಸ್ತು ಪೂರೈಕೆ ಅಸ್ಸಾಂ ಜೈಲಿನ ನಾಲ್ವರು ಸಿಬ್ಬಂದಿಯ ಬಂಧನ

ಜೈಲು ಬಂಧಿತರಿಗೆ ಮೊಬಾಯಿಲ್ ಮತ್ತು ಮಾದಕ ವಸ್ತು ಪೂರೈಕೆ ಅಸ್ಸಾಂ ಜೈಲಿನ ನಾಲ್ವರು ಸಿಬ್ಬಂದಿಯ ಬಂಧನ

ಜೈಲು ಬಂಧಿತರಿಗೆ ಮೊಬಾಯಿಲ್ ಮತ್ತು ಮಾದಕ ವಸ್ತುಗಳನ್ನು ಪೂರೈಸುತ್ತಿದ್ದ ಅಸ್ಸಾಂ ಜೈಲಿನ ನಾಲ್ವರು ಸಿಬ್ಬಂದಿಗಳನ್ನು ಬಂಧಿಸಲಾಗಿದೆ.
ಅಸ್ಸಾಂ ರಾಜ್ಯದ ದಿಬ್ರುಗಡ ಕೇಂದ್ರೀಯ ಸೆರೆಮನೆಯ ನಾಲ್ಕು ಮಂದಿ ಸಿಬ್ಬಂದಿ ಬಂಧಿಸಲ್ಪಟ್ಟಿದ್ದಾರೆ; ಅವರನ್ನೂ ಅದೇ ಜೈಲಲ್ಲಿ ಇಡಬಹುದು ಎಂದು ಹೇಳಲಾಗಿದೆ. ಜೈಲಲ್ಲಿರುವ ಕೈದಿಗಳಿಗೆ ಅವರು ಮೊಬಾಯಿಲ್ ಹಾಗೂ ಮಾದಕ ವಸ್ತುಗಳನ್ನು ಪೂರೈಸಿದ್ದಾರೆ. ಕೊನೆಗೆ ಮಾಲು ಸಮೇತ ಸಿಕ್ಕಿಬಿದ್ದಿದ್ದಾರೆ. ಜೈಲಿನಲ್ಲಿ ೨೯ ಮೊಬಾಯಿಲ್ ಫೋನುಗಳು, ಚಾರ್ಜರ್‌ಗಳು, ಸಿಮ್ ಕಾರ್ಡುಗಳು, ನಿಷೇಧಿತ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ರುದ್ರ ದೇವೋರಿ, ಸುಭಾಷಿಸ್ ಘೋಷ್, ಮಾಸಿದ್ ಆಲಿ ಲಸ್ಕರ್ ಮತ್ತು ಬಿಸ್ವಜಿತ್ ಬರೂವಾ ಬಂಧಿತ ಜೈಲು ಸಿಬ್ಬಂದಿಯಾಗಿದ್ದಾರೆ. ಸೆರೆಯಾಳುಗಳಿಗೆ ಸದಾ ಬೇಡದ್ದು ಜೈಲು ಸಿಬ್ಬಂದಿಯಿಂದಲೇ ಪೂರೈಕೆಯಾಗುತ್ತದೆ ಎಂಬ ದೂರಿನ ಮೇಲೆ ಶ್ರಿಬುಮಿ ಜಿಲ್ಲಾ ಎಸ್‌ಎಸ್‌ಪಿ ಲೀನಾ ಡೋಲೆಯವರ ನೃತೃತ್ವದಲ್ಲಿ ಜೈಲಿನ ಮೇಲೆ ದಾಳಿ ನಡೆಯಿತು. ತನಿಖೆ ಮುಂದುವರಿದಿದ್ದು, ಜೈಲು ಸಿಬ್ಬಂದಿ ಬಹು ಕಾಲದಿಂದ ಈ ಅಕ್ರಮದಲ್ಲಿ ತೊಡಗಿರುವುದು ತಿಳಿದು ಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments