ಮಂಗಳೂರಿನ ಪಚ್ಚನಾಡಿ ಕಾರ್ಮಿಕ ನಗರದಲ್ಲಿಅಕ್ರಮ ಸರ್ಕಾರಿ ನಿವೇಶನ ಹಂಚಿಕೆ ವಿರುದ್ಧ ಪ್ರತಿಭಟನೆ

ಮಂಗಳೂರಿನ ಪಚ್ಚನಾಡಿ ಕಾರ್ಮಿಕ ನಗರದಲ್ಲಿ ಅಕ್ರಮ ಸರಕಾರಿ ನಿವೇಶನ ಹಂಚಿಕೆ ವಿರುದ್ಧ ಸಾರ್ವಜನಿಕರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಪಚ್ಚನಾಡಿ ಗ್ರಾಮದ ಕಾರ್ಮಿಕನಗರದ ಸರ್ವೇ ನಂ 158ರಲ್ಲಿ ಸುಮಾರು ಎರಡು ಎಕರೆ ಸರಕಾರಿ ಜಾಗವಿದ್ದು ಸದ್ರಿ ಸ್ಥಳದಲ್ಲಿ ಸುಮಾರು 50 ವರುಷಗಳಿಂದ ಒಂದು ಸಾರ್ವಜನಿಕ ವೇದಿಕೆಯಿದೆ. ಈ ವೇದಿಕೆಯಲ್ಲಿ ಸಾರ್ವಜನಿಕ ಕಾರ್ಯಕ್ರಮಗಳು ನಡೆಯುತ್ತಿದ್ದವು ಮತ್ತು ಸ್ಥಳೀಯ ಹುಡುಗರು ಈ ಜಾಗವನ್ನು ಆಟದ ಮೈದಾನವಾಗಿ ಉಪಯೋಗಿಸುತ್ತಿದ್ದರು. ಈ ರೀತಿಯಲ್ಲಿ ಸರಕಾರಿ ಭೂಮಿ ಸಾರ್ವಜನಿಕರಿಗೆ ಉಪಯೋಗವಾಗುತ್ತಿತ್ತು.

ಈ ಸರಕಾರಿ ಭೂಮಿಯಲ್ಲಿ ಕೆಲವು ದಿನಗಳ ಹಿಂದೆ ಕೆಂಪು ಕಲ್ಲುಗಳನ್ನು ಹಾಗೂ ಮರಳನ್ನು ಅಕ್ರಮವಾಗಿ ಶೇಖರಿಸಲಾಗಿದ್ದು, ನಿನ್ನೆ ಸಂಜೆ ಸ್ಥಳದಲ್ಲಿ ಅಕ್ರಮ ಮನೆ ನಿರ್ಮಾಣದ ಅಡಿಪಾಯಕ್ಕೆ ಗುರುತು ಹಾಕಿರುವುದು ಸಾರ್ವಜನಿಕರಿಗೆ ಸರಕಾರಿ ಭೂಮಿ ಕಬಳಿಕೆಯ ಹುನ್ನಾರದ ಬಗ್ಗೆ ತಿಳಿದು ಬಂದಿದ್ದು, ಸ್ಥಳೀಯರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು. ಸಮಾಜ ಸೇವಕರ ಮೂಲಕ ಸರಕಾರಿ ಅಧಿಕಾರಿಗಳಿಗೆ ವಿಷಯ ತಿಳಿಸಿ, ಅಕ್ರಮ ಭೂ ಕಬಳಿಕೆ ವಿರುದ್ಧ ದೂರನ್ನು ಸಲ್ಲಿಸಿ ಸಾಂಕೇತಿಕವಾಗಿ ಪ್ರತಿಭಟಿಸಿ, ಸರಕಾರಿ ಭೂಮಿ ಅಕ್ರಮ ಪರಬಾರೆ ವಿರುದ್ಧ ಕಠಿಣ ಕ್ರಮ ಕೈಗೊಂಡು ಸರಕಾರಿ ಭೂಮಿಯನ್ನು ಉಳಿಸಿ ಸಾರ್ವಜನಿಕರಿಗೆ ಆಟದ ಮೈದಾನ ಅಥವಾ ಉದ್ಯಾನವನದಂತಹ ಮೂಲಭೂತ ಸೌಕರ್ಯಕ್ಕೆ ಸದ್ರಿ ಸ್ಥಳವನ್ನು ಮೀಸಲಿಡಬೇಕೆಂದು ಒತ್ತಾಯಿಸಿದರು.

ಸದ್ರಿ ಸ್ಥಳಕ್ಕೆ ಭೇಟಿ ನೀಡಿದ ಸ್ಥಳೀಯ ಜನಪ್ರತಿನಿಧಿ ಸಂಗೀತ ಆರ್ ನಾಯಕ್ ಅಕ್ರಮ ಮನೆ ನಿರ್ಮಾಣ ನನ್ನ ಗಮನಕ್ಕೆ ಬಂದಿಲ್ಲ. ಸಾರ್ವಜನಿಕರ ಬೇಡಿಕೆಯಂತೆ ಈ ಸ್ಥಳದಲ್ಲಿ ಆಟದ ಮೈದಾನ ನಿರ್ಮಿಸಿ ಕೊಡುವ ಭರವಸೆ ಕೊಟ್ಟರು.್ರ ಸ್ಥಳಕ್ಕೆ ಉಪತಹಶೀಲ್ದಾರ್ ಶಿವಪ್ರಸಾದ್, ಗ್ರಾಮಕಾರಣಿಕರು, ಮಹಾನಗರ ಪಾಲಿಕೆ ಅಧಿಕಾರಿಗಳು, ಪೆÇಲೀಸ್ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲಿಸಿ, ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ಬಿ ಎಸ್ ಚಂದ್ರು, ಮೋಹನ್ ಪಚ್ಚನಾಡಿ, ಮ್ಯಾಕ್ಸಿ , ಇತ್ತಿಯಮ್, ಸುಧಾಕರ್ ಅಂಚನ್, ರಘುವೀರ್ ಗಟ್ಟಿ, ಗಾಡ್ವಿನ್ ಅಲ್ಲದೆ ನೂರಾರು ಮಹಿಳೆಯರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು