ಉಳ್ಳಾಲ ತಾಲ್ಲೂಕು ಪೆರ್ಮನ್ನೂರು ಕಲ್ಲಾಪು ನಿವಾಸಿ ಪದ್ಮನಾಭ ಮೊನೆಪು (70) ನಿಧನ

ಉಳ್ಳಾಲ ತಾಲ್ಲೂಕು ಪೆರ್ಮನ್ನೂರು ಕಲ್ಲಾಪು ನಿವಾಸಿ ಪದ್ಮನಾಭ ಮೊನೆಪು (70). ದಿನಾಂಕ 17ರಂದು ಅಲ್ಪ ಕಾಲದ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅವರು ಅಗಲಿದ್ದಾರೆ.
ಅತ್ಯಂತ ಸೌಮ್ಯ ಸ್ವಭಾವದ ಪದ್ಮನಾಭ ಮೊನೆಪು ಸಾಮಾಜಿಕ ಕಾರ್ಯಕರ್ತರು ಮತ್ತು ಸಿ. ಪಿ. ಎಂ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿದ್ದು ಪಕ್ಷದ ವಿವಿಧ ಚಟುವಟಿಕೆಯಲ್ಲಿ ಬಾಗವಹಿಸುತ್ತಿದ್ದರು. ಸ್ಥಳೀಯ ವಿಜಯ ಮಿತ್ರ ಮಂಡಳಿ ಸಂಸ್ಥೆಯ ಸ್ಥಾಪಕ ಸದಸ್ಯರಲ್ಲಿ ಇವರು ಕೂಡ ಒಬ್ಬರಾಗಿದ್ದರು.
