ಶ್ರೀ ದೇವಿ ಫ್ರೆಂಡ್ಸ್ ಸರ್ಕಲ್ ಮತ್ತು ದಾನಿಗಳ ಕೊಡುಗೆ : ಪಚ್ಚನಾಡಿಯಲ್ಲಿ ಸೋಮವ್ವ ಕುಟುಂಬದ ಮನೆ ಪುನರ್ ನಿರ್ಮಾಣ

ಪಚ್ಚನಾಡಿ ಆಶ್ರಯ ಕಾಲೋನಿಯ ಸೋಮವ್ವ ಕುಟುಂಬದ ಮನೆ ಪುನರ್ ನಿರ್ಮಾಣ ಕಾರ್ಯದ ಪ್ರಯುಕ್ತ ಶ್ರಮದಾನ ನಡೆಯಿತು.

ಶ್ರೀ ದೇವಿ ಫ್ರೆಂಡ್ಸ್ ಸರ್ಕಲ್ ವತಿಯಿಂದ ಊರ ಪರವೂರ ದಾನಿಗಳ ಕೊಡುಗೆಯಿಂದ ಸೋಮವ್ವ ಕುಟುಂಬದ ಮನೆ ಪುನರ್ ನಿರ್ಮಾಣ ಕಾರ್ಯದ ಪ್ರಯುಕ್ತ ಎಲೆಕ್ಟ್ರಿಷನ್ ಹಾಗೂ ಪ್ಲಮ್ಬಿಂಗ್ ಕೆಲಸವು ಶ್ರಮದಾನದ ಮೂಲಕ ನಡೆಯಿತು. ಶ್ರಮದಾನದಲ್ಲಿ ಭಾಗವಹಿಸಿದ ಎಲ್ಲಾ ಎಲೆಕ್ಟ್ರಿಷನ್ ಹಾಗೂ ಪ್ಲಂಬರ್ ಗಳಿಗೆ ಸೋಮವ್ವ ಕುಟುಂಬ ಹಾಗೂ ಶ್ರೀ ದೇವಿ ಫ್ರೆಂಡ್ಸ್ ಸರ್ಕಲ್ (ರಿ) ಪಚ್ಚನಾಡಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.
