ಮೀನಿನ ನೀರು ಚೆಲ್ಲಿಕೊಂಡು ಹೋಗುತ್ತಿದ್ದ ವಾಹನಗಳಿಗೆ ದಂಡ

ಮೀನು ಸಾಗಾಟ ವಾಹನಗಳು ಹೆದ್ದಾರಿ ಎಲ್ಲೆಡೆ ಮೀನಿನ ನೀರನ್ನು ಚೆಲ್ಲಿಕೊಂಡು ಹೋಗುತ್ತಿದ್ದ ವಾಹನಗಳನ್ನು ಉಚ್ವಿಲದಲ್ಲಿ ತಡೆದ ಪೊಲೀಸರು ದಂಡ ವಿಧಿಸಿದ್ದಾರೆ.
ಕೇರಳ ರಾಜ್ಯದಲ್ಲಿ ಹೆದ್ದಾರಿಯಲ್ಲಿ ಮೀನಿನ ನೀರು ಚೆಲ್ಲಿಕೊಂಡು ಹೋಗುವ ವಾಹನಗಳ ವಿರುದ್ಧ ಕಠಿಣ ಕಾನೂನು ಕ್ರಮ ಜಾರಿಯಲ್ಲಿ ಇರುವುದರಿಂದ ಅಲ್ಲಿ ಯಾವುದೇ ಕಾರಣಕ್ಕೆ ಹೆದ್ದಾರಿಗೆ ಚೆಲ್ಲದ ಮೀನಿನ ನೀರು ಇಲ್ಲಿ ಮಾತ್ರ ಯಾವುದೇ ಲಂಗು ಲಗಾಮು ಇಲ್ಲದೆ ಹೆದ್ದಾರಿಗೆ ಚೆಲ್ಲಿಕೊಂಡು ಹೋಗುವುದರಿಂದ ಪಾದಚಾರಿಗಳು ಸಹಿತ ಬೈಕ್ ಸವಾರರು ನಿತ್ಯ ಸಮಸ್ಯೆ ಅನುಭವಿಸುವಂತ್ತಾತ್ತಿದೆ. ಶಾಲಾ ಮಕ್ಕಳು ಸಹಿತ ಧಾರ್ಮಿಕ ಕ್ಷೇತ್ರಗಳಿಗೆ ಹೋಗುವ ಮಂದಿ ಮೀನಿನ ನೀರನ್ನು ಎರಚಿಸಿಕೊಂಡ ಪರಿಣಾಮ ಮರಳಿ ಮನೆಗೆ ತೆರಳುವ ಅನಿವಾರ್ಯ ಸ್ಥಿತಿ ನಿರ್ಮಾಣವಾಗುತ್ತಿದ್ದು, ಈ ಬಗ್ಗೆ ಜಿಲ್ಲಾಢಳಿತ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಮೂಲಕ ಸಾರ್ವಜನಿಕರ ಸಮಸ್ಯೆಗೆ ಅಂತ್ಯವಾಡ ಬೇಕಾಗಿದೆ ಎಂಬುದು ಸಾರ್ವಜನಿಕರ ಆಗ್ರಹ.
